ಪ್ಲೇಆಫ್​ ಕನಸು ಇನ್ನೂ ಜೀವಂತ, ಬ್ಯಾಟರ್‌ಗಳ ವೈಫಲ್ಯ ಸಮರ್ಥಿಸಿಕೊಂಡ ಪಂತ್

blank

ಧರ್ಮಶಾಲಾ: ಅಗ್ರ ಕ್ರಮಾಂಕದ ಮತ್ತೊಂದು ಕಳಪೆ ಬ್ಯಾಟಿಂಗ್ ನಿರ್ವಹಣೆ ಸೋಲಿಗೆ ಪ್ರಮುಖ ಕಾರಣ ಎನಿಸಿದರೂ, ಪ್ಲೇಆ್ ಕನಸು ಜೀವಂತವಾಗಿದೆ. ಮುಂದಿನ 3 ಪಂದ್ಯಗಳನ್ನು ನಾವು ಗೆಲ್ಲಲು ಸಾಧ್ಯವಾದರೆ, ಖಂಡಿತವಾಗಿ ಪ್ಲೇಆ್ಗೇರುವ ಅವಕಾಶ ನಿರೀಕ್ಷಿಸಹುದಾಗಿದೆ. ನಾವು ಖಂಡಿತವಾಗಿಯೂ ಪುಟಿದೇಳುವ ಅದ್ಭುತ ಅವಕಾಶ ಹೊಂದಿದ್ದೇವೆ ಎಂದು ಲಖನೌ ಸೂಪರ್‌ಜೈಂಟ್ಸ್ ನಾಯಕ ರಿಷಭ್ ಪಂತ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಪಂಜಾಬ್ ಕಿಂಗ್ಸ್ ವಿರುದ್ಧದ ಸೋಲು ಖಂಡಿತ ನಿರಾಸೆಗೊಳಿಸಿದೆ ಎಂಬುದನ್ನು ಒಪ್ಪಿಕೊಂಡರು.

blank

ಮಿಚೆಲ್ ಮಾರ್ಷ್, ಏಡೆನ್ ಮಾರ್ಕ್ರಮ್ ಮತ್ತು ನಿಕೋಲಸ್ ಪೂರನ್ ಕಳೆದ ಕೆಲಪಂದ್ಯಗಳಲ್ಲಿ ರನ್‌ಗಳಿಸಲು ವಿಫಲರಾಗಿದ್ದರೂ, ಸಮರ್ಥಿಸಿಕೊಂಡಿರುವ ಪಂತ್, ಅಗ್ರ ಕ್ರಮಾಂಕವು ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿರುವಾಗ ಅದು ಸರಿ ಎನಿಸುತ್ತದೆ. ಪ್ರತಿ ಪಂದ್ಯದಲ್ಲೂ ಅವರ ಮೇಲೆ ಅವಲಂಬಿತವಾಗಬಾರದು ಎಂದು ಸೋಲಿನ ಬಳಿಕ ನುಡಿದರು.

236 ರನ್‌ಗಳ ಚೇಸಿಂಗ್ ಬಹಳ ಕಠಿಣ ಜತೆಗೆ ನಮ್ಮ ಫೀಲ್ಡಿಂಗ್ ಸಹ ಕಳಪೆಯಾಗಿತ್ತು. ತಪ್ಪು ಸಮಯದಲ್ಲಿ ನಿರ್ಣಾಯಕ ಕ್ಯಾಚ್‌ಗಳನ್ನು ಬಿಟ್ಟಾಗ, ಅದು ಬಹಳ ನೋವುಂಟು ಆಡಲಿದೆ. ಪಂದ್ಯದ ಆರಂಭದಲ್ಲಿ ಬೌಲರ್‌ಗಳು ಉತ್ತಮ ಲೈನ್ ಮತ್ತು ಲೆಂತ್‌ನಲ್ಲಿ ಬೌಲಿಂಗ್ ಮಾಡಲಿಲ್ಲ್ಲ. ಆದರೆ ಇದು ಆಟದ ಒಂದು ಭಾಗವಾಗಿದೆ ಎಂದರು. ಪಂಜಾಬ್ ನೀಡಿದ 236 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ್ದ ಲಖನೌ, ಎಡಗೈ ವೇಗಿ ಅರ್ಷದೀಪ್ ಸಿಂಗ್ (16ಕ್ಕೆ 3) ದಾಳಿಗೆ ಆರಂಭಿಕ ಆಘಾತ ಕಂಡಿತು. ಆಗ ಆಯುಷ್ ಬಡೋನಿ (74 ರನ್, 40 ಎಸೆತ, 5 ಬೌಂಡರಿ, 5 ಸಿಕ್ಸರ್) ಹಾಗೂ ಅಬ್ದುಲ್ ಸಮದ್ (45 ರನ್, 24 ಎಸೆತ, 2 ಬೌಂಡರಿ, 4 ಸಿಕ್ಸರ್) ಹೋರಾಟ ಚೇಸಿಂಗ್ ಜೀವಂತವಿರಿಸಿತು. ಆದರೂ ಅಂತಿಮವಾಗಿ 7 ವಿಕೆಟ್‌ಗೆ 199 ರನ್‌ಗಳಿಸಲಷ್ಟೇ ಶಕ್ತಗೊಂಡಿತು. ಇದರೊಂದಿಗೆ 37 ರನ್‌ಗಳ ಗೆಲುವು ಒಲಿಸಿಕೊಂಡ ಪಂಜಾಬ್ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿ, ಪ್ಲೇಆ್ಗೂ ಸನಿಹಗೊಂಡಿತು.

ಪ್ರಭ್‌ಸಿಮ್ರನ್ ಬ್ಯಾಟಿಂಗ್ ಅಸಾಧಾರಣ ಮತ್ತು ಕಣ್ಣಿಗೆ ಆಹ್ಲಾದಕರವಾಗಿತ್ತು. ಎಲ್ಲ ಆಟಗಾರರು ಸರಿಯಾದ ಸಮಯದಲ್ಲಿ ತಂಡದ ಗೆಲುವಿಗೆ ಕೊಡುಗೆ ನೀಡಿದರು. ಅಂಕಿ-ಅಂಶಗಳ ಬಗ್ಗೆ ಅಥವಾ ರಕ್ಷಿಸಲು ಉತ್ತಮ ಸ್ಕೋರ್ ಏನು ಎಂಬುದರ ಬಗ್ಗೆ ಯೋಚಿಸುವುದಿಲ್ಲ.ನಾವು ಅದೃಷ್ಟವಂತರು, ಆದರೆ ಅದೃಷ್ಟವು ಕಠಿಣ ಪರಿಶ್ರಮದಿಂದ ಬಂದಿದೆ. ಪ್ರತಿಯೊಬ್ಬ ಆಟಗಾರರು ತಮ್ಮ ಪಾತ್ರಗಳನ್ನು ನಿರ್ವಹಿಸಿದ ರೀತಿ ಅತ್ಯುತ್ತಮವಾಗಿತ್ತು.
ಶ್ರೇಯಸ್ ಅಯ್ಯರ್, ನಾಯಕ, ಪಂಜಾಬ್ ಕಿಂಗ್ಸ್

11. ಪಂಜಾಬ್ ಕಿಂಗ್ಸ್ ತಂಡ 11 ವರ್ಷಗಳ ಬಳಿಕ ಅಂಕಪಟ್ಟಿಯಲ್ಲಿ 15 ಅಂಕ ಕಲೆಹಾಕಿತು. 2014ರಲ್ಲಿ ಕೊನೆಯದಾಗಿ 22 ಅಂಕ ಕಲೆಹಾಕಿತ್ತು. 2022ರಲ್ಲಿ 14 ಅಂಕ ಹೊಂದಿದ್ದು, ಗರಿಷ್ಠ.

 

Share This Article
blank

ಈ 4 ವಿಷಯಗಳ ಬಗ್ಗೆ ಮಾತನಾಡಬೇಡಿ! ಯಶಸ್ವಿ ಜೀವನ ನಿಮ್ಮದೆ…. successful life

successful life: ಪ್ರತಿಯೊಬ್ಬರ ಜೀವನವೂ ಅನಿರೀಕ್ಷಿತ ತಿರುವುಗಳಿಂದ ತುಂಬಿರುತ್ತದೆ. ಯಶಸ್ಸು, ವೈಫಲ್ಯ, ಸಂತೋಷ, ದುಃಖ, ಅದೃಷ್ಟ,…

ನೀವು ಎಷ್ಟೇ ಸಂಪಾದಿಸಿದರೂ ಕೈಯಲ್ಲಿ ಹಣ ಉಳಿಯುತ್ತಿಲ್ಲವೇ? ಸಾಲದಲ್ಲಿ ಮುಳುಗುತ್ತಿದ್ದೀರಾ? ಇಲ್ಲಿವೆ ಸಲಹೆಗಳು..Money Tips

Money Tips: ನಾವು ದಿನ ನಿತ್ಯ ಕಷ್ಟ ಪಟ್ಟು ದುಡಿದು ಹಣ ಸಂಪಾದಿಸುತ್ತೇವೆ. ಆದರೆ ನಮ್ಮ…

blank