ಶೀಘ ಸಾವಿರ ಪೆಟ್ರೋಲ್ ಪಂಪ್ ಆರಂಭಿಸುವ ಯೋಜನೆ

jkd 19-1 nirani

ಜಮಖಂಡಿ: ನಿರಾಣಿ ಸಮೂಹ ಸಂಸ್ಥೆಯಿಂದ 1 ಸಾವಿರ ಪೆಟ್ರೋಲ್ ಪಂಪ್ ಪ್ರಾರಂಭಿಸುವ ಯೋಜನೆ ಹೊಂದಲಾಗಿದೆ ಎಂದು ಮಾಜಿ ಸಚಿವ ಉದ್ಯಮಿ ಮುರುಗೇಶ ನಿರಾಣಿ ಹೇಳಿದರು.

ತಾಲೂಕಿನ ಹಿಪ್ಪರಗಿಯ ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಡೆದ ನಿರಾಣಿ ಸಮೂಹದ ವಿಜಯ ಎಂ.ಆರ್.ಎನ್. ಸೌಹಾರ್ದ ಸಹಕಾರಿ, ವಿಶಾಲ ಎಂ.ಆರ್.ಎನ್. ಸೌಹಾರ್ದ ಸಹಕಾರಿ, ಪ್ರಜ್ವಲ್ ವಿವಿಧೋದ್ದೇಶಗಳ ಸಹಕಾರಿ ಹಾಗೂ ಎಂ.ಆರ್.ಎನ್. (ನಿರಾಣಿ) ೌಂಡೇಷನ್ ಸಂಸ್ಥೆಗಳ ವಾರ್ಷಿಕೋತ್ಸವದ ಸಭೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಸಂಸ್ಥೆ ಉತ್ತರ ಕರ್ನಾಟಕದಿಂದ ದಕ್ಷಿಣ ಭಾರತ ಮತ್ತು ಮಹಾರಾಷ್ಟ್ರದವರೆಗೆ ಕಾರ್ಯವ್ಯಾಪ್ತಿ ವಿಸ್ತರಿಸಿಕೊಂಡಿದೆ. 10 ಸಕ್ಕರೆ ಕಾರ್ಖಾನೆ, ಟೆಕ್ಸ್‌ಟೈಲ್, ಶಿಕ್ಷಣ ಸಂಸ್ಥೆ ಸೇರಿ ಹಲವು ಸಂಸ್ಥೆಗಳನ್ನು ನಿರಾಣಿ ಉದ್ಯಮ ಸಮೂಹ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿವೆ, ಪ್ರಸಕ್ತ ಸಾಲಿನಲ್ಲಿ ಅತಿ ಹೆಚ್ಚು ಕಬ್ಬು ನುರಿಸಿ ದೇಶದಲ್ಲೇ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೆ ರೈತರ, ಕಾರ್ಮಿಕರ, ಸಿಬ್ಬಂದಿ ಪರಿಶ್ರಮವೇ ಕಾರಣ ಎಂದರು.

ರೈತರ ಮಕ್ಕಳು ಸ್ವಂತ ಉದ್ಯಮಿಗಳಾಗಬೇಕು. ಬೇರೊಬ್ಬರಿಗೆ ಕೆಲಸ ಕೊಡುವಂತವರಾಗಬೇಕು ಎಂದರು.
ಹಿರಿಯ ನ್ಯಾಯವಾದಿ ರವೀಂದ್ರ ಮುತಾಲಿಕ ದೇಸಾಯಿ ಮಾತನಾಡಿ, ಒಂದು ಸಂಸ್ಥೆ ಬೆಳೆಯಬೇಕಾದರೆ ಅದರ ಹಿಂದೆ ಬಹಳಷ್ಟು ಪರಿಶ್ರಮವಿರುತ್ತದೆ. ಆ ನಿಟ್ಟಿನಲ್ಲಿ ನಿರಾಣಿ ಸಮೂಹ ಸಂಸ್ಥೆ ರಾಜ್ಯ ಹೊರರಾಜ್ಯಗಳಲ್ಲಿ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿಕೊಂಡು ಬದುಕು ಕಟ್ಟಿಕೊಳ್ಳಲು ರೈತರಿಗೆ ಕಾರ್ಮಿಕ ವರ್ಗಕ್ಕೆ ಸಹಕಾರಿಯಾಗಿದೆ ಎಂದರು.

ಎಂ.ಆರ್.ಎನ್ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಮಾತನಾಡಿ, ಈ ಭಾಗದ ರೈತರು ಆರ್ಥಿಕವಾಗಿ ಸಬಲರಾಗಬೇಕು ಎಂಬ ಉದ್ದೇಶದಿಂದ 25 ವರ್ಷಗಳ ಹಿಂದೆ ಹುಟ್ಟುಹಾಕಿರುವ ಸಂಸ್ಥೆ ಅಂತಾರಾಷ್ಟ್ರಮಟ್ಟದಲ್ಲಿ ಮುಂಚೂಣಿಯಲ್ಲಿದ್ದು, ಸಕ್ಕರೆ ಉತ್ಪಾದನೆಗೆ ಇಂಡಸ್ಟ್ರೀಯಲ್ ಕೆಮಿಕಲ್ ಹೊರತುಪಡಿಸಿ ಫುಡ್‌ಗ್ರೇಡ್‌ಗಳನ್ನು ಹಾಕಿ ಸಕ್ಕರೆ ತಯಾರಿಸಲಾಗುತ್ತಿದೆ. ನಮ್ಮ ಉತ್ಪಾದನೆಗಳು ‘ನಮ್ಮದು ಅಡುಗೆ ಮನೆ’ ಎಂದು ಹೇಳಿಕೊಳ್ಳಲು ಹೆಮ್ಮೆ ಅನಿಸುತ್ತದೆ. ಸಹೋದರ ಮುರುಗೇಶ ನಿರಾಣಿ ಅವರು ಮುಂದಾಲೋಚನೆ ಹೊಂದಿ ಅವಶ್ಯಕತೆ ಇದ್ದಲ್ಲಿ ಕಾರ್ಖಾನೆಗಳನ್ನು ಪ್ರಾರಂಭಿಸಿ ರೈತರ, ಕಾರ್ಮಿಕರ ಬಾಳಿಗೆ ಆಶಾಕಿರಣವಾಗಿದ್ದಾರೆ ಎಂದರು.

ವಿಜಯ ಸೌಹಾರ್ದ ಪ್ರಧಾನ ವ್ಯವಸ್ಥಾಪಕ ಎಂ. ಎಚ್. ಪತ್ತೇನ್ನವರ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ 44,464 ಸಾವಿರ ಕೋಟಿ ಹಣಕಾಸಿನ ವಹಿವಾಟು ನಡೆಸುವ ಮೂಲಕ ಸೌಹಾರ್ದ ಸಹಕಾರಿ ಕ್ಷೇತ್ರದಲ್ಲಿ ದಕ್ಷಿಣ ಭಾರತದಲ್ಲೇ ವಿನೂತನ ದಾಖಲೆ ಬರೆದಿದೆ. 7.95 ಕೋಟಿ ರೂ. ಲಾಭ ಗಳಿಸುವ ಜೊತೆಗೆ ಸದಸ್ಯರಿಗೆ ದಾಖಲೆಯ ಶೇ.22 ಲಾಭಾಂಶ ಹಂಚಿಕೆ ಮಾಡಿದೆ. ಕರ್ನಾಟಕ ರಾಜ್ಯಾದ್ಯಂತ 65 ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದು, ಬರುವ ವರ್ಷದಲ್ಲಿ 35 ಶಾಖೆ ತೆರೆದು 100 ಶಾಖೆಗಳ ಗುರಿ ತಲುಪಲಾಗುವುದು. ವಿಶಾಲ ಸೌಹಾರ್ದ ಸಹಕಾರಿಯು 75.45 ಲಕ್ಷ ರೂ. ಲಾಭ ಗಳಿಸಿದೆ ಎಂದು ತಿಳಿಸಿದರು.

ವಿಪ ಸದಸ್ಯ ಹಣಮಂತ ನಿರಾಣಿ, ಪಿ.ಎನ್ ಪಾಟೀಲ, ಪಿ.ಆರ್. ಪಾಲಭಾಂವಿ, ಸುಶೀಲಕುಮಾರ ಬೆಳಗಲಿ, ಈಶ್ವರ ಕರಬಸನವರ, ಮೋಹನ ಜಾಧವ, ಸುರೇಶ ಬಿರಾದಾರ, ಎನ್. ಸಿ. ಚೌಗಲಾ, ಸುರೇಶ ಚಿಂಡಕ, ರಾಹುಲ ಕಲೂತಿ, ಉದಯ ಸಾರವಾಡ, ಯಲ್ಲನಗೌಡ ಪಾಟೀಲ, ಅರವಿಂದಗೌಡ ಪಾಟೀಲ, ಡಾ.ವಿಜಯಲಕ್ಷ್ಮೀ ತುಂಗಳ, ಗುರಲಿಂಗಪ್ಪ ಅಂಗಡಿ, ಹೊಳಬಸು ಬಾಳಶೆಟ್ಟಿ, ಮಾಮೂನ ಪಾರ್ಥನಳ್ಳಿ, ಮಲ್ಲು ಮಲಘಾನ ಇತರರಿದ್ದರು.

ಕೃಷ್ಣಾ ಶಾವಿ ಸ್ವಾಗತಿಸಿದರು. ವಿಶಾಲ ಸೌಹಾರ್ದ ಪ್ರಧಾನ ವ್ಯವಸ್ಥಾಪಕ ಬಿ. ಜಿ. ಹಿಪ್ಪರಗಿ ವರದಿ ವಾಚಿಸಿದರು. ವೆಂಕಟೇಶ ಜಂಬಗಿ ಹಾಗೂ ರಾಜಶೇಖರ ಅಕ್ಕಿ ನಿರೂಪಿಸಿದರು. ಗುರುನಾಥ ಕುಲಕರ್ಣಿ ವಂದಿಸಿದರು.

Share This Article

ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ! ಸೈಲೆಂಟ್ ಆಗಿ ನಿಮ್ಮನ್ನು ಕಿಲ್ಲ ಮಾಡುತ್ತೆ Over Thinking ಅಭ್ಯಾಸ…

ಬೆಂಗಳೂರು:  ಇಂದಿನ ಬಿಡುವಿಲ್ಲದ ಜೀವನದಲ್ಲಿ ನಾವೆಲ್ಲರೂ ಸಣ್ಣ ಪುಟ್ಟ ವಿಚಾರಗಳನ್ನು ಹೆಚ್ಚು ಯೋಚಿಸುತ್ತೇವೆ ( Over…

ಹೆಂಗಸರು ಪ್ರತಿದಿನ ಹೂವು ಮುಡಿಯುವುದರಿಂದ ಆಗುವ ಲಾಭಗಳೇನು?…Wearing Flower

ಬೆಂಗಳೂರು:  ಹೆಣ್ಣುಮಕ್ಕಳು ತಲೆಗೆ ಎಣ್ಣೆ ಹಚ್ಚಿ, ತಲೆ ಬಾಚಿಕೊಂಡು, ನೀಟಾಗಿ ಹೆಣೆದು, ಹೂವಿನಿಂದ ( Wearing…

ನೀವಿದನ್ನು ನಿತ್ಯವೂ ಚಾಚೂ ತಪ್ಪದೇ ಅನುಸರಿಸಿದರೆ ನೀವು ಖಂಡಿತ ಶ್ರೀಮಂತರಾಗ್ತೀರಿ! Rich Person

ಇಂದು ಪ್ರತಿಯೊಬ್ಬರು ಶ್ರೀಮಂತರಾಗಲು ( Rich Person ) ಬಯಸುತ್ತಾರೆ. ತಾವು ದುಡಿದ ಹಣವನ್ನು ಸರಿಯಾದ…