ಬಹುತ್ವ ಭಾರತದ ಆಭರಣ

blank

ಚಿಕ್ಕಮಗಳೂರು: ಬಹುತ್ವ ಭಾರತದ ಆಭರಣ. ವೈವಿಧ್ಯತೆಯೆ ಭಾರತದ ಶಕ್ತಿ ಎಂದು ಸಾಹಿತಿ ಡಾ. ಎಚ್.ಎಂ.ರುದ್ರಸ್ವಾಮಿ ಅಭಿಪ್ರಾಯಪಟ್ಟರು.

ನಗರದ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ತಾಲೂಕು ಸಾಹಿತ್ಯ ಸಮ್ಮೇಳನದ ಸಾಹಿತ್ಯಾವಲೋಕನಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಹಿತ್ಯಲೋಕಕ್ಕೆ ಜಿಲ್ಲೆಯ ಕೊಡುಗೆ ಗಣನೀಯವಾಗಿದೆ. ಪತ್ತೇದಾರಿ ಕಾದಂಬರಿ ಮೂಲಕ ಹೆಸರು ಮಾಡಿದ ಎಚ್.ನರಸಿಂಹಯ್ಯ ನಗರದ ಶಂಕರಪುರಬಡಾವಣೆಯಲ್ಲಿ ವಾಸವಾಗಿದ್ದರು. ಎಲ್ಲ ರೀತಿಯ ಬರವಣಿಗೆಯಲ್ಲಿ ಜಿಲ್ಲೆಯ ಪಾಲಿದೆ ಎಂದರು.
ಕನ್ನಡದ ಹಿರಿಮೆಗೆ ಧಕ್ಕೆಯಾಗಬಾರದು. ಹಿಂದಿ, ಇಂಗ್ಲಿಷ್ ಭಾಷೆಗಳ ವಿರೋಧಿ ಅಲ್ಲದಿದ್ದರೂ ಕನ್ನಡದ ಸಾರ್ವಭೌಮತ್ವ ಕನ್ನಡಿಗರಿಗೆ ಬೇಕು. ಕೇಂದ್ರ ಗೃಹಸಚಿವರು ದೇಶವನ್ನೆ ಹಿಂದಿಮಯ ಮಾಡಲು ಹೊರಟಿರುವುದನ್ನು ಒಪ್ಪಲಾಗದು. ಅಪೂರ್ವ ವಜ್ರಗಳು ಕನ್ನಡದಲ್ಲಿ ಇದ್ದು ಆಯ್ದುಕೊಂಡಿz್ದೆÃವೆ. ಕನ್ನಡವೂ ಹಿಂದಿಯAತೆಯೆ ರಾಷ್ಟಿçÃಯಭಾಷೆ ಎಂಬುದನ್ನು ಮರೆಯಲಾಗದು ಎಂದರು.
ಕನ್ನಡ ಅನೇಕ ಕ್ಷೇತ್ರಗಳಲ್ಲಿ ಮರೆಯಾಗಿದೆ. ಶ್ರೇಷ್ಠನ್ಯಾಯಾಲಯ ಹಾಗೂ ಸರ್ವೋಚ್ಛ ನ್ಯಾಯಾಲದ ಕಲಾಪಗಳು ಮತ್ತು ತೀರ್ಪುಗಳು ಬಹುತೇಕ ಇಂಗ್ಲೀಷ್‌ನಲ್ಲೆ ಇರುತ್ತದೆ. ಕಾವೇರಿ ನದಿನೀರಿನ ವಿವಾದ ಕುರಿತಂತೆ ಕರ್ನಾಟಕದ ಪರವಾಗಿ ವಾದಮಾಡುವ ನಮ್ಮವರಿಗೆ ಇಂಗ್ಲಿಷ್ ಬರುವುದಿಲ್ಲ ಎಂಬ ಕಾರಣಕ್ಕಾಗಿಯೆ ನಾರಿಮನ್ ಅವರಿಗೆ ನಿಮಿಷಕ್ಕೆ ಒಂದು ಲಕ್ಷ ರೂ. ನೀಡಿz್ದÉÃವೆ. ಶ್ರೇಷ್ಠ ನ್ಯಾಯಾಲಯದಲ್ಲೂ ಇಂಗ್ಲೀಷ್ ಪ್ರಧಾನಭಾಷೆಯಾಗಿದೆ. ಇದರಿಂದ ಫಿರ್ಯಾದಿಗಳಿಗೆ ಅನ್ಯಾಯವೂ ಆಗುತ್ತಿದೆ. ಇಂಗ್ಲೀಷ್-ಕನ್ನಡ ಅನುವಾದಕರ ಕೊರತೆ ಇದೆ. ಅನೇಕ ಸಂದರ್ಭಗಳಲ್ಲಿ ತಪ್ಪು ಅನುವಾದಕ್ಕೂ ಆಸ್ಪದವಾಗುವ ಕಾರಣವಿದೆ ಎಂದವರು ವಿಶ್ಲೇಷಿಸಿದರು.
ಏಕಭಾಷೆ ಮತ್ತು ಏಕಸಂಸ್ಕೃತಿ ಹೇರಿಕೆಯ ಪ್ರಯತ್ನಗಳು ಸಾಕಷ್ಟು ನಡೆಯುತ್ತಿರುವುದು ಆತಂಕದಾಯಕ. ಹಿಂದಿನಿAದಲೂ ಬಹುತ್ವದ ಸಂಸ್ಕೃತಿ ಈ ನೆಲದ್ದು. ಬಹುತ್ವ ಭಾರತದ ಆಭರಣ. ವೈವಿಧ್ಯತೆಯೆ ಭಾರತದ ಶಕ್ತಿ ಎಂಬುದನ್ನು ಮರೆಯಬಾರದು. ಈ ನಿಟ್ಟಿನಲ್ಲಿ ಸಮ್ಮೇಳನಾಧ್ಯಕ್ಷರು ಬೆಳಕು ಚೆಲ್ಲುವ ಪ್ರಯತ್ನ ಮಾಡಿರುವುದು ಶ್ಲಾಘನೀಯ. ಕನ್ನಡದ ಅಭಿಮಾನ ನಮ್ಮದಾಗಬೇಕು ಎಂದರು.
ಹಿರಿಯ ವಕೀಲ ಎಚ್.ಸಿ.ನಟರಾಜ್ ಗೋಷ್ಠಿ ಉದ್ಘಾಟಿಸಿ ಮಾತನಾಡಿ, ಕನ್ನಡ ಸಾಹಿತ್ಯಲೋಕಕ್ಕೆ ತಾಲೂಕಿನ ಕೊಡುಗೆ ಸ್ಮರಣೀಯವಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಕನ್ನಡವನ್ನು ಆಡಳಿತಭಾಷೆಯಾಗಿ ಜಾರಿಗೆ ತರಲು ನಿರಂತರ ಪ್ರಯತ್ನ ನಡೆದಿದ್ದು, ನಮ್ಮ ಬದ್ಧತೆಯೂ ಅಗತ್ಯವಿದೆ ಎಂದರು.
ಆಧುನಿಕ ಕನ್ನಡ ಸಾಹಿತ್ಯದ ಮೊದಲು ತಲೆಮಾರು ಕುರಿತಂತೆ ಮಾತನಾಡಿದ ಸಮ್ಮೇಳನಾಧ್ಯಕ್ಷ ಡಾ.ಬೆಳವಾಡಿಮಂಜುನಾಥ್, ಕನ್ನಡದ ಅಶ್ವನಿದೇವತೆಗಳೆಂದು ಗುರುತಿಸಲ್ಪಟ್ಟ ಎ.ಆರ್.ಕೃಷ್ಣಶಾಸ್ತಿç ಅಂಬಳೆಯಲ್ಲಿ ಹುಟ್ಟಿ ಮಹತ್ವದ ಕೆಲಸ ಮಾಡಿದ್ದಾರೆ. ಅವರಿಂದಲೇ ಆಧುನಿಕ ಸಾಹಿತ್ಯ ಇಲ್ಲಿ ಗುರುತಿಸಬಹುದು. ಕೂದುವಳ್ಳಿಯ ಅಶ್ವಥ್, ಕಥೆಗಾರ ಆನಂದ್ ಗಮನ ಸೆಳೆಯುತ್ತಾರೆ. ಹತ್ತು ನಾಟಕಗಳನ್ನು ರಚಿಸಿದ ವೆಂಕಟರಾಮು ಮರ್ಲೆಯವರು ಎಂದು ಹೇಳಿದರು.
ಬುದ್ಧಚರಿತ ಮಹಾಮಧು ಮಹಾಕಾವ್ಯ ರಚಿಸಿದ ಕಾಶಿವಿಶ್ವನಾಥ ಶೆಟ್ಟರು ಇಲ್ಲೆ ನೆಲೆಸಿದವರು. ತಾಲೂಕಿನಲ್ಲೆ ಹುಟ್ಟಿ ಮೂಡಿಗೆರೆ ಸೇರಿದ ಮಲ್ಲಿಗೆ ಕಡಿದಾಳ್ ಅವರ ವಿವೇಕ ವಿಜಯ ಮಹತ್ವದ ಕೃತಿ. ಆ ಕಾಲಘಟ್ಟದ ಸರಿಸಮಾನವಾದ ಸಾಹಿತ್ಯ ಈವರೆಗೂ ಜಿಲ್ಲೆಯಲ್ಲಿ ಸೃಷ್ಟಿಯಾಗಿಲ್ಲ ಎಂದು ನುಡಿದರು.
ಕೊಪ್ಪದ ಸಾಹಿತಿ ಎಚ್.ಎಸ್.ಚಂದ್ರಕಲಾ ಆಶಯನುಡಿಗಳನ್ನಾಡಿದರು. ತರೀಕೆರೆ ಇಮ್ರಾನ್ ಅಹಮ್ಮದ್‌ಬೇಗ್, ತಾಲೂಕು ಮಾಜಿಅಧ್ಯಕ್ಷರಾದ ಬಿ.ಆರ್.ಜಗದೀಶ್, ತರೀಕೆರೆ ನವೀನ್‌ಪೆನ್ನಯ್ಯ, ಮೂಡಿಗೆರೆಯ ಶಾಂತಕುಮಾರ್ ಮತ್ತಿತರರಿದ್ದರು.

Share This Article

ಒಣದ್ರಾಕ್ಷಿಯಿಂದಾಗುವ ಆರೋಗ್ಯ ಪ್ರಯೋಜನ ಗೊತ್ತಿದೆ; ಮನೆಯಲ್ಲೇ Dry Grapes ತಯಾರಿಸುವ ವಿಧಾನ ಇಲ್ಲಿದೆ | Recipe

ಒಣದ್ರಾಕ್ಷಿ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಆದರೆ ಒಣದ್ರಾಕ್ಷಿಯಲ್ಲಿ ಯಾವುದೇ ಕಲಬೆರಕೆ ಇಲ್ಲಿದಿದ್ದಾಗ ಮಾತ್ರ ಈ ಪ್ರಯೋಜನ…

ಬಹಳ ಇಷ್ಟಪಟ್ಟು ಪನೀರ್​ ಸೇವಿಸುತ್ತಿದ್ದೀರಾ; ಹಾಗಾದ್ರೆ ನೀವು ತಿಳಿದುಕೊಳ್ಳಲೇಬೇಕಾದ ವಿಷಯ ಇದು.. | Health Tips

ನಾನ್​ವೆಜ್​​​​​​ ಇಷ್ಟಪಡದವರು ಪ್ರೋಟೀನ್​ಗಾಗಿ ಪನೀರ್​​​​ ಅನ್ನು ಹೆಚ್ಚು ಸೇವಿಸುತ್ತಾರೆ. ಆದರೆ ಇದು ನಿಜವಾಗಿಯೂ ಪ್ರೋಟೀನ್‌ಗೆ ಉತ್ತಮವಾದ…

ಅಂಗಾಲಿನಲ್ಲಿ ಪದೇ ಪದೆ ನೋವು ಕಾಣಿಸಿಕೊಳ್ಳುತ್ತಿದೆಯೇ; ಅಪಾಯ ತಪ್ಪಿದ್ದಲ್ಲ ಎಚ್ಚರದಿಂದಿರಿ | Health Tips

ಅನೇಕ ಜನರು ಪಾದದ ಕೆಳಭಾಗದಲ್ಲಿ ಅಂದರೆ ಅಂಗಾಲಿನಲ್ಲಿ ನೋವನ್ನು ಅನುಭವಿಸುತ್ತಿರುತ್ತಾರೆ. ಈ ನೋವು ಸಾಮಾನ್ಯ ನೋವಿನಂತೆ…