ಆಪರೇಷನ್ ಕಮಲ ಹಿಂದೆ ಮೋದಿ, ಷಾ ಇದ್ದಾರೆ

ಬೆಂಗಳೂರು: ರಾಜ್ಯದಲ್ಲಿನ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನದಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರೂ ಕೈ ಜೋಡಿಸಿಸಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವಿಸೃ್ತ ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿ, ಆಪರೇಷನ್ ಕಮಲ ಹಿಂದೆ ಪ್ರಧಾನಿ ಮೋದಿ ಹಾಗೂ ಅಮಿತ್ ಷಾ ಇದ್ದಾರೆ. ಪ್ರತಿ ಶಾಸಕರಿಗೂ 30 ಕೋಟಿ ರೂ.ವರೆಗೂ ಆಮಿಷವೊಡ್ಡಿದ್ದು, 25-30 ಶಾಸಕರನ್ನು ಸಂರ್ಪಸಿದ್ದಾರೆ ಎಂದರು.

ಮಂಗಳವಾರ ಕೂಡ ಜೆಡಿಎಸ್ ಶಾಸಕರೊಬ್ಬರ ಮನೆಗೆ 30 ಕೋಟಿ ರೂ. ತೆಗೆದುಕೊಂಡು ಹೋಗಿದ್ದಾರೆ. ಆ ಶಾಸಕರು ಕೈ ಮುಗಿದು ವಾಪಸ್ ತೆಗೆದುಕೊಂಡು ಹೋಗಿ ಎಂದಿದ್ದಾರೆ. ಮತ್ತೊಬ್ಬ ಶಾಸಕರ ಮನೆಯಲ್ಲಿ 5 ಕೋಟಿ ರೂ. ಇಟ್ಟು ಆಮೇಲೆ ಮಾತನಾಡೋಣ ಎಂದಷ್ಟೇ ಹೇಳಿ ಹೋಗಿದ್ದಾರೆ. ಶಾಸಕರಿಗೆ ಆಮಿಷವೊಡ್ಡಲು ಇಷ್ಟೊಂದು ಹಣ ಇವರಿಗೆ ಎಲ್ಲಿಂದ ಬಂತು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಮೋದಿ ಸರ್ಕಾರ ಕೊಟ್ಟ ಭರವಸೆ ಒಂದನ್ನೂ ಈಡೇರಿಸಿಲ್ಲ. ಸ್ವಾತಂತ್ರ್ಯ ಬಂದಾಗಿನಿಂದ ಜನರ ಬಗ್ಗೆ ಕಳಕಳಿ ಇಲ್ಲದ ಇಂಥ ಸರ್ಕಾರವನ್ನೇ ನೋಡಿಲ್ಲ ಎಂದ ಅವರು, ರಾಜ್ಯದಲ್ಲಿ ಜೆಡಿಎಸ್ ಮೈತ್ರಿಯೊಂದಿಗೆ ಲೋಕಸಭಾ ಚುನಾವಣೆಯಲ್ಲಿ 28ರಲ್ಲಿ ಕನಿಷ್ಠ 25 ಕ್ಷೇತ್ರಗಳನ್ನು ಗೆಲ್ಲುವ ಗುರಿ ನಮ್ಮದು. ಈ ನಿಟ್ಟಿನಲ್ಲಿ ಬಿಜೆಪಿ ವಿರುದ್ಧ ನಮ್ಮ ಹೋರಾಟ ನಡೆಯಲಿದೆ ಎಂದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಫೆ.15ರಿಂದ ಜನಸಂಪರ್ಕ ಅಭಿಯಾನ ಆರಂಭ ಮಾಡುತ್ತಿದ್ದೇವೆ, ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಮನೆ ಮನೆಗೆ ಹೋಗಿ ಮೋದಿ ಸರ್ಕಾರದ ಸಾಧನೆ ಶೂನ್ಯ ಎಂಬುದನ್ನು ಮನದಟ್ಟು ಮಾಡಿಕೊಡಬೇಕೆಂದು ಇವತ್ತಿನ ಸಭೆಯಲ್ಲಿ ತಿಳಿಸಲಾಗಿದೆ ಎಂದರು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಬೂತ್ ಕಾರ್ಯಕರ್ತರಿಗೆ ಚುನಾವಣೆ ತಯಾರಿ ಶಿಬಿರ ಆಯೋಜನೆ ಮಾಡಲಾಗುತ್ತದೆ. ಫೆ.16ರಿಂದ 224 ಕ್ಷೇತ್ರಗಳಲ್ಲಿಯೂ ಶಿಬಿರ ನಡೆಯಲಿದ್ದು, ಪ್ರಮುಖರು ಮಾರ್ಗದರ್ಶನ ಮಾಡಲಿದ್ದಾರೆ ಎಂದು ತಿಳಿಸಿದರು.

ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಳ್ಳಿ…
ಸರ್ವ ಸದಸ್ಯರ ಸಭೆಯಲ್ಲಿ ಪಕ್ಷದ ನಾಯಕರು ಶಿಸ್ತಿನ ಪಾಠ ಮಾಡಿದ್ದಾರೆ. ಯಾರೂ ಪಕ್ಷದ ಶಿಸ್ತು ಮೀರಬಾರದು. ಈ ಬಗ್ಗೆ ಸಿದ್ದರಾಮಯ್ಯ, ಕೆ.ಸಿ.ವೇಣುಗೋಪಾಲ್ ಎಚ್ಚರಿಕೆ ನೀಡಿದ್ದಾರೆ ಎಂದು ದಿನೇಶ್ ಗುಂಡೂರಾವ್ ಮಾಧ್ಯಮಗಳಿಗೆ ತಿಳಿಸಿದರು. ಒಂದು ವೇಳೆ ಹದ್ದು ಮೀರಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಲೋಕಸಭಾ ಚುನಾವಣೆಗೆ ಜೆಡಿಎಸ್ ಜೊತೆ ಸೀಟು ಹೊಂದಾಣಿಕೆ ಮಾಡಿಕೊಳ್ಳುತ್ತೇವೆ, ಅಧಿವೇಶನದ ಬಳಿಕ ಈ ಬಗ್ಗೆ ಮಾತುಕತೆ ನಡೆಯಲಿದೆ, ವರಿಷ್ಠರ ತೀರ್ವನಕ್ಕೆ ಎಲ್ಲರೂ ಬದ್ಧರಿದ್ದು, ಹೊಂದಾಣಿಕೆ ಮಾಡಿಕೊಂಡು ಹೋಗಬೇಕೆಂದು ನಾಯಕರು ಸೂಚಿಸಿದ್ದಾರೆ ಎಂದರು.

ನಮ್ಮ ಕಾಂಗ್ರೆಸ್ ಬಿಡುಗಡೆ
ಕಾಂಗ್ರೆಸ್ ತನ್ನ ಆಂತರಿಕ ಪ್ರಸಾರಕ್ಕಾಗಿ ನಮ್ಮ ಕಾಂಗ್ರೆಸ್ ಎಂಬ ಪಾಕ್ಷಿಕ ಹೊರತಂದಿದೆ. ಬುಧವಾರ ಕಾರ್ಯಕ್ರಮದಲ್ಲಿ ಈ ಪತ್ರಿಕೆಯನ್ನ್ಲು ಪಕ್ಷದ ನಾಯಕರು ಬಿಡುಗಡೆ ಮಾಡಿದರಲ್ಲದೆ ಕಡ್ಡಾಯವಾಗಿ ಚಂದಾದಾರಿಕೆ ಮಾಡಿಸುವಂತೆ ಪದಾಧಿಕಾರಿಗಳು, ಸದಸ್ಯರಿಗೆ ಸೂಚಿಸಿದರು.

ಮೂರು ನಿರ್ಣಯ

1. ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಬೇಕು
2. ಮೈತ್ರಿ ಸರ್ಕಾರದ ಯೋಜನೆಗೆ ಶ್ಲಾಘನೆೆ, ಪರಿಣಾಮಕಾರಿ ಅನುಷ್ಠಾನಕ್ಕೆ ಸಲಹೆ
3. ಪ್ರಿಯಾಂಕಾರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿದ್ದ ಕ್ಕಾಗಿ ಎಐಸಿಸಿ ಅಧ್ಯಕ್ಷರಿಗೆ ಅಭಿನಂದನೆ.

ಜಾಧವ್ ವಿರುದ್ಧ ಕೈ ಮೊದಲ ಕ್ರಮ?

ಬೆಂಗಳೂರು: ಅತೃಪ್ತರ ಹಣಿಯಲು ಶಿಸ್ತಿನ ಕ್ರಮ ಅನಿವಾರ್ಯ ಎಂಬ ಸಂದರ್ಭ ಸೃಷ್ಟಿಸಿಕೊಂಡಿರುವ ಕಾಂಗ್ರೆಸ್, ಮೊದಲಿಗೆ ಚಿಂಚೋಳಿ ಶಾಸಕ ಉಮೇಶ್ ಜಾಧವ್ ಮೇಲೆ ಅಮಾನತು ಶಿಕ್ಷೆ ಪ್ರಯೋಗಿಸಲು ಮುಂದಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಜಾಧವ್ ಬಹಳ ಮುಂದುವರಿದಿದ್ದಾರೆ. ತಿಳಿ

ವಳಿಕೆ ಹೇಳಿದರೂ ಕೇಳುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಅವರ ಮೇಲೆ ಮೊದಲು ಕ್ರಮಕೈಗೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಬಾಗಿಲಿಗೆ ನೋಟಿಸ್: ಸದನಕ್ಕೆ ಕಡ್ಡಾಯ ಹಾಜರಾಗಬೇಕೆಂದು ಅಥಣಿ ಶಾಸಕ ಮಹೇಶ್ ಕುಮಠಳ್ಳಿ, ಚಿಂಚೋಳಿ ಶಾಸಕ ಉಮೇಶ್ ಅವರಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಂಗಳವಾರ ಎರಡನೇ ನೋಟಿಸ್ ಕಳಿಸಿದರು. ನೋಟಿಸ್ ಅನ್ನು ಶಾಸಕರ ಭವನದ ಈ ಶಾಸಕರ ಕೊಠಡಿಯ ಬಾಗಿಲಿಗೆ ಅಂಟಿಸಲಾಗಿದೆ.