ವಿಮಾನ ಅಪಘಾತದಲ್ಲಿ ಎಂಟು ಜನ ಮೃತಪಟ್ಟರೂ 12 ವರ್ಷದ ಬಾಲಕ ಬದುಕುಳಿದ

ಇಂಡೋನೇಷ್ಯಾ: ವಿಮಾನ ಅಪಘಾತದಲ್ಲಿ ಎಂಟು ಜನ ಮೃತಪಟ್ಟಿದ್ದು, 12 ವರ್ಷದ ಬಾಲಕನೊಬ್ಬ ಪವಾಡ ಸದೃಶವಾಗಿ ಬದುಕುಳಿದ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.

ಪಪುವಾ ನ್ಯೂ ಗಿನಿಯಾ ಬಳಿ ಈ ಅವಘಡ ಸಂಭವಿಸಿದ್ದು ಬಾಲಕ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಚಾರ್ಟರ್ ಡಿಮೊನಿಮ್ ಏರ್ ಎಂಬ ಖಾಸಗಿ ಸಂಸ್ಥೆಗೆ ಸೇರಿದ ವಿಮಾನ ಇದಾಗಿದ್ದು ತಾನ್​ ಮೆರಾಹ್​ನಿಂದ ಒಕ್ಸಿಬಿಲ್​ಗೆ ಪ್ರಯಾಣ ಮಾಡುತ್ತಿತ್ತು. ವಿಮಾನ ಸಿಬ್ಬಂದಿ ಸೇರಿ ಒಂಭತ್ತು ಮಂದಿ ಅದರಲ್ಲಿದ್ದರು. ಈ ಮಧ್ಯೆ ಪೈಲಟ್​ ಏರ್​ ಟ್ರಾಫಿಕ್​ ಕಂಟ್ರೋಲ್​ ಜತೆ ಸಂಪರ್ಕ ಕಳೆದುಕೊಂಡಿದ್ದ ಎನ್ನಲಾಗಿದೆ.

ಪಪುವಾ ನ್ಯೂ ಗಿನಿಯಾ ಪರ್ವತಗಳ ಪ್ರದೇಶ. ಅಲ್ಲಿ ವಿಮಾನ ಸಂಚಾರ ತುಂಬ ಕಷ್ಟ. ಸೂಕ್ತ ತನಿಖೆ ನಡೆಸಿ ಅಪಘಾತಕ್ಕೆ ಕಾರಣ ತಿಳಿಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಲಕನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ ಎನ್ನಲಾಗಿದೆ.