ಹಿಂದು ದೇವರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದ 15 ಯುವಕರನ್ನು ವಶಕ್ಕೆ ಪಡೆದ ಪೊಲೀಸರು

ಉತ್ತರಕನ್ನಡ: ಹಿಂದು ದೇವರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದ 15 ಜನ ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಂಗಮೇಶ, ದೀಪಕ್​, ಆಕಾಶ್​, ಆಶೀಸ್​ಕುಮಾರ, ರಾಜು, ರಾಜೇಶ, ಪರಶುರಾಮ, ದೌಹಾರೋ, ಪೋಸಿಸ್, ಶಕ್ತಿ ನಿರಂಜನ್, ಸಿಮಣ್ಯಪ್ಪ ಸೇರಿ ಒಟ್ಟು 15 ಜನರು ಕಾರವಾರದಲ್ಲಿ ಕ್ರಿಶ್ಚಿಯನ್​ ಧರ್ಮದ ಬಗ್ಗೆ ಪ್ರಚಾರ ಮಾಡುತ್ತಿದ್ದರು. ಜತೆಗೆ ಹಿಂದು ದೇವರಗಳನ್ನು ಟೀಕಿಸುತ್ತಿದ್ದರು. ಇವರೆಲ್ಲ ಗೋವಾ, ಅಸ್ಸೋಮ್​ ಮತ್ತು ಉತ್ತರ ಕರ್ನಾಟಕ ಮೂಲದವರಾಗಿದ್ದು ಗೋವಾದಲ್ಲಿ ನೆಲೆಸಿದವರು ಎಂದು ತಿಳಿದು ಬಂದಿದೆ.

ಸುಭಾಷ್​ವೃತ್ತದಲ್ಲಿ ಮತ ಪ್ರಚಾರ ಪುಸ್ತಕಗಳನ್ನು ವಿತರಿಸುತ್ತಿದ್ದ ಇವರನ್ನೆಲ್ಲ ಸ್ಥಳೀಯರೇ ಹಿಡಿದು ನಗರ ಠಾಣೆ ಪೊಲೀಸರ ವಶಕ್ಕೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *