ಚುನಾವಣೆ ಫಲಿತಾಂಶದ ಮಾರನೇ ದಿನ ನರೇಂದ್ರ ಮೋದಿ ಬಯೋಪಿಕ್​​​​​ ಬಿಡುಗಡೆ

ನವದೆಹಲಿ: ಪ್ರಧಾನಿ ಮೋದಿಯವರ ಜೀವನಾಧಾರಿತ ಬಯೋಪಿಕ್​ ಸಿನಿಮಾ ‘ಪಿಎಂ ನರೇಂದ್ರ ಮೋದಿ’ ಲೋಕಸಭೆ ಚುನಾವಣೆ ಫಲಿತಾಂಶದ ಮಾರನೇ ದಿನ ಮೇ 24ಕ್ಕೆ ಬಿಡುಗಡೆಯಾಗಲಿದೆ.

ಬಾಲಿವುಡ್​​ ನಟ ವಿವೇಕ್​​ ಒಬೆರಾಯ್​​​​​​​​ ನಟಿಸಿರುವ ಚಿತ್ರ ಏಪ್ರಿಲ್​​ 11 ರಂದು ಬಿಡುಗಡೆಯಾಗಬೇಕಿತ್ತು. ಆದರೆ, ಲೋಕಸಭೆ ಚುನಾವಣೆ ಮುಗಿಯುವವರೆಗೂ ಚಿತ್ರ ಬಿಡುಗಡೆಗೆ ಅನುಮತಿ ನೀಡುವುದಿಲ್ಲ ಎಂದು ಚುನಾವಣಾ ಆಯೋಗ ಸುಪ್ರೀಂಕೋರ್ಟ್​ಗೆ ತಿಳಿಸಿತ್ತು.

ಮೋದಿಯವರ ಬಯೋಪಿಕ್​ ಸಿನಿಮಾ ನೋಡಿದ ಬಳಿಕ ಸಿನಿಮಾ ಬಿಡುಗಡೆ ಬಗ್ಗೆ ತೀರ್ಮಾನಿಸಿ ಏ.22ರೊಳಗೆ ವರದಿ ನೀಡುವಂತೆ ಸುಪ್ರೀಂಕೋರ್ಟ್​ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿತ್ತು. ಅದಾದ ಬಳಿಕ ಏ.17ರಂದು ಆಯೋಗದ ಏಳು ಅಧಿಕಾರಿಗಳನ್ನೊಳಗೊಂಡ ತಂಡ ಪಿಎಂ ನರೇಂದ್ರ ಮೋದಿಯವರ ಬಯೋಪಿಕ್​ ಸಿನಿಮಾವನ್ನು ವೀಕ್ಷಿಸಿತ್ತು.

ಈ ಬಯೋಪಿಕ್​ನಲ್ಲಿ ನರೇಂದ್ರ ಮೋದಿಯವರನ್ನು ತುಂಬ ಪ್ರಶಂಸಿಸಿ ಚಿತ್ರಿಸಲಾಗಿದೆ. ಅಲ್ಲದೆ, ಬಹುತೇಕ ಪ್ರತಿಪಕ್ಷಗಳು ಭ್ರಷ್ಟವೆಂದು ಹಲವು ದೃಶ್ಯಗಳಲ್ಲಿ ಬಿಂಬಿಸಲಾಗಿದೆ. ಈಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಸಿನಿಮಾ ಬಿಡುಗಡೆಗೆ ಅವಕಾಶ ನೀಡಿದರೆ ಚುನಾವಣಾ ವ್ಯವಸ್ಥೆ ಒಂದು ಪಕ್ಷದ ಪರ ಒಲವು ತೋರಿದಂತೆ ಆಗುತ್ತದೆ ಎಂದು ತಂಡ ಹೇಳಿತ್ತು. (ಏಜನ್ಸೀಸ್​)

Leave a Reply

Your email address will not be published. Required fields are marked *