ಹುಕ್ಕೇರಿ: 25ರಂದು ಪಿಕೆಪಿಎಸ್ ನೂತನ ಕಟ್ಟಡದ ಉದ್ಘಾಟನೆ

ಹುಕ್ಕೇರಿ: ತಾಲೂಕಿನ ಬೆಳವಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ 19 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿದ ಸುಸಜ್ಜಿತ ಸಂಘದ ನೂತನ ಕಟ್