‘ಮೋದಿ, ಕೆಸಿಆರ್​, ಒವೈಸಿ ಎಲ್ಲರೂ ಒಂದೆ, ಅವರಿಂದ ಮೂರ್ಖರಾಗಬೇಡಿ’ ಎಂದು ತೆಲಂಗಾಣ ಜನತೆಗೆ ಎಚ್ಚರಿಸಿದ ರಾಗಾ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಟಿಆರ್​ಎಸ್​ ಮುಖ್ಯಸ್ಥ ಕೆ.ಚಂದ್ರಶೇಖರ ರಾವ್​, ಎಐಎಮ್​ಐಎಮ್​ ಮುಖ್ಯಸ್ಥ ಅಸಾದುದ್ದೀನ್​ ಒವೈಸಿ ಈ ಮೂವರೂ ಒಂದೆ. ಇವರಿಂದ ಮೂರ್ಖರಾಗಬೇಡಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ತೆಲಂಗಾಣದ ಜನತೆಗೆ ಎಚ್ಚರಿಕೆ ಕೊಟ್ಟಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ರಾಹುಲ್​ ಗಾಂಧಿ, ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್​ಎಸ್​) ಬಿಜೆಪಿಯ ‘ಬಿ’ ಟೀಮ್​. ಟಿಆರ್​ಎಸ್​ ಮುಖ್ಯಸ್ಥ ಕೆಸಿಆರ್​ ಪ್ರಧಾನಿಯ ರಬ್ಬರ್​ ಸ್ಟಾಂಪ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತೆಲಂಗಾಣದ ಮಹಾನ್ ನಾಯಕರು ಎನಿಸಿಕೊಂಡಿರುವ ಮೋದಿ, ಕೆಸಿಆರ್ ಮತ್ತು ಒವೈಸಿ ತಿರುಚಿದ ನಾಲಿಗೆಯಿಂದ ಮಾತನಾಡುತ್ತಾರೆ. ಅವರಿಂದ ಮೂರ್ಖರಾಗಬೇಡಿ ಎಂದಿದ್ದಾರೆ.

ಮತ್ತೊಂದು ಟ್ವೀಟ್​ನಲ್ಲಿ, “ಆದರ್ಶ ಮತ್ತು ಮಹಾನ್​ ಕನಸುಗಳನ್ನು ಇಟ್ಟುಕೊಂಡು ತೆಲಂಗಾಣ ಜನಿಸಿತ್ತು. ಆದರೆ, ನಾಲ್ಕು ವರ್ಷದ ಟಿಆರ್​ಎಸ್​/ಬಿಜೆಪಿ ಆಡಳಿತದ ಅಸಾಮರ್ಥ್ಯ, ನಿಷ್ಠುರತೆ ಮತ್ತು ಭ್ರಷ್ಟಾಚಾರದಿಂದ ತೆಲಂಗಾಣ ಜನರನ್ನು ಸಿನಿಕರನ್ನಾಗಿ ಮಾಡಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. (ಏಜೆನ್ಸೀಸ್)

‘ಭಾರತ ನಮ್ಮಪ್ಪನ ದೇಶ’: ಅಸಾದುದ್ದೀನ್​ ಒವೈಸಿ

‘ನಾನು ಭಿಕ್ಷುಕನಲ್ಲ, ಹೋರಾಟಗಾರ’: ಕೆಸಿಆರ್​

‘ತೆಲಂಗಾಣದಲ್ಲಿ ಬಿಜೆಪಿ ಗೆದ್ದರೆ ಒವೈಸಿ ಓಡಿಹೋಗಬೇಕಾಗುತ್ತೆ’