ಚಿಂದಿ ಪ್ಲಾಸ್ಟಿಕ್ ಆಯುವವರೊಂದಿಗೆ ಕೆಲಹೊತ್ತು ಪ್ಲಾಸ್ಟಿಕ್ ಆಯ್ದ ಪ್ರಧಾನಿ ನರೇಂದ್ರ ಮೋದಿ

ಮಥುರಾ: ಏಕ ಬಳಕೆ ಪ್ಲಾಸ್ಟಿಕ್ ಸಂಪೂರ್ಣ ನಿಷೇಧಿಸಲು ಕೇಂದ್ರ ಸರ್ಕಾರ ನಿರ್ಧಾರ ತಳೆದ ಮರುದಿನವೇ ಪ್ರಧಾನಿ ನರೇಂದ್ರ ಮೋದಿ, ಬುಧವಾರ ಕಸದಿಂದ ಪ್ಲಾಸ್ಟಿಕ್ ಆಯುವವರಿಗೆ ಸಹಾಯ ಹಸ್ತ ಚಾಚಿ ತಾವೂ ಕೆಲಹೊತ್ತು ಪ್ಲಾಸ್ಟಿಕ್ ವಿಂಗಡಿಸಿದರು.

ಮಥುರಾದಲ್ಲಿ ಬುಧವಾರ ನ್ಯಾಷನಲ್ ಅನಿಮಲ್ ಡಿಸೀಸ್​ ಕಂಟ್ರೋಲ್ ಪ್ರೋಗ್ರಾಮ್ ಉದ್ಘಾಟಿಸಿದ ಮೋದಿ, ಕಂದು ಬಣ್ಣದ ಕ್ರೇಟ್​​ ಮುಂದೆ ಕುಳಿತು ಕಸದಿಂದ ಪ್ಲಾಸ್ಟಿಕ್ ಬೇರ್ಪಡಿಸುತ್ತಿರುವ ಮಹಿಳೆಯರೊಂದಿಗೆ ಕುಳಿತು ಅವರಿಗೆ ಸಹಾಯ ಹಸ್ತ ಚಾಚುವ ಮೂಲಕ ಪ್ಲಾಸ್ಟಿಕ್ ಬಳಕೆ ಕಡಿತಗೊಳಿಸುವಂತೆ ದೇಶವಾಸಿಗಳಿಗೆ ಸ್ಪಷ್ಟ ಸಂದೇಶ ರವಾನಿಸಿದರು. ಸಮಾರಂಭದಲ್ಲಿ ಚಿಂದಿ ಆಯುವ ಮಹಿಳೆಯರೊಂದಿಗೆ ಕೆಲವು ಹೊತ್ತು ಆಹ್ಲಾದಕರ ವಿಚಾರ ವಿನಿಮಯ ಮಾಡಿಕೊಂಡರು.

ಪ್ಲಾಸ್ಟಿಕ್ ಬಳಕೆ ನಿಯಂತ್ರಣಕ್ಕೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಪ್ಲಾಸ್ಟಿಕ್ ವೇಸ್ಟ್​ ಮ್ಯಾನೇಜ್ಮೆಂಟ್ ರೂಲ್ಸ್​(2016)ಗೆ ಕಳೆದ ಮಾರ್ಚ್​ 27 ರಂದು ತಿದ್ದುಪಡಿ ತಂದಿದೆ. ಅದರಂತೆ ಪ್ಲಾಸ್ಟಿಕ್ ಉತ್ಪಾದಕರು, ಪೂರೈಕೆದಾರರು, ಮಾರಾಟಗಾರರು ದೇಶಾದ್ಯಂತ ಎರಡು ವರ್ಷಗಳಲ್ಲಿ ಪ್ಲಾಸ್ಟಿಕ್ ನಿರ್ಮಿತ ವಸ್ತುಗಳನ್ನು ಹೊರಹಾಕಬೇಕಾಗುತ್ತದೆ. 2022 ವೇಳೆಗೆ ದೇಶವನ್ನು ಪ್ಲಾಸ್ಟಿಕ್ ಮುಕ್ತ ರಾಷ್ಟ್ರವನ್ನಾಗಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.

Leave a Reply

Your email address will not be published. Required fields are marked *