Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ನೇತಾಜಿ ಕನಸು ನನಸು

Monday, 22.10.2018, 2:04 AM       No Comments

ಆಜಾದ್ ಹಿಂದ್ಃ75

ನವದೆಹಲಿ: ನೇತಾಜಿ ಸುಭಾಷ್​ಚಂದ್ರ ಬೋಸ್ ಸ್ಥಾಪಿಸಿದ್ದ ಆಜಾದ್ ಹಿಂದ್ ಸರ್ಕಾರದ 75ನೇ ವರ್ಷಾಚರಣೆ ಅಂಗವಾಗಿ ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಧ್ವಜಾರೋಹಣ ನೆರವೇರಿಸಿದರು.

ದೇಶದ ಸ್ವಾತಂತ್ರ್ಯಕ್ಕೆ ನೇತಾಜಿ ಸಲ್ಲಿಸಿದ ನಿಸ್ವಾರ್ಥ ಸೇವೆ ಸ್ಮರಿಸಿ ಪ್ರಧಾನಿ ಭಾವುಕರಾದರು. ದೇಶದ ಜನತೆಗೆ ಸಮಾನ ಹಕ್ಕು ಮತ್ತು ಅವಕಾಶ ನೀಡುವ ಭರವಸೆಯನ್ನು ನೇತಾಜಿ ನೀಡಿದ್ದರು. ದೇಶದ ಸರ್ವಾಂಗೀಣ ಅಭ್ಯುದಯದ ಗುರಿ ಹೊಂದಿದ್ದ ಅವರು, ಒಡೆದು ಆಳುವ ನೀತಿಯನ್ನು ಕೊನೆಗಾಣಿಸುವುದಾಗಿ ಹೇಳಿದ್ದರು. ಆದರೆ, ಭಾರತ ಸ್ವತಂತ್ರಗೊಂಡ ಅನೇಕ ವರ್ಷಗಳ ನಂತರವೂ ಒಡೆದು ಆಳುವ ನೀತಿ ಮುಂದುವರಿದಿತ್ತು ಎಂದು ಮೋದಿ ಹೇಳಿದರು. ಸ್ವಾತಂತ್ರ್ಯಕ್ಕೆ ಹೋರಾಡಿದ ನೇತಾಜಿ, ಸರ್ದಾರ್ ಪಟೇಲ್, ಡಾ. ಬಿ.ಆರ್.ಅಂಬೇಡ್ಕರ್ ಮತ್ತಿತರ ಮಹನೀಯರನ್ನು ಮೂಲೆಗುಂಪು ಮಾಡುವ ಕಾರ್ಯ ವ್ಯವಸ್ಥಿತವಾಗಿ ನಡೆಯಿತು. ದೇಶದಲ್ಲಿ ಒಂದು ಕುಟುಂಬ ಮಾತ್ರ ಮೇಲುಗೈ ಸಾಧಿಸುತ್ತಾ ಬಂತು ಎಂದು ನೆಹರು- ಗಾಂಧಿ ಕುಟುಂಬವನ್ನು ಮೋದಿ ಪರೋಕ್ಷವಾಗಿ ಟೀಕಿಸಿದರು.

ಪಟೇಲ್ ಮತ್ತು ಬೋಸ್​ರ ನೇತೃತ್ವದಲ್ಲಿ ದೇಶ ಮುನ್ನಡೆದಿದ್ದರೆ ಭಾರತದ ಭವಿಷ್ಯ ಇನ್ನಷ್ಟು ಉಜ್ವಲವಾಗಿರುತ್ತಿತ್ತು. ಆದರೆ, ಈ ಮಹನೀಯರಿಗೆ ಕಾಂಗ್ರೆಸ್ ಅನ್ಯಾಯ ಮಾಡಿತು. ಇದನ್ನು ಸರಿಪಡಿಸುವ ಯತ್ನವನ್ನು ಎನ್​ಡಿಎ ಸರ್ಕಾರ ಮಾಡುತ್ತಿದೆ. ನೇತಾಜಿ ನಿಗೂಢ ಸಾವಿನ ಕುರಿತಾದ ಕಡತಗಳನ್ನು ಹಂತ ಹಂತವಾಗಿ ಸಾರ್ವಜನಿಕಗೊಳಿಸಲಾಗಿದೆ. ಅನೇಕ ವೀರರ ತ್ಯಾಗ, ಬಲಿದಾನದಿಂದ ದೊರಕಿರುವ ‘ಸ್ವರಾಜ್’ನ್ನು ‘ಸುರಾಜ್’ ಮೂಲಕ ಉಳಿಸಿಕೊಳ್ಳಬೇಕು ಎಂದು ಮೋದಿ ಹೇಳಿದರು.

ಐತಿಹಾಸಿಕ ಕ್ಷಣ

ಆ. 15ರಂದು ಕೆಂಪುಕೋಟೆ ಯಲ್ಲಿ ಪ್ರಧಾನಿ ರಾಷ್ಟ್ರಧ್ವಜ ಹಾರಿಸುವುದು ಸಂಪ್ರದಾಯ. ಆದರೆ, ನೇತಾಜಿಯವರ ಗೌರವಾರ್ಥ ಕೆಂಪುಕೋಟೆಯಲ್ಲಿ ಪ್ರಧಾನಿ ಧ್ವಜಾರೋಹಣ ನೆರವೇರಿ ಸಿದ್ದು ವಿಶೇಷ. ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡುವಂತೆ ನೇತಾಜಿ ಸಂಬಂಧಿ ಮತ್ತು ಬಂಗಾಳದ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಕುಮಾರ್ ಬೋಸ್ ಪ್ರಧಾನಿಗೆ ಪತ್ರ ಬರೆದಿದ್ದರು. ಆಜಾದ್ ಹಿಂದ್ ಫೌಜ್​ನಲ್ಲಿ ಸೇವೆ ಸಲ್ಲಿಸಿದ ಆರ್.ಎಸ್. ಚಿಕರಾ, ಲಾಲತಿ ರಾಂ, ಜಾಗಿರ್ ಸಿಂಗ್, ಪರಮಾನಂದ, ಜಗರಾಂ, ರಾಂಗೋಪಾಲ್, ಅನೇಕ ಹಿರಿಯರು ಇದ್ದರು.

ಡಬಲ್ ಫೋರ್ಸ್ ಉತ್ತರ

ದೇಶ ಬಲಿಷ್ಠ ಸೇನೆ ಹೊಂದುವುದು ನೇತಾಜಿ ದೂರ ದೃಷ್ಟಿಯಾಗಿತ್ತು. ಅವರ ಆಶಯದಂತೆ ಭಾರತ ಈಗ ಅತ್ಯಾಧುನಿಕ ಸೇನೆಯನ್ನು ಹೊಂದಿದೆ. ದೇಶಕ್ಕೆ ಎದು ರಾಗುವ ಯಾವುದೇ ಬೆದರಿಕೆಗೆ ಡಬಲ್ ಫೋರ್ಸ್​ನಲ್ಲಿ (ದುಪ್ಪಟ್ಟು ಬಲದಿಂದ) ಉತ್ತರ ನೀಡುವ ಸಾಮರ್ಥ್ಯ ನಮ್ಮ ಸೇನೆಗೆ ಇದೆ ಎಂದು ಮೋದಿ ಹೇಳಿದರು.

ಪೊಲೀಸ್ ಸ್ಮಾರಕ

ಪೊಲೀಸ್ ಹುತಾತ್ಮರ ದಿನದ (ಅ.21) ಅಂಗವಾಗಿ ರಾಷ್ಟ್ರೀಯ ಪೊಲೀಸ್ ಸ್ಮಾರಕವನ್ನು ಮೋದಿ ಉದ್ಘಾಟಿಸಿದರು. ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಪೊಲೀಸರನ್ನು ಅವರು ಸ್ಮರಿಸಿದರು. 238 ಟನ್ ತೂಕದ 30 ಅಡಿ ಎತ್ತರದ ಶಿಲ್ಪ ಮತ್ತು 1947ರಿಂದ ಈವರೆಗೆ ಹುತಾತ್ಮರಾದ ಕೇಂದ್ರ ಮತ್ತು ರಾಜ್ಯ ಪೊಲೀಸ್ ಪಡೆಗಳ 34,800 ಸಿಬ್ಬಂದಿ ಹೆಸರಿರುವ ಫಲಕ ಈ ಸ್ಮಾರಕದಲ್ಲಿದೆ. ದೆಹಲಿಯ ಚಾಣಕ್ಯಪುರಿಯಲ್ಲಿ 6 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಈ ಸ್ಮಾರಕ ನಿರ್ವಿುಸಲಾಗಿದೆ.

Leave a Reply

Your email address will not be published. Required fields are marked *

Back To Top