20.4 C
Bengaluru
Monday, January 20, 2020

ಪಿಂಕ್​ಬಾಲ್ ಅಹರ್ನಿಶಿ ಪರೀಕ್ಷೆ!

Latest News

ಸಿಎಎ ಬೆಂಬಲಿಸಿ ರ‌್ಯಾಲಿ

ಬಾದಾಮಿ: ವಿಶ್ವದ ದೊಡ್ಡ ಹಿಂದು ರಾಷ್ಟ್ರವಾದ ಭಾರತದ ಸಂಸ್ಕೃತಿ ಉಳಿಸಿ ಬೆಳೆಸಲು ಕೇಂದ್ರ ಸರ್ಕಾರ ಪೌರತ್ವ ತಿದ್ದ್ದುಪಡಿ ಕಾಯ್ದೆ ಜಾರಿಗೆ ತಂದಿದೆ. ಇದರಿಂದ...

ಕೋಟೆನಗರಿಯಲ್ಲಿ ಆಕರ್ಷಕ ಪಥ ಸಂಚಲನ

ಬಾಗಲಕೋಟೆ: ಸಂಕ್ರಾಂತಿ ಹಬ್ಬದ ಅಂಗವಾಗಿ ಆರ್‌ಎಸ್‌ಎಸ್ ಅಂಗ ಸಂಸ್ಥೆ ರಾಷ್ಟ್ರ ಸೇವಿಕಾ ಸಮಿತಿ ನೇತೃತ್ವದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸ್ವಯಂ ಸೇವಕಿಯರ ಘೋಷ ಸಹಿತ...

ಧರ್ಮದಲ್ಲಿ ರಾಜಕೀಯ ಸಲ್ಲ

ತೇರದಾಳ: ಧರ್ಮ ಶ್ರೇಷ್ಠವಾಗಿದ್ದು, ಧರ್ಮದಲ್ಲಿ ರಾಜಕೀಯ ಬೆರೆಸಬೇಡಿ. ವೀರಶೈವರು ಲಿಂಗವನ್ನು ತ್ರಿಕಾಲಗಳಲ್ಲಿ ಪೂಜೆಗೈಯುತ್ತ ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಧರ್ಮ ಮತ್ತು ಗುರು ಜೀವನ...

ಕಲಾದಗಿಯಲ್ಲಿ ಆರ್ಥಿಕ ಗಣತಿಗೆ ಅಸಹಕಾರ

ಕಲಾದಗಿ: ಗ್ರಾಮದಲ್ಲಿ ರಾಷ್ಟ್ರೀಯ 7ನೇ ಆರ್ಥಿಕ ಗಣತಿ ಕಾರ್ಯ ಒಂದು ವಾರದಿಂದ ಸ್ಥಗಿತಗೊಂಡಿದ್ದು, ಪ್ರಬಲ ಕೋಮಿನ ನೂರಾರು ಮನೆಯವರು ಆರ್ಥಿಕ ಗಣತಿದಾರರಿಗೆ ಮಾಹಿತಿ...

ವೇಗ ಕಾಣದ ಫಾಸ್ಟ್ಯಾಗ್​ !

ಹೀರಾನಾಯ್ಕ ಟಿ. ವಿಜಯಪುರ: ವಾಹನಗಳಿಗೆ ಕಡ್ಡಾಯವಾಗಿ ಫಾಸ್ಟ್ಯಾಗ್ ​ಅಳವಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶಿಸಿದೆ. ಆದರೆ, ಸಾಕಷ್ಟು ವಾಹನಗಳಿಗೆ ಫಾಸ್ಟ್ಯಾಗ್  ಅಳವಡಿಸದೆ ಇರುವುದರಿಂದ...

