ಪ್ರವಾಸಿ ಭಾರತ್‌ ದಿನದಲ್ಲೂ ಸಿದ್ಧಗಂಗಾಶ್ರೀ ನೆನೆದ ಪ್ರಧಾನಿ ಮೋದಿ

ವಾರಾಣಸಿ: ಪ್ರವಾಸಿ ಭಾರತ್‌ ದಿನದ ಅಂಗವಾಗಿ ವಾರಾಣಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾನತಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿಗಳ ನಿಧನಕ್ಕೆ ಮತ್ತೊಮ್ಮೆ ಸಂತಾಪ ಸೂಚಿಸಿದರು.

ಎಲ್ಲರಿಗೂ ಸ್ವಾಗತ ಕೋರಿದ ಅವರು, ಮೊದಲಿಗೆ ಶ್ರೀ ಶಿವಕುಮಾರ ಸ್ವಾಮೀಜಿಗಳ ನಿಧನಕ್ಕೆ ಸಂತಾಪ ಸೂಚಿಸಿದರು. ನಾನು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಅವರನ್ನು ಭೇಟಿಯಾಗುವ ಅವಕಾಶ ದೊರಕಿತ್ತು. ಅವರು ನನ್ನನ್ನು ಮಗನಂತೆ ಕಾಣುತ್ತಿದ್ದರು ಮತ್ತು ಅವರ ಆಶೀರ್ವಾದವನ್ನು ಪಡೆದಿದ್ದೆ. ಶ್ರೀಗಳು ಮಹಾಋಷಿಯಾಗಿದ್ದರು. ಮಾನವರ ಕಲ್ಯಾಣಕ್ಕಾಗಿ ಅವರು ಶ್ರಮಿಸಿದ್ದಾರೆ. ಅವರ ನಿಧನದಿಂದ ದುಃಖ ಉಂಟಾಗುತ್ತಿದ್ದು, ಮತ್ತೊಮ್ಮೆ ಅವರಿಗೆ ನನ್ನ ಹೃದಯಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

ವಿಶ್ವಾದ್ಯಂತ ಎಲ್ಲ ಭಾರತೀಯರೊಂದಿಗೆ ಸಂವಹನ ನಡೆಸುವ ಅಭಿಯಾನವನ್ನು ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಾರಂಭಿಸಿದ್ದರು. ಅವರ ನಂತರದ ಮೊದಲ ಸಮಾವೇಶ ಇದಾಗಿದೆ. ಇದನ್ನು ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ನಮನಗಳನ್ನು ಅರ್ಪಿಸುತ್ತೇನೆ.

ವಾರಾಣಸಿಯು ಜ್ಞಾನದ, ಧರ್ಮದ ಕೇಂದ್ರವಾಗಿದ್ದು, ಇದನ್ನು ಭಾರತೀಯ ರಾಯಭಾರಿಯನ್ನಾಗಿ ಘೋಷಿಸಲು ಇಚ್ಛಿಸುತ್ತೇನೆ. ಇದಕ್ಕೂ ಮುನ್ನ ಜನ ಹೇಳುತ್ತಿದ್ದರು ಭಾರತವು ಬದಲಾಗುವುದಿಲ್ಲ ಎಂದು ಆದರೆ, ನಾವು ಈ ಯೋಚನೆಯನ್ನೇ ಬದಲಿಸಿದ್ದೇವೆ. ಇತ್ತೀಚಿನ ದಿನಗಳಲ್ಲಿ ಜಗತ್ತು ನಮ್ಮ ಸಲಹೆಯನ್ನು ಗಂಭೀರವಾಗಿ ಪರಿಗಣಿಸುತ್ತಿದೆ. ಇದರಿಂದಾಗಿಯೇ ನಾವು ಪರಿಸರ ಪ್ರಶಸ್ತಿ ಮತ್ತು ಸಿಯೋಲ್ ಬಹುಮಾನವನ್ನು ಪಡೆದುಕೊಂಡಿದ್ದೇವೆ ಎಂದು ಹೇಳಿದರು.

ಬೇರೆ ಬೇರೆ ದೇಶಗಳಲ್ಲಿ ನೆಲೆಸಿರುವ ಯಾರೇ ಆದರೂ ಸಮಾಜದ ಬಹುತೇಕ ಕಡೆಗಳಲ್ಲಿ ನಾಯಕತ್ವವನ್ನು ಸಾಧಿಸಿ ತೋರಿಸಿದ್ದಾರೆ ಮತ್ತು ಮಾರಿಷಸ್‌ ಪ್ರಧಾನಿ ಪ್ರವಿಂದ್‌ ಜುಗ್ನೌತ್‌ ಅವರು ಅದನ್ನು ಉತ್ತೇಜಿಸುತ್ತಿದ್ದಾರೆ. ಇದರ ಜತೆಗೆ ಪೋರ್ಚುಗಲ್‌, ಟ್ರಿನಿದಾಡ್‌- ಟೊಬಾಗೊ ಮತ್ತು ಐರ್ಲೆಂಡ್‌ ಸೇರಿದಂತೆ ಹಲವು ದೇಶಗಳು ಭಾರತ ಮೂಲದವರ ನಾಯಕತ್ವವನ್ನು ಹೊಂದಿವೆ ಎಂದು ಹೇಳಿದರು.

ಇಂದು ವಿಶ್ವದಲ್ಲಿ ಹಲವು ವಿಚಾರಗಳನ್ನು ಮುನ್ನಡೆಸಲು ಭಾರತವು ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಅಂತಾರಾಷ್ಟ್ರೀಯ ಸೋಲಾರ್‌ ಒಕ್ಕೂಟವು ಕೂಡ ಇಂತದ್ದೇ ಒಂದು ವೇದಿಕೆಯಾಗಿದೆ. ಈ ಮೂಲಕ ವಿಶ್ವಕ್ಕೆ ನಾವು ಒಂದೇ ಗ್ರಿಡ್‌ ಮತ್ತು ಒಂದೇ ಸೂರ್ಯ ಎಂಬುದನ್ನು ಸಾಧಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಹಲವು ಪ್ರಕರಣಗಳಲ್ಲಿ ಭಾರತವನ್ನು ಮುನ್ನಡೆಸಲು ಭಾರತವು ಒಂದು ಸ್ಥಾನದಲ್ಲಿದೆ. ಇಂಟರ್ನ್ಯಾಷನಲ್ ಸೌರ ಅಲೈಯನ್ಸ್ ಇಂತಹ ವೇದಿಕೆಯಾಗಿದೆ. ವಿಶ್ವದಲ್ಲಿ ಆರ್ಥಿಕವಾಗಿ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರ ನಮ್ಮದಾಗಿದೆ. ಹಾಗಾಗಿ ಕ್ರೀಡೆಯಲ್ಲೂ ಕೂಡ ನಾವು ಬಲಿಷ್ಟವಾಗಬೇಕಿದೆ. ಪ್ರಪಂಚದ ಅತಿದೊಡ್ಡ ಪ್ರಾರಂಭಿಕ ಪರಿಸರ ವ್ಯವಸ್ಥೆಯಾಗಲು ನಾವು ಹೊರಟಿದ್ದು, ವಿಶ್ವದ ಅತಿದೊಡ್ಡ ಆರೋಗ್ಯ ಸೇವೆಯಾದ ಆಯುಷ್ಮಾನ್ ಭಾರತ ಯೋಜನೆ ಸಹ ಚಾಲ್ತಿಯಲ್ಲಿದೆ ಎಂದರು. (ಏಜೆನ್ಸೀಸ್)