- ಬೇಲೂರು: ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರ ನಾಶ ಮಾಡದೆ ಹೆಚ್ಚು ಗಿಡಗಳನ್ನು ಬೆಳೆಸಿದರೆ ಮಾತ್ರ ಉತ್ತಮ ಮಳೆಯಾಗಲು ಸಾಧ್ಯ ಎಂದು ವಲಯ ಅರಣ್ಯ ಅಧಿಕಾರಿ ಮರಿಸ್ವಾಮಿ ಹೇಳಿದರು.
- ಪಟ್ಟಣದ ನ್ಯಾಯಲಯದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಾಮಾಜಿಕ ಅರಣ್ಯ ವಿಭಾಗದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಮಾತನಾಡಿ, ಮರಗಳ ನಾಶದಿಂದ ಮನುಷ್ಯ, ಪ್ರಾಣಿ, ಪಕ್ಷಿಗಳು ತೊಂದರೆ ಅನುಭವಿಸುತ್ತಿವೆ. ಪ್ರತಿಯೊಬ್ಬ ಮನುಷ್ಯ ಮರ ಗಿಡ ಬೆಳೆಸಲು ಮುಂದಾಗಬೇಕು ಎಂದು ಹೇಳಿದರು.
- ಸಾಮಾಜಿಕ ಅರಣ್ಯ ಅಧಿಕಾರಿ ಶ್ವೇತಾ ಮಾತನಾಡಿ, ಒಂದು ಮರ ಕಡಿದರೆ, ಹತ್ತು ಮರಗಳನ್ನು ನೆಡುವ ವ್ಯವಸ್ಥೆಯಾಗಬೇಕು. ಇಲಾಖೆ ಪ್ರಸಕ್ತ ಸಾಲಿನಲ್ಲಿ 5 ಲಕ್ಷ ವಿವಿಧ ಸಸಿಗಳನ್ನು ಬೆಳೆಸಿದ್ದು, ರೈತರು ರಿಯಾಯಿತಿ ದರದಲ್ಲಿ ಸಸಿಗಳನ್ನು ಪಡೆದು ಬೆಳೆಸಲು ಮುಂದಾಗಬೇಕು ಎಂದು ತಿಳಿಸಿದರು.
ಅರಣ್ಯ ಇಲಾಖೆ ಸಿಬ್ಬಂದಿ ಸುಭಾಶ್ಚಂದ್ರ, ಸಂತೋಷ್ಕುಮಾರ್, ಪ್ರಕಾಶ್, ನಾಗರಾಜ್, ಗ್ರೀನರಿ ಟ್ರಸ್ಟ್ ಅಧ್ಯಕ್ಷ ಗಿರೀಶ್, ಪದಾಧಿಕಾರಿಗಳಾದ ಚಂದ್ರಯ್ಯ, ಪರಮೇಶ್, ನಾಗರಾಜ್, ಜ್ಞಾನೇಂದ್ರ, ಪ್ರದೀಪ, ವೆಂಕಟೇಶ್, ಪ್ರಸಾದ್ ಇದ್ದರು.
