More

    ಕುಶಲಕರ್ವಿುಗಳಿಗೆ ವಿಶ್ವಕರ್ಮ ವರ; 13 ಸಾವಿರ ಕೋಟಿ ರೂ. ಮೊತ್ತದ ವಿಶ್ವಕರ್ಮ ಯೋಜನೆಗೆ ಮೋದಿ ಚಾಲನೆ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭಾನುವಾರ ‘ಪ್ರಧಾನಮಂತ್ರಿ ವಿಶ್ವಕರ್ಮ’ ಯೋಜನೆ ಜಾರಿಗೆ ತರುವ ಮೂಲಕ ದೇಶದ ಸಾಂಪ್ರದಾಯಿಕ ಕುಶಲಕರ್ವಿುಗಳ ಪಾಲಿಗೆ ವಿಶ್ವಕರ್ಮ ಜಯಂತಿಯನ್ನು ಸ್ಮರಣೀಯಗೊಳಿಸಿದರು. 13,000 ಕೋಟಿ ರೂ. ಮೊತ್ತದ ಈ ಮಹತ್ವಾಕಾಂಕ್ಷೆಯ ಯೋಜನೆ ಮೋದಿಯವರ 73ನೇ ಜನ್ಮದಿನದಂದೇ ಚಾಲನೆ ಪಡೆದಿರುವುದು ಮತ್ತೊಂದು ವಿಶೇಷ.

    ಸಾಂಪ್ರದಾಯಿಕ ಕುಶಲಕರ್ವಿುಗಳು ಮತ್ತು ಕೈಕಸಬುದಾರರು ಈ ಯೋಜನೆಯಡಿ ಯಾವುದೇ ಜಾಮೀನಿನ (ಮೇಲಾಧಾರ) ಅಗತ್ಯವಿಲ್ಲದೆ ಕನಿಷ್ಠ ಬಡ್ಡಿ ದರದಲ್ಲಿ ಸಾಲವನ್ನು ಪಡೆಯಬಹುದಾಗಿದೆ. ನೇಕಾರರು, ಅಕ್ಕಸಾಲಿಗರು, ಕಮ್ಮಾರರು, ಅಗಸರು ಮತ್ತು ಕ್ಷೌರಿಕರ ಸಹಿತ ಸುಮಾರು 30 ಲಕ್ಷ ಸಾಂಪ್ರದಾಯಿಕ ಕೆಲಸಗಾರರು ಐದು ವರ್ಷದ ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ. ಸಾಂಪ್ರದಾಯಿಕ ಕರಕುಶಲ ಉತ್ಪನ್ನಗಳ ಲಭ್ಯತೆ ಹಾಗೂ ಗುಣಮಟ್ಟವನ್ನು ಹೆಚ್ಚಿಸುವುದು ಯೋಜನೆಯ ಗುರಿಯಾಗಿದೆ.

    ರೂ15,000 ಅನುದಾನ: ಟೂಲ್ಕಿಟ್ ಉತ್ತೇಜನದ ರೂಪದಲ್ಲಿ 15,000 ರೂಪಾಯಿ ಅನುದಾನವನ್ನು ಒದಗಿಸಲಾಗುತ್ತದೆ. ಅಲ್ಲದೆ, ಡಿಜಿಟಲ್ ವ್ಯವಹಾರದ ಉತ್ತೇಜಕವಾಗಿ ಪ್ರತಿ ತಿಂಗಳು ನೂರು ರೂಪಾಯಿವರೆಗಿನ ವ್ಯವಹಾರಗಳಿಗೆ ಒಂದು ರೂಪಾಯಿ ಇನ್ಸೆಂಟಿವ್ ಕೊಡಲು ಯೋಜನೆ ನಿರ್ಧರಿಸಿದೆ. ರಾಷ್ಟ್ರೀಯ ಮಾರುಕಟ್ಟೆ ಸಮಿತಿಯು (ಎನ್​ಸಿಎಂ) ಗುಣಮಟ್ಟ ಪ್ರಮಾಣೀಕರಣ, ಬ್ರಾಂಡಿಂಗ್ ಮತ್ತು ಪ್ರಮೋಷನ್, ಇ-ಕಾಮರ್ಸ್ ಲಿಂಕೇಜ್, ವಾಣಿಜ್ಯ ಮೇಳಗಳ ಜಾಹೀರಾತು, ಪ್ರಚಾರ ಮತ್ತಿತರ ಮಾರುಕಟ್ಟೆ ಚಟá-ವಟಿಕೆಗಳ ಸೇವೆಗಳನ್ನು ಒದಗಿಸಲಿದೆ.

    ದೇಶದ ಸಂಸ್ಕೃತಿ, ಪರಂಪರೆ: ಭಾರತ ಎನ್ನುವುದು ದೇಶದ ಪರಂಪರೆ, ಸಂಸ್ಕೃತಿ, ಭೂತ ಮತ್ತು ಭವಿಷ್ಯಕ್ಕೆ ಸಂಬಂಧಪಟ್ಟಿದ್ದಾಗಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ. ಕೇರಳ ರಾಜಧಾನಿ ತಿರುವನಂತಪುರದಲ್ಲಿ ಪಿಎಂ ವಿಶ್ವಕರ್ಮ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಜೈಶಂಕರ್, ಕಾಲಾಂತರದಲ್ಲಿ ಅನೇಕ ದೇಶಗಳಲ್ಲಿ ಪಾರಂಪರಿಕ ಕೌಶಲ ಹಾಗೂ ಪ್ರತಿಭೆಗಳು ನಾಶವಾಗಿವೆ ಎಂದರು. ಜಾಗತೀಕರಣ, ಕೈಗಾರಿಕೀಕರಣ, ಪರಂಪರೆಗಳ ಕುರಿತ ಜನರ ಮರೆವು ಮತ್ತು ಪರಂಪರೆಯನ್ನು ಮುಂದಿನ ತಲೆಮಾರಿಗೆ ದಾಟಿಸದಿರುವುದು ಮೊದಲಾದವುಗಳು ಇದಕ್ಕೆ ಕಾರಣ ಎಂದರು. ಜಗತ್ತಿನ ಅತಿ ಪ್ರಾಚೀನ ನಾಗರಿಕತೆಗಳಲ್ಲಿ ಒಂದಾದ ಭಾರತದಲ್ಲಿ ಕೂಡ ಅದು ಸಂಭವಿಸಬಾರದು ಎಂದು ಹೇಳಿದರು.

    ಜಾಮೀನುರಹಿತ ಸಾಲ

    ಈ ಯೋಜನೆಯಡಿ ಮೊದಲ ಕಂತಿನಲ್ಲಿ 18 ತಿಂಗಳ ಮರುಪಾವತಿಯ 1 ಲಕ್ಷ ರೂ. ಉದ್ಯಮ ಅಭಿವೃದ್ಧಿ ಸಾಲ ಹಾಗೂ ಎರಡನೇ ಕಂತಿನಲ್ಲಿ 30 ತಿಂಗಳ ಮರುಪಾವತಿಯ 2 ಲಕ್ಷ ರೂ. ಸಾಲವನ್ನು ಒದಗಿಸಲಾಗುತ್ತದೆ. ಇದಕ್ಕೆ ಯಾವುದೇ ಮೇಲಾಧಾರ ನೀಡಬೇಕಾದ ಅಗತ್ಯವಿಲ್ಲ. ಫಲಾನುಭವಿಗಳಿಗೆ ಶೇಕಡಾ 5 ಬಡ್ಡಿ ವಿಧಿಸಲಾಗುತ್ತದೆ. ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವಾಲಯ ಶೇ. 8ರವರೆಗಿನ ಗರಿಷ್ಠ ಬಡ್ಡಿಯ ಕೊಡುಗೆಯನ್ನು ನೀಡಲಿದೆ. ಸಾಲದ ಗ್ಯಾರಂಟಿ ಶುಲ್ಕವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ.

    ಸ್ಥಳೀಯ ಉತ್ಪನ್ನ ಖರೀದಿಸಿ

    ನವದೆಹಲಿ: ಕುಶಲಕರ್ವಿುಗಳ ಉನ್ನತಿಗೆ ಸರ್ಕಾರ ಬದ್ಧವಾಗಿದ್ದು, ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯು (ಪಿಎಂವಿವೈ) ಆಧುನಿಕ ಮಾರುಕಟ್ಟೆಗಾಗಿ ತಂತ್ರಜ್ಞಾನದೊಂದಿಗೆ ಕುಶಲಕರ್ವಿುಗಳ ಕೌಶಲ ವರ್ಧಿಸುವ ಉದ್ದೇಶ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ‘ಲೋಕಲ್ ಫಾರ್ ವೋಕಲ್’ ಎಂಬ ಸರ್ಕಾರದ ದೃಷ್ಟಿಕೋನಕ್ಕೆ ಒತ್ತು ನೀಡಿ ಮಾತನಾಡಿದ ಪ್ರಧಾನಿ, ಗಣೇಶ ಚತುರ್ಥಿ, ಧನ್ ತೇರಸ್, ದೀಪಾವಳಿ ಮೊದಲಾದ ಹಬ್ಬಗಳಿಗೆ ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವಂತೆ ಜನರಿಗೆ ಕರೆ ನೀಡಿದರು.

    15 ದಿನ ತರಬೇತಿ

    5ರಿಂದ 7 ದಿನದ (40 ಗಂಟೆ) ಮೂಲಭೂತ ತರಬೇತಿ ನಂತರ ಸರ್ಟಿ ಫಿಕೇಟ್ ಮತ್ತು ಐಡಿ ಕಾರ್ಡ್ ಹಾಗೂ ಕೌಶಲ ಪರಿಶೀಲನೆ ಮೂಲಕ ವಿಶ್ವಕರ್ಮ ಎಂದು ಮಾನ್ಯತೆ ನೀಡುವ ಲಾಭವೂ ಈ ಯೋಜನೆಯಲ್ಲಿ ಅಡಕವಾಗಿದೆ. ಆಸಕ್ತ ಅಭ್ಯರ್ಥಿಗಳು 15 ದಿನದ (120 ಗಂಟೆ) ವಿಸ್ತರಿತ ತರಬೇತಿಗೂ ಅರ್ಜಿ ಸಲ್ಲಿಸಬಹುದಾಗಿದ್ದು ಅಭ್ಯರ್ಥಿಗಳಿಗೆ ದೈನಿಕ 500 ರೂಪಾಯಿ ಸ್ಟೈಪೆಂಡ್ ನೀಡಲಾಗá-ತ್ತದೆ. ಫಲಾನುಭವಿಗಳಿಗೆ ನೋಂದಣಿಯ ದಿನದಂದು ಕನಿಷ್ಠ 18 ವರ್ಷ ತುಂಬಿರಬೇಕು.

    ಯಾರು ಅರ್ಹರು

    ಕುಟುಂಬ ಆಧಾರಿತ 18 ಕಸಬುಗಳಲ್ಲಿ ಯಾವುದಾದ ರೊಂದರಲ್ಲಿ, ಅಸಂಘಟಿತ ವಲಯದಲ್ಲಿ, ಸ್ವ-ಉದ್ಯೋಗದ ಆಧಾರದಲ್ಲಿ ತೊಡಗಿಸಿ ಕೊಂಡು ಕೈಗಳು ಮತ್ತು ಸಲಕರಣೆಗಳೊಂದಿಗೆ ಕೆಲಸ ಮಾಡುವ ವ್ಯಕ್ತಿಗಳು ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಯೋಜನೆಯ ಪಟ್ಟಿಯಲ್ಲಿ ಆ ಕಸಬು ನಮೂದಾಗಿರಬೇಕು.

    ಅರುಣಾಚಲ ಸರ್ಕಾರ ನಿರ್ಧಾರ

    ಕೇಂದ್ರ ಸರ್ಕಾರದ ಪಿಎಂ ವಿಶ್ವಕರ್ಮ ಯೋಜನೆಯಲ್ಲಿ ಒಳಗೊಂಡಿರದ ಕುಶಲಕರ್ವಿುಗಳನ್ನು ರಾಜ್ಯದ ಯೋಜನೆಯಲ್ಲಿ ಸೇರಿಸಲು ಅರುಣಾಚಲ ಪ್ರದೇಶ ಸರ್ಕಾರ ನಿರ್ಧರಿಸಿದೆ.

    ರಾಜ್ಯೋತ್ಸವ ರಸಪ್ರಶ್ನೆ - 25

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts