More

  ಹಾರ್ದಿಕ್​ ಪಾಂಡ್ಯ-ನತಾಶಾ ಸ್ಟಾಂಕೋವಿಕ್ ನಿಶ್ಚಿತಾರ್ಥಕ್ಕೆ ವಿರಾಟ್​ ಕೊಹ್ಲಿ ಪ್ರತಿಕ್ರಿಯೆ ಹೇಗಿತ್ತು?

  ನವದೆಹಲಿ: ಹೊಸ ವರ್ಷದಂದೇ ನಿಶ್ಚಿತಾರ್ಥ ಮಾಡಿಕೊಂಡು ಎಲ್ಲರಿಗೂ ಸರ್ಪ್ರೈಸ್​ ನೀಡಿರುವ ಟೀಮ್​ ಇಂಡಿಯಾದ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯಗೆ ನಾಯಕ ವಿರಾಟ್​ ಕೊಹ್ಲಿ ಶುಭಕೋರಿ, ಅಚ್ಚರಿ ವ್ಯಕ್ತಪಡಿಸಿದ್ದಾರೆ.

  ಹಾರ್ದಿಕ್​ ಪಾಂಡ್ಯ ಮತ್ತು ಬಾಲಿವುಡ್​ ನಟಿ ನತಾಶಾ ಸ್ಟಾಂಕೋವಿಕ್ ಅವರ ಫೋಟೋ ನೋಡಿ ಎಂತಹ ಆಹ್ಲಾದಕರ ಸರ್​ಪ್ರೈಸ್​ ಇದು. ಅಭಿನಂದನೆಗಳು ಹಾರ್ದಿಕ್​, ಒಳ್ಳೆಯ ದಿನಗಳು ಎದುರಾಗಲಿ, ಹಾಗೆಯೇ ದೇವರು ಆಶೀರ್ವದಿಸಲಿ ಎಂದು ವಿರಾಟ್​ ಕೊಹ್ಲಿ ಇನ್​ಸ್ಟಾಗ್ರಾಂನಲ್ಲಿ ಹಾರ್ದಿಕ್​ ಪಾಂಡ್ಯ ಪೋಸ್ಟ್​ ಮಾಡಿರುವ ಫೋಟೋಗೆ ಪ್ರತಿಕ್ರಿಯಿಸಿದ್ದಾರೆ.

  ವಿರಾಟ್​ ಮಾತ್ರವಲ್ಲದೆ, ಮಾಜಿ ನಾಯಕ ಧೋನಿ ಅವರ ಪತ್ನಿ ಸಾಕ್ಷಿ ಧೋನಿ ಸೇರಿ ಟೀಮ್​ ಇಂಡಿಯಾ ಇತರೆ ಆಟಗಾರರು ಸಹ ಹಾರ್ದಿಕ್​ಗೆ ಶುಭ ಕೋರಿದ್ದಾರೆ.

  ಸೆರ್ಬಿಯಾ ಮೂಲದ ಬಾಲಿವುಡ್ ನಟಿ ನತಾಶಾ ಸ್ಟಾಂಕೋವಿಕ್ ಜತೆಗೆ ಜನವರಿ 1 ಹೊಸ ವರ್ಷದಂದು ಹಾರ್ದಿಕ್​ ಪಾಂಡ್ಯ ದುಬೈನಲ್ಲಿ ನಿಶ್ಚಿತಾರ್ಥ ನೇರವೇರಿಸಿಕೊಂಡಿದ್ದಾರೆ. ‘ಮೈ ತೆರಾ, ತು ಮೇರಿ, ಜಾನೇ ಸಾರಾ ಹಿಂದುಸ್ತಾನ್. 01.01.2020,ಎಂಗೇಜ್ಡ್’ ಎಂದು ಹಾರ್ದಿಕ್ ಪಾಂಡ್ಯ ಬುಧವಾರ ಸಂಜೆ ಇನ್​ಸ್ಟಾಗ್ರಾಂ ಪೋಸ್ಟ್​ನಲ್ಲಿ ನಿಶ್ಚಿತಾರ್ಥವನ್ನು ಪ್ರಕಟಿಸಿದ್ದಾರೆ. ಹಾರ್ದಿಕ್​ ಸಾಕಷ್ಟು ಶುಭಾಶಯಗಳು ಹರಿದುಬರುತ್ತಿವೆ. (ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts