ವಾಷಿಂಗ್ಟನ್: ಕರೊನಾ ಹಾವಳಿಯನ್ನು ಜಾಗತಿಕ ರಾಜಕೀಯ ನಾಯಕರು ನಿರ್ವಹಿಸುತ್ತಿರುವ ರೀತಿಯನ್ನು ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆ ವಿಶ್ಲೇಷಿಸಿದ್ದು, ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯ ನಾಯಕರಾಗಿ ಹೊರ ಹೊಮ್ಮಿದ್ದಾರೆ.
ಜಗತ್ತಿನ ಹಲವು ನಾಯಕರು ಕರೊನಾ ನಿಯಂತ್ರಣದ ವಿಷಯದಲ್ಲಿ ಕೈಗೊಂಡ ನಿರ್ಧಾರಗಳು, ಅವುಗಳ ಅನುಷ್ಠಾನ ಮುಂತಾದವುಗಳನ್ನು ಲೆಕ್ಕ ಹಾಕಿ ಸಂಸ್ಥೆ ಈ ಕುರಿತ ಅಧ್ಯಯನ ವರದಿಯನ್ನು ಬಿಡುಗಡೆ ಮಾಡಿದೆ.
ಇದನ್ನೂ ಓದಿ: ಜೂನ್ 1ರಿಂದ ಭಕ್ತರಿಗೆ ಧರ್ಮಸ್ಥಳ ಮಂಜುನಾಥನ ದರ್ಶನಭಾಗ್ಯ
ಕಳೆದ ಮಾರ್ಚ್ 17ರಂದು ನಡೆದ ಆನ್‌ಲೈನ್ ವೋಟಿಂಗ್‌ನಲ್ಲಿ ಶೇ. 74 ಜನರು ಮೋದಿ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ ಆ ಪ್ರಮಾಣ ಶೇ. 8ರಷ್ಟು ಹೆಚ್ಚಳವಾಗಿ ಶೇ. 82ಕ್ಕೇರಿದೆ.
ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಹಾಗೂ ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲ್‌ರ ಜನಪ್ರಿಯತೆಯೂ ಏರಿಕೆ ಕಂಡಿದೆ. ಶೇ. 55ರಷ್ಟು ಇದ್ದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಜನಪ್ರಿಯತೆ ಶೇ. 62ಕ್ಕೆ ಏರಿದೆ.
ಇದನ್ನೂ ಓದಿ: ಆತಂಕ ಸೃಷ್ಟಿಸಿರುವ ಹೊಳೆನರಸೀಪುರ ಪಿಎಸ್‌ಐ
ಕರೊನಾದಿಂದ ತೀವ್ರ ಬಾಧಿತವಾಗಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜನಪ್ರಿಯತೆ ಶೇ. 3ರಲ್ಲೇ ಇದೆ. ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೊ ಅವರ ಜನಪ್ರಿಯತೆ ಶೇ. 17ರಷ್ಟು ಇಳಿಕೆಯಾಗಿದೆ ಎಂದು ಸಂಸ್ಥೆ ತಿಳಿಸಿದೆ.