ಬಂಡಿಪುರದಲ್ಲಿ ಸಫಾರಿ ಸ್ಥಳ ಬದಲಾವಣೆ: ಇಷ್ಟು ದಿನ ನಡೆಯುತ್ತಿದ್ದ ಜಾಗದಲ್ಲಿ ನಿರ್ಬಂಧ

ಚಾಮರಾಜನಗರ : ಗುಂಡ್ಲುಪೇಟೆಯ ಬಂಡೀಪುರದಲ್ಲಿ ಸಫಾರಿ ಸ್ಥಳ ಬದಲಾವಣೆಯಾಗಲಿದೆ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿ ಅನ್ವಯ, ಇನ್ನು ಮುಂದೆ ಬಂಡೀಪುರದ ಬದಲು ಮೇಲುಕಾಮನಹಳ್ಳಿಯಲ್ಲಿ ಸಫಾರಿ ನಡೆಯಲಿದೆ.

ಜೂನ್​ 2ರಿಂದಲೇ ಈ ಬದಲಾವಣೆ ಜಾರಿಯಾಗುತ್ತದೆ. ಬಂಡಿಪುರದಲ್ಲಿ ಸದ್ಯ ನಡೆಸಲಾಗುತ್ತಿರುವ ಸಫಾರಿಗೆ ನಿರ್ಬಂಧ ಹಾಕಲಾಗುತ್ತದೆ. ಇನ್ನು ಮುಂದೆ ಸಫಾರಿ ನಡೆಯಲಿರುವ ಸ್ಥಳ ಮೇಲುಕಾಮನಹಳ್ಳಿ ಹಿಮವದ್​ ಗೋಪಾಲಸ್ವಾಮಿ ಬೆಟ್ಟದ ಸಮೀಪವೇ ಇದ್ದು, ವಿಶೇಷ ಹುಲಿ ಸಂರಕ್ಷಣಾದಳದ ಕ್ಯಾಂಪಸ್​ ಆಗಿದೆ.