ಬೆಳಗಾವಿ:ಶಾಲಾ ಮಕ್ಕಳ ಮದ್ಯಾಹ್ನ ಬಿಸಿಯೂಟ ಯೋಜನೆಯ ಅಡಿಲಂಚ ಸ್ವೀಕರಿಸುತ್ತಿದ್ದ ವೇಳೆ ಸಹಾಯಕ ನಿರ್ದೇಶಕರು ಮತ್ತು ವಿಷಯ ನಿರ್ವಾಹಕರು ಮೇಲೆ ಗುರುವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ.
ಮಕ್ಕಳಮಧ್ಯಾಹ್ನ ಬಿಸಿ ಊಟ ಯೋಜನೆ ಸಹಾಯಕ ನಿರ್ದೆಶಕ ಚಂದ್ರಶೇಖರ ಪೋಳ, ಸುಭಾಷ್ ವಲ್ಲ್ಯಾಪುರ ಲೋಕಾಯುಕ್ತರು ದಾಳಿಗೆ ಒಳಗಾದವರು.
ಘಟನೆವಿವರ: ಶಾಲಾ ಮಕ್ಕಳ ಮದ್ಯಾಹ್ನ ಬಿಸಿಯೂಟ ಯೋಜನೆಯಡಿ ಶಾಲೆಗಳ ಮುಖ್ಯೋಪಾಧ್ಯಯರುಗಳ ಹೆಸರಿನಲ್ಲಿ ಬಿಡುಗಡೆ ಮಾಡುವ ಪ್ರತಿ ತಿಂಗಳದ ಅನುದಾನಕ್ಕೆ ಪ್ರತಿಯಾಗಿ ಸದರಿ ಮುಖ್ಯೋಪಾದ್ಯಯರಿಂದ ತಿಂಗಳ ಮಂತ್ರಿ ಲೆಕ್ಕದಲ್ಲಿ ಹಣವನ್ನು ಸಂಗ್ರಹಿಸಿಕೊಡುವಂತೆ ಒತ್ತಾಯಿಸುತ್ತಿದ್ದನು.ಆ ರೀತಿ ಲಂಚದ ಹಣ ಸಂಗ್ರಹಿಸಿ ಕೊಡಲು ಸಾಧ್ಯವಿಲ್ಲವೆಂದು ಹೇಳಿದ್ದರಿಂದ ಡಾಟಾ ಎಂಟ್ರಿ ಆಫರೇಟರ್ ರಾಜು ನಾಯಕ ಇವರನ್ನು ಕೆಲಸದಿಂದ ತೆಗೆದುಹಾಕುತ್ತೇವೆ ಅಂತಾ ಬೆದರಿಸಿ ಜಿಪಂ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು.
ಈ ಹಿನ್ನೆಲೆ ರಾಜು ನಾಯಕ ಅವರು ಮೇಲಾಧಿಕಾರಿಗಳು ಲಂಚದ ಹಣ ಸಂಗ್ರಹಿಸಿಕೊಡುವಂತೆ ಬೇಡಿಕೆ ಇಟ್ಟಿರುವ ಧ್ವನಿಮುದ್ರಣಮಾಡಿ ಮಾ.೨೭ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ಈ ದೂರಿನ ಆಧಾರದ ಮೇಲೆ ಲೋಕಾಯುಕ್ತ ಪಿಐ ನಿರಂಜನ ಪಾಟೀಲ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ ಲಂಚದ ಸಮೇತ ಅಧಿಕಾರಿಗಳಿಬ್ಬರನ್ನು ಬಂಧಿಸಿದ್ದಾರೆ ಎಂದು ಲೋಕಾಯುಕ್ತ ಎಸ್ ಪಿ ಹನಮಂತರಾಯ ತಿಳಿಸಿದ್ದಾರೆ.