ಭಾರತ ತಂಡ ತನ್ನ 540ನೇ ಟೆಸ್ಟ್ ಪಂದ್ಯದಲ್ಲಿ ಹೊಸ ಮೈಲಿಗಲ್ಲು ನೆಡಲು ಮುಂದಾಗಿದೆ. ಪ್ರವಾಸಿ ಬಾಂಗ್ಲಾದೇಶ ವಿರುದ್ಧ ಕೋಲ್ಕತದ ಈಡನ್ ಗಾರ್ಡನ್​ನಲ್ಲಿ ಶುಕ್ರವಾರ ಆರಂಭವಾಗಲಿರುವ 2ನೇ ಟೆಸ್ಟ್ ಪಂದ್ಯವನ್ನು ಅಹರ್ನಿಶಿಯಾಗಿ ಆಡಲು ಮುಂದಾಗಿದೆ. ಡೇ-ನೈಟ್, ಪಿಂಕ್ ಬಾಲ್ ಟೆಸ್ಟ್ ಎಂದೂ ಗುರುತಿಸಲಾಗುವ ಹಗಲುರಾತ್ರಿ ಟೆಸ್ಟ್ ಪಂದ್ಯವನ್ನು ಕ್ರಿಕೆಟ್ ವಲಯಕ್ಕೆ ಐಸಿಸಿ 2012ರ ಅಕ್ಟೋಬರ್​ನಲ್ಲಿ ಅಧಿಕೃತಗೊಳಿಸಿತ್ತು. ಅದಾದ ಮೂರು ವರ್ಷಗಳ ಬಳಿಕ 2015ರ ನವೆಂಬರ್ 27ರಂದು ಅಡಿಲೇಡ್​ನಲ್ಲಿ ಆಸ್ಟ್ರೇಲಿಯಾ ಹಾಗೂ ಪ್ರವಾಸಿ ನ್ಯೂಜಿಲೆಂಡ್ ನಡುವೆ ಮೊಟ್ಟಮೊದಲ ಅಹರ್ನಿಶಿ ಟೆಸ್ಟ್ ಪಂದ್ಯ ನಡೆದಿತ್ತು. ಆ ಮೂರು ವರ್ಷಗಳಲ್ಲಿ ಬಹುದೊಡ್ಡ ಚರ್ಚೆಗೆ ಕಾರಣವಾಗಿದ್ದು ಡೇ-ನೈಟ್ ಟೆಸ್ಟ್​ಗೆ ಬಳಸುವ ಚೆಂಡಿನ ಬಗ್ಗೆ. ಟೆಸ್ಟ್ ಪಂದ್ಯದಲ್ಲಿ ಬಳಸುವ ಎಂದಿನ ಕೆಂಪು ಚೆಂಡನ್ನು, ದೃಶ್ಯತೆಯ ಕಾರಣದಿಂದಾಗಿ ಅಹರ್ನಿಶಿ ಟೆಸ್ಟ್​ಗೆ ಬಳಸಲು ಸಾಧ್ಯವಾಗುತ್ತಿರಲಿಲ್ಲ. ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ಬಳಸುವ ಬಿಳಿ ಬಣ್ಣದ ಚೆಂಡುಗಳು, ಶ್ವೇತ ಸಮವಸ್ತ್ರದ ಟೆಸ್ಟ್ ಪಂದ್ಯಗಳಲ್ಲಿ ಗೊಂದಲ ಸೃಷ್ಟಿಸಬಹುದು. ಹೀಗಾಗಿ ಹೊಸ ಬಣ್ಣದ ಚೆಂಡುಗಳ ಆವಿಷ್ಕಾರಕ್ಕೆ ಮುಂದಾಗಿದ್ದು ಆಸ್ಟ್ರೇಲಿಯಾದ ಕುಕಬೂರಾ ಕಂಪನಿ. ಟೆನಿಸ್ ಚೆಂಡುಗಳ ಬಣ್ಣದ ‘ಆಪ್ಟಿಕ್ ಯೆಲ್ಲೋ’, ಅಚ್ಚ ಕೇಸರಿ ಬಣ್ಣದೊಂದಿಗೆ ಗುಲಾಬಿ ಬಣ್ಣದ ಚೆಂಡುಗಳನ್ನು ಪರೀಕ್ಷೆ ಮಾಡಲಾಗಿತ್ತು. ಕೊನೆಗೆ ಆಪ್ಟಿಕ್ ಯೆಲ್ಲೋ ಹಾಗೂ ಬ್ರೖೆಟ್ ಆರೆಂಜ್ ಬಣ್ಣದ ಚೆಂಡುಗಳ ಬಗ್ಗೆ ಬ್ಯಾಟ್ಸ್ ಮನ್​ಗಳು ದೂರು ಹೇಳಿದ್ದರಿಂದ ಚೆಂಡು ತಯಾರಿಕ ಕಂಪನಿ ಗುಲಾಬಿ ಬಣ್ಣದ ಚೆಂಡುಗಳನ್ನು ಡೇ-ನೈಟ್ ಟೆಸ್ಟ್​ಗೆ ಫಿಕ್ಸ್ ಮಾಡಿತು. ಬ್ರೖೆಟ್ ಆರೆಂಜ್ ಹಾಗೂ ಆಪ್ಟಿಕ್ ಯೆಲ್ಲೋ ಬಣ್ಣದ ಚೆಂಡುಗಳು ಮೈದಾನದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದ್ದರೂ, ದೊಡ್ಡ ಮಟ್ಟದ ಕ್ಯಾಚ್​ಗಳನ್ನು ಪಡೆಯುವಾಗ ಫೀಲ್ಡರ್​ಗಳು ಕಷ್ಟಪಡುತ್ತಿದ್ದರು. ಇದೇ ಕಾರಣಕ್ಕೆ ಪಿಂಕ್ ಬಾಲ್​ಅನ್ನು ಡೇ-ನೈಟ್ ಟೆಸ್ಟ್​ಗೆ ಬಳಸಲು ಐಸಿಸಿ ಒಪ್ಪಿಗೆ ನೀಡಿತ್ತು.

ಎಸ್​ಜಿ ಪಿಂಕ್​ಬಾಲ್ ಬಳಕೆಗೆ ಕಾರಣ?

ಬಿಸಿಸಿಐ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಎಸ್​ಜಿ (ಸಾನ್ಸ್​ಪೆರಿಲ್ಸ್ ಗ್ರೀನ್​ಲಾಂಡ್ಸ್) ಪಿಂಕ್​ಬಾಲ್​ಗಳನ್ನು ಆರಂಭದಲ್ಲಿ ಬಳಸುತ್ತಿತ್ತು. ಆದರೆ, ಕಳೆದ ಕೆಲ ವರ್ಷಗಳಿಂದ ಪಿಂಕ್​ಬಾಲ್ ಕ್ರಿಕೆಟ್​ಗೆ ಕುಕಬೂರಾ ಪಿಂಕ್​ಬಾಲ್​ಗಳನ್ನು ಬಳಸಲು ಆರಂಭಿಸಿತ್ತು. 2016ರಲ್ಲಿ ಸೌರವ್ ಗಂಗೂಲಿ ಬಂಗಾಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿಯೇ ಬಿಸಿಸಿಐ ಮೊಟ್ಟ ಮೊದಲ ಪಿಂಕ್ ಬಾಲ್ ಪಂದ್ಯವನ್ನು ಆಡಿಸಿತ್ತು. ಅಂದು ನಡೆದಿದ್ದ ದುಲೀಪ್ ಟ್ರೋಫಿ ಪಂದ್ಯಕ್ಕೆ ಕುಕಬೂರಾ ಪಿಂಕ್​ಬಾಲ್​ಅನ್ನು ಬಳಸಲಾಗಿತ್ತು. ಬಾಂಗ್ಲಾ ವಿರುದ್ಧದ ಪಂದ್ಯಕ್ಕೆ ಕುಕಬೂರಾ ಕಂಪನಿಯ ಪಿಂಕ್​ಬಾಲ್​ಗಳನ್ನೇ ಬಳಸಬಹುದಿತ್ತಲ್ಲವೇ ಎನ್ನುವ ಪ್ರಶ್ನೆಗೆ ಉತ್ತರಿಸಿದ್ದ ಗಂಗೂಲಿ, ‘ಒಂದೇ ಸರಣಿಯಲ್ಲಿ ಎರಡು ಭಿನ್ನ ಕಂಪನಿಯ ಚೆಂಡುಗಳನ್ನು ಬಳಕೆ ಮಾಡುವಂತಿಲ್ಲ. ಇದು ಐಸಿಸಿ ನಿಯಮ’ ಎಂದು ಹೇಳಿದ್ದಾರೆ.

3 ಚೆಂಡುಗಳಲ್ಲಿ ಇರುವ ಭಿನ್ನತೆ ಏನು?

ಕೆಂಪು, ಬಿಳಿ ಹಾಗೂ ಗುಲಾಬಿ ಬಣ್ಣದ ಚೆಂಡುಗಳ ಸಿದ್ಧ ಮಾಡುವ ಕ್ರಮ ಹೆಚ್ಚೂ ಕಡಿಮೆ ಒಂದೇ ರೀತಿಯದ್ದಾದರೂ, ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ಈ ಚೆಂಡುಗಳು ವರ್ತಿಸುವ ಕ್ರಮದಲ್ಲಿ ಭಿನ್ನತೆ ಹೊಂದಿವೆ. ಬಿಳಿ ಬಣ್ಣದ ಚೆಂಡುಗಳಿಗಿಂತ ಪಿಂಕ್​ಬಾಲ್​ಗಳು ನಿಧಾನಗತಿಯದ್ದು, ಆದರೆ, ರಾತ್ರಿಯ ವೇಳೆ ಕೆಂಪು ಚೆಂಡಿಗಿಂತ ಹೆಚ್ಚಿನ ಸ್ಪಷ್ಟತೆ ಹೊಂದಿವೆ. ಆ ಕಾರಣಕ್ಕಾಗಿಯೇ ಡೇ-ನೈಟ್ ಟೆಸ್ಟ್​ಗೆ ಸಾಂಪ್ರದಾಯಿಕ ಕೆಂಪು ಚೆಂಡಿನ ಬದಲು ಪಿಂಕ್​ಬಾಲ್​ಅನ್ನು ಬಳಸಲು ತೀರ್ವನಿಸಲಾಗಿದೆ. ವಾಟರ್​ಫ್ರೂಫ್ ಆಗಿರಬೇಕು ಎನ್ನುವ ಕಾರಣಕ್ಕೆ ಕೆಂಪು ಚೆಂಡುಗಳ ಮೇಲೆ ಹೊಳಪು ಬರುವಂಥ ಗ್ರೀಸ್​ನ ಪದರವನ್ನು ಹಾಕಲಾಗುತ್ತದೆ. ಆದರೆ, ಪಿಂಕ್ ಬಾಲ್​ಗೆ ಇಂಥ ಯಾವುದೇ ಗ್ರೀಸ್​ಗಳನ್ನು ಬಳಸಲಾಗುವುದಿಲ್ಲ. ಹಾಗೇನಾದರೂ ಬಳಸಿದರೆ, ಪಿಂಕ್ ಚೆಂಡುಗಳು ಹೊಳಪು ಕಳೆದುಕೊಂಡ ಬಳಿಕ, ಸ್ಪಷ್ಟವಾಗಿ ಕಾಣುವುದಿಲ್ಲ.

ಕುಕಬೂರಾ, ಎಸ್​ಜಿ, ಡ್ಯೂಕ್

ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಈ ಮೂರು ಕಂಪನಿಗಳ ಚೆಂಡುಗಳು ಪ್ರಚಲಿತದಲ್ಲಿವೆ. ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ಬಳಸುವ ಬಿಳಿ ಚೆಂಡಿನ ಅನ್ವೇಷಕರಾಗಿರುವ ಆಸ್ಟ್ರೇಲಿಯಾದ ಕುಕಬೂರಾ ಕಂಪನಿಯೇ ಮೊದಲು ಪಿಂಕ್ ಚೆಂಡುಗಳನ್ನು ತಯಾರಿಸಿತ್ತು. ಭಾರತ, ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ಹೊರತಾಗಿ ಇತರ ಯಾವುದೇ ದೇಶಗಳಲ್ಲಿ ನಡೆಯುವ ಟೆಸ್ಟ್ ಪಂದ್ಯಕ್ಕೆ ಈಗಲೂ ಕುಕಬೂರಾ ಚೆಂಡನ್ನೇ ಬಳಸಲಾಗುತ್ತದೆ. ಭಾರತದಲ್ಲಿ ಟೆಸ್ಟ್ ಕ್ರಿಕೆಟ್​ಗೆ ಎಸ್​ಜಿ ಕಂಪನಿಯ ಚೆಂಡುಗಳನ್ನು ಬಳಸಿದರೆ, ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್​ನಲ್ಲಿ ಡ್ಯೂಕ್ ಕಂಪನಿಯ ಚೆಂಡನ್ನು ಬಳಸುತ್ತಾರೆ. ಈ ಮೂರೂ ಚೆಂಡುಗಳು ತನ್ನ ಎರಡು ಭಾಗದಲ್ಲಿ ತಲಾ ಮೂರರಂತೆ ಒಟ್ಟು ಆರು ಹೊಲಿಗೆಗಳನ್ನು ಹೊಂದಿರುತ್ತವೆ. ಇದನ್ನು ಸೀಮ್ ಎನ್ನುತ್ತಾರೆ. ಕುಕಬೂರಾ ಚೆಂಡಿನ ಸೆಂಟ್ರಲ್ ಸೀಮ್​ನ್ನು ಮಾತ್ರವೇ ಕೈಯಲ್ಲಿ ಹೊಲಿಯಲಾಗುತ್ತದೆ. ಉಳಿದ ಎರಡು ಸೀಮ್ಳನ್ನು ಯಂತ್ರಗಳ ಮೂಲಕ ಮಾಡಲಾಗುತ್ತದೆ. ಆದರೆ, ಎಸ್​ಜಿ ಹಾಗೂ ಡ್ಯೂಕ್ ಚೆಂಡಿನ ಎಲ್ಲ ಆರು ಹೊಲಿಗೆಗಳನ್ನು ಕೈಯಿಂದ ಹಾಕಲಾಗುತ್ತದೆ.

ಸಂಧ್ಯಾಕಾಲವೇ ಬೌಲರ್​ಗಳ ಸಮಯ

ಈವರೆಗೂ ನಡೆದಿರುವ ಎಲ್ಲ ಪಿಂಕ್​ಬಾಲ್ ಟೆಸ್ಟ್​ಗಳನ್ನು ಗಮನಿಸಿದರೆ, ಸಂಧ್ಯಾಕಾಲದ ಸಮಯದಲ್ಲಿಯೇ (ಟ್ವೆಲೈಟ್ ಜೋನ್) ಬೌಲರ್​ಗಳು ದೊಡ್ಡ ಮಟ್ಟದ ಯಶಸ್ಸು ಸಂಪಾದಿಸಿದ್ದಾರೆ. ಟೀಮ್ ಇಂಡಿಯಾ ನಾಯಕ ಕೊಹ್ಲಿ ಕೂಡ ಈ ಅವಧಿಯಲ್ಲಿಯೇ ಬ್ಯಾಟ್ಸ್​ಮನ್​ಗಳು ಹೆಚ್ಚಿನ ಕಾಲ ಪಿಂಕ್​ಬಾಲ್​ಅನ್ನು ಎದುರಿಸುವ ಅಭ್ಯಾಸ ಮಾಡುವಂತೆ ಸೂಚಿಸಿದ್ದಾರೆ. ಒಂದೆಡೆ ಸೂರ್ಯ ಮುಳುಗುತ್ತಿರುವಾಗ ಇನ್ನೊಂದೆಡೆ ಫ್ಲಡ್​ಲೈಟ್ ಒಂದೊಂದಾಗಿ ಉರಿದುಕೊಳ್ಳುವ ಈ ಸಮಯದಲ್ಲಿ ಬ್ಯಾಟ್ಸ್​ಮನ್​ಗಳಿಗೆ ಚೆಂಡು ಎದುರಿಸುವುದು ಕಷ್ಟವಾಗುತ್ತದೆ. ನೈಸರ್ಗಿಕ ಹಾಗೂ ವಿದ್ಯುತ್​ಚಾಲಿತ ಬೆಳಕುಗಳು ವಾತಾವರಣದಲ್ಲಿ ಮಿಶ್ರಣವಾಗುವ ಕಾರಣ ಚೆಂಡನ್ನು ಕಾಣುವುದು ಬ್ಯಾಟ್ಸ್​ಮನ್​ಗಳಿಗೆ ಕಷ್ಟವಾಗುತ್ತದೆ. ಅಲ್ಲದೆ, ಈ ಅವಧಿಯಲ್ಲಿ ತಾಪಮಾನ ಕೂಡ ಕುಸಿಯುವ ಕಾರಣ ಚೆಂಡು ಹೆಚ್ಚಿನ ಸ್ವಿಂಗ್ ಪಡೆದುಕೊಂಡು ಬೌಲರ್​ಗಳಿಗೆ ದೊಡ್ಡ ಮಟ್ಟದ ನೆರವು ನೀಡುತ್ತದೆ.

ಸ್ವಿಂಗ್ ಕಡಿಮೆ, ಸ್ಪಿನ್ನರ್ಸ್​ಗೆ ಕಷ್ಟ

ಬಾಳಿಕೆ ಹಾಗೂ ಸ್ಪಷ್ಟತೆಯಲ್ಲಿ ಬಿಳಿ ಹಾಗೂ ಕೆಂಪು ಚೆಂಡಿಗಿಂತ ಪಿಂಕ್​ಬಾಲ್​ಗೆ ಹೆಚ್ಚಿನ ಅಂಕವನ್ನು ನಿಸ್ಸಂಶಯವಾಗಿ ನೀಡಬಹುದು. ಬಿಳಿ ಹಾಗೂ ಗುಲಾಬಿ ಬಣ್ಣದ ಚೆಂಡುಗಳು ಆರಂಭದಲ್ಲಿ ಕೆಂಪು ಚೆಂಡಿಗಿಂತ ಹೆಚ್ಚು ಸ್ವಿಂಗ್ ಆಗುತ್ತವೆ. ಆದರೆ, ಕೆಂಪು ಚೆಂಡಿಗಿಂತ ಬೇಗ ಸ್ವಿಂಗ್​ಅನ್ನು ಕಳೆದುಕೊಳ್ಳುತ್ತದೆ. ಪಿಂಕ್ ಚೆಂಡಿನ ಸೀಮ್ ಅದ್ಭುತವಾಗಿ ಇದ್ದರೂ, ಚೆಂಡು ಮೃದುವಾದ ಬಳಿಕ ಸ್ವಿಂಗ್ ಕೂಡ ಮಾಯವಾಗುತ್ತದೆ. ಗುಲಾಬಿ ಬಣ್ಣವನ್ನು ಸ್ವಲ್ಪ ಹೆಚ್ಚು ಬಳಿಯುವ ಕಾರಣಕ್ಕಾಗಿ ಚೆಂಡಿನ ಚರ್ಮ ಬಹಳ ಬೇಗ ಮಾಸುವುದಿಲ್ಲ. ಅದರೆ, ರಿವರ್ಸ್ ಸ್ವಿಂಗ್ ಮಾಡುವುದು ಕಠಿಣವಾದ ಬಳಿಕ ಸ್ಪಿನ್ನರ್​ಗಳು ಶ್ರಮವಹಿಸಬೇಕಾಗುತ್ತದೆ.

ಮ್ಯಾಚ್ ಕಂಡೀಷನ್, ಫಲಿತಾಂಶ

ಸ್ವಿಂಗ್​ಅನ್ನು ಬೇಗನೆ ಕಳೆದುಕೊಳ್ಳುವ ಪಿಂಕ್​ಬಾಲ್ ಬಗ್ಗೆ ಕೆಲ ದೂರುಗಳು ಇದ್ದ ನಡುವೆಯೂ ಈವರೆಗೂ ಎಲ್ಲ 11 ಅಹರ್ನಿಶಿ ಪಂದ್ಯಗಳು ಸ್ಪಷ್ಟ ಫಲಿತಾಂಶ ಕಂಡಿವೆ. ಸದರ್ನ್ ಹ್ಯಾಂಪ್​ಷೈರ್ ವಲಯಗಳ (ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್) ಪಿಂಕ್​ಬಾಲ್ ಟೆಸ್ಟ್​ನಲ್ಲಿ ಬೌಲರ್​ಗಳು, ಅದರಲ್ಲೂ ವೇಗಿಗಳು ಪಾರಮ್ಯ ಮೆರೆದಿದ್ದರೆ, ಇಂಗ್ಲೆಂಡ್ ಹಾಗೂ ಏಷ್ಯಾ ವಲಯದಲ್ಲಿ ನಡೆದ ಪಂದ್ಯಗಳು ಬ್ಯಾಟ್ಸ್​ಮನ್​ಗಳ ಅಬ್ಬರಕ್ಕೆ ಸಾಕ್ಷಿಯಾಗಿವೆ.

ಆಸೀಸ್ ಯಶಸ್ವಿ ವಿಂಡೀಸ್ ಕಳಪೆ

ಡೇ-ನೈಟ್ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ ಅತ್ಯಂತ ಯಶಸ್ವಿ ತಂಡ. ಫ್ಲಡ್​ಲೈಟ್ ಅಡಿಯಲ್ಲಿ ಆಡಿದ ಐದೂ ಪಂದ್ಯಗಳನ್ನು ಆಸೀಸ್ ಗೆದ್ದಿದೆ. ಶ್ರೀಲಂಕಾ 2ನೇ ಯಶಸ್ವಿ ತಂಡ. ಆಡಿದ ಮೂರು ಪಂದ್ಯಗಳಲ್ಲಿ 2ರಲ್ಲಿ ಗೆದ್ದಿದೆ. ವಿಂಡೀಸ್ ತಂಡ ಆಡಿದ ಮೂರೂ ಪಂದ್ಯಗಳಲ್ಲಿ ಸೋಲು ಕಂಡಿದೆ.

25: ಭಾರತ ಕಳೆದ 25 ವರ್ಷಗಳಿಂದ ಅಂದರೆ, 1994ರಿಂದಲೂ ತವರಿನ ಟೆಸ್ಟ್ ಪಂದ್ಯಗಳಲ್ಲಿ ಎಸ್​ಜಿ ಚೆಂಡುಗಳನ್ನು ಬಳಸುತ್ತಿದೆ. ಆದರೆ, ವಿಶ್ವದ ಎಲ್ಲ ಕಡೆ ನಡೆಯುವ ಅಂತಾರಾಷ್ಟ್ರೀಯ ಸೀಮಿತ ಓವರ್​ಗಳ ಪಂದ್ಯಗಳು ಕುಕಬೂರಾ ಚೆಂಡಿನಲ್ಲಿ ನಡೆಯುತ್ತವೆ.

72: ಕೋಲ್ಕತ ಟೆಸ್ಟ್ ಪಂದ್ಯಕ್ಕಾಗಿ ಬಿಸಿಸಿಐ, ಮೀರಠ್​ನಲ್ಲಿರುವ ಎಸ್​ಜಿ ಕಂಪನಿಗೆ 6 ಡಜನ್ ಅಂದರೆ, 72 ಪಿಂಕ್​ಬಾಲ್​ಗಳನ್ನು ಬಿಸಿಸಿಐ ನವೆಂಬರ್ 6 ರಂದು ಆರ್ಡರ್ ಮಾಡಿದೆ.

ವಿಡಿಯೋ ನ್ಯೂಸ್

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...