ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ಗಳಿಸಿದ ಧೋನಿ ಮಗಳ ಪ್ಲಾಂಕ್ಸ್​ ವಿಡಿಯೋ

ಮುಂಬೈ: ಭಾರತ ಕ್ರಿಕೆಟ್​ ತಂಡದ ಕೂಲ್​ ಕ್ಯಾಪ್ಟನ್​ ಮಹೇಂದ್ರ ಸಿಂಗ್​ ಧೋನಿ ಮಗಳು ಝಿವಾ ತನ್ನ ಕ್ಯೂಟ್​ನೆಸ್​ನಿಂದ ದೇಶದ ಗಮನ ಸೆಳೆದಿದ್ದಾಳೆ. ಅವಳ ಮುದ್ದಾದ ಆಟದ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಆಗಿ ಜನಮನ ಗೆದ್ದಿವೆ.

ಈಗ ಝಿವಾಳ ಹೊಸದೊಂದು ವಿಡಿಯೋವನ್ನು ಸಾಕ್ಷಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಾಕಿದ್ದು ಅದರಲ್ಲಿ ಪುಟ್ಟ ಹುಡುಗಿ ಇದೇ ಮೊದಲ ಬಾರಿಗೆ ಪ್ಲಾಂಕ್ಸ್​ ಮಾಡಿದ್ದಾಳೆ. ಈ ಪ್ಲಾಂಕ್ಸ್​ ವ್ಯಾಯಾಮವನ್ನು ಝಿವಾ ಅತಿ ಸುಲಭವಾಗಿ ಮಾಡುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.
ಸಾಕ್ಷಿ ತಮ್ಮ ಮಗಳ ಪ್ಲಾಂಕ್ಸ್​ ವಿಡಿಯೋ ಜತೆ, ಮಗಳು ತನಗಿಂತ ಹೆಚ್ಚು ಸೆಕೆಂಡ್​ಗಳ ಕಾಲ ಬ್ಯಾಲೆನ್ಸ್​ ಮಾಡಿದ್ದಾಳೆ. ನಾನು ಫೋನ್​ ತೆಗೆದುಕೊಂಡು ಫೋಟೋ ಸೆರೆಹಿಡಿಯುವವರೆಗೂ ಹಾಗೇ ಇದ್ದಳು ಎಂದು ಕ್ಯಾಪ್ಷನ್​ ಬರೆದಿದ್ದಾರೆ.

ಝಿವಾಗೆ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಹಲವು ಪಾಲೋವರ್ಸ್​ ಇದ್ದು, ಈ ವಿಡಿಯೋದಿಂದ ಅವರ ಸಂಖ್ಯೆ ಹೆಚ್ಚಾಗಿದೆ. ಎಂಎಸ್​ಡಿ ಕೂಡ ಆಗಾಗ ತಮ್ಮ ಮುದ್ದು ಮಗಳ ವಿಡಿಯೋವನ್ನು ಅಪ್ಲೋಡ್​ ಮಾಡುತ್ತಿರುತ್ತಾರೆ.