More

  ರಾಜೇಗೌಡರಿಗೆ ಪ್ಲಾಟಿನಂ ಪ್ಲಸ್ ಅವಾರ್ಡ್

  ಬೈಲಕುಪ್ಪೆ: ರೋಟರಿ ಮಿಡ್ ಟೌನ್ ತಾಲೂಕ ಅಧ್ಯಕ್ಷ ತಿರುಮಲಪುರದ ರಾಜೇಗೌಡ ಅವರಿಗೆ ಇಂಟರ್ ನ್ಯಾಷನಲ್ ರೋಟರಿ ವತಿಯಿಂದ ಪ್ಲಾಟಿನಂ ಪ್ಲಸ್ ಅವಾರ್ಡ್ ಹಾಗೂ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಲಾಯಿತು.

  ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಂಟರ್ ನ್ಯಾಷನಲ್ ರೋಟರಿ ಪ್ರಾಂತಪಾಲ ಎಚ್.ಆರ್ ಕೇಶವ ಪ್ರಶಸ್ತಿ ನೀಡಿ ಅಭಿನಂದಿಸಿದರು.

  ಪಿರಿಯಾಪಟ್ಟಣ ತಾಲೂಕಿನ ಕೊಪ್ಪದ ಖಾಸಗಿ ಹೋಟೆಲ್ ಆವರಣದಲ್ಲಿ ಸೋಮವಾರ ತಾಲೂಕು ರೋಟರಿ ಮಿಡ್ ಟೌನ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ತಾಲೂಕ ಅಧ್ಯಕ್ಷ ತಿರುಮಲಪುರದ ರಾಜೇಗೌಡ, ಮಂಗಳೂರು, ಕೊಡಗು, ಮೈಸೂರು, ಚಾಮರಾಜನಗರ ಡಿಸ್ಟ್ರಿಕ್ಟ್‌ನಿಂದ 88 ಕ್ಲಬ್ಗಳಿದ್ದು, ನಮ್ಮ ಸಂಸ್ಥೆಗೆ ಮೊದಲ ಬಾರಿಗೆ ಅತ್ಯುನ್ನತ ಪ್ರಶಸ್ತಿ ಜತೆಗೆ ಪ್ಲಾಟಿನಂ ಪ್ಲಸ್ ಅವಾರ್ಡ್ ದೊರೆತಿರುವುದು ಸಂತೋಷದ ಸಂಗತಿ ಎಂದರು.

  ಗ್ರಾಮೀಣ ಭಾಗದ ಶಾಲಾ, ಕಾಲೇಜಿಗೆ ಶುದ್ಧ ಕುಡಿಯುವ ನೀರಿನ ಘಟಕ, ಶಾಲಾ ಹಾಗೂ ಅಂಗನವಾಡಿ ಮಕ್ಕಳಿಗೆ ಉಚಿತ ಸಮವಸ್ತ್ರ, ಆರೋಗ್ಯ ಶಿಬಿರ, ಅಂಗವಿಕಲರಿಗೆ ಕೃತಕ ಕಾಲು ಜೋಡಣೆ, ಶಾಲಾ ಮಕ್ಕಳಿಗೆ ಕ್ರೀಡಾ ಸಾಮಗ್ರಿ ವಿತರಣೆ, ಗಿಡ ನೆಡುವ ಕಾರ್ಯಕ್ರಮ.. ಹೀಗೆ 150ಕ್ಕೂ ಹೆಚ್ಚು ಸಮಾಜಮುಖಿ ಕಾರ್ಯಕ್ರಮ ಮಾಡಲಾಗಿದ್ದು, ಇದಕ್ಕಾಗಿ ಪ್ರಶಸ್ತಿ ದೊರೆತಿದೆ ಎಂದರು.

  ರೋಟರಿ ಜೋನ್ ಸಿಕ್ಸ್ ಸಹಾಯಕ ಪ್ರಾಂತಪಾಲ ಸತ್ಯನಾರಾಯಣ, ಹಿರಿಯ ವಕೀಲ ಬಿವಿ ಜವರೇಗೌಡ ಮಾತನಾಡಿದರು. ಜಿಲ್ಲಾ ಸದಸ್ಯರಾದ ರಾಧಾ ಪ್ರಕಾಶ್ ಕಾರಂತ್, ಪ್ರಿಯಾಂಕಾ, ತಾಲೂಕು ಕಾರ್ಯದರ್ಶಿ ಐ.ಕೆ.ಪಿ.ಹೆಗಡೆ, ಬಸವೇಗೌಡ, ರಾಜು, ಹರೀಶ್ ರಘು ಇದ್ದರು.

  See also  ಸಮರ್ಪಕ ವಿದ್ಯುತ್ ಪೂರೈಸುವಂತೆ ಒತ್ತಾಯ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts