ಕಠ್ಮಂಡು: ಟೇಕಾಫ್ ಆಗುವ ವೇಳೆ ಶೌರ್ಯ ಏರ್ಲೈನ್ಸ್ನ 9ಎನ್-ಎಎಂಇ (ಸಿಆರ್ಜೆ 200) ವಿಮಾನ ಪತನಗೊಂಡು 5 ಮಂದಿ ದುರಂತ ಸಾವಿಗೀಡಾಗಿರುವ ಘಟನೆ ನೇಪಾಳ ರಾಜಧಾನಿ ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು (ಜುಲೈ 24) ಬೆಳಗ್ಗೆ ನಡೆದಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ.
#WATCH | Plane crashes at the Tribhuvan International Airport in Nepal’s Kathmandu
Details awaited pic.twitter.com/DNXHSvZxCz
— ANI (@ANI) July 24, 2024
ವಿಮಾನದಲ್ಲಿ ಪೈಲಟ್ ಸೇರಿ 19 ಮಂದಿ ಇದ್ದರು. ಸದ್ಯ ಐವರ ಮೃತದೇಹವನ್ನು ವಶಕ್ಕೆ ಪಡೆಯಲಾಗಿದೆ. ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂಬುದು ಇನ್ನೂ ಖಚಿತವಾಗಿಲ್ಲ. ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಶೌರ್ಯ ಏರ್‌ಲೈನ್ಸ್ ವಿಮಾನವು ವಿಮಾನಯಾನ ಸಂಸ್ಥೆಯ ತಾಂತ್ರಿಕ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿತ್ತು. ವಿಮಾನದ ಪೈಲಟ್ ಮತ್ತು ಇತರ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.
ವಿಮಾನವು ಕಠ್ಮಂಡುವಿನಿಂದ ಪೋಖರಾಗೆ ತೆರಳುತ್ತಿತ್ತು. ಟೇಕಾಫ್ ಆಗುವಾಗ ರನ್ವೇನಿಂದ ಜಾರಿದ್ದು, ಬೆಳಗ್ಗೆ 11 ಗಂಟೆ ಸುಮಾರಿಗೆ ವಿಮಾನದಲ್ಲಿ ಬೆಂಕಿ ಹೊತ್ತಿಕೊಂಡಿತು. ಈ ಅಪಘಾತದ ನಂತರ ವಿಮಾನದಿಂದ ದಟ್ಟ ಹೊಗೆ ಕಾಣಿಸಿಕೊಂಡಿದೆ. ರಕ್ಷಣಾ ಕಾರ್ಯಾಚರಣೆಗಾಗಿ ಪೊಲೀಸ್ ಸಿಬ್ಬಂದಿ ಮತ್ತು ಅಗ್ನಿಶಾಮಕ ಸಿಬ್ಬಂದಿಯನ್ನು ಸ್ಥಳಕ್ಕೆ ನಿಯೋಜಿಸಲಾಗಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ.
ಶೌರ್ಯ ವಿಮಾನಯಾನ ಸಂಸ್ಥೆಯನ್ನು 2019 ರಲ್ಲಿ ಭಾರತದ ಕುಬೇರ್ ಗ್ರೂಪ್ 630 ಮಿಲಿಯನ್ ನೇಪಾಳಿ ರೂಪಾಯಿಗಳಿಗೆ ಸ್ವಾಧೀನಪಡಿಸಿಕೊಂಡಿತು. 2021ರಲ್ಲಿ ಶೌರ್ಯ ಏರ್ಲೈನ್ಸ್ನಿಂದ ಕುಬೇರ್ ಏರ್‌ಲೈನ್ಸ್ ಎಂದು ಮರುಬ್ರ್ಯಾಂಡ್ ಆಗುತ್ತದೆ ಎಂದು ವರದಿಗಳು ಬಂದವು ಆದರೆ ಅದನ್ನು ನಂತರದಲ್ಲಿ ತಡೆಹಿಡಿಯಲಾಯಿತು. (ಏಜೆನ್ಸೀಸ್)
ದರ್ಶನ್ ಜೈಲುವಾಸ ಹೇಗಿದೆ? ವಿಐಪಿ ಸೌಲಭ್ಯ ಸಿಗ್ತಿದೆಯಾ? ದಾಸನನ್ನು ಭೇಟಿಯಾದ ಸಹಕೈದಿ ಬಿಚ್ಚಿಟ್ಟ ಸತ್ಯವಿದು…
KGF 3 ಹೀರೋ ಬದಲಾವಣೆ! ಯಶ್ ಜತೆಗೆ ಸ್ಟಾರ್ ಹೀರೋಗೆ ಮಣೆ ಹಾಕಿದ್ರಾ ಪ್ರಶಾಂತ್ ನೀಲ್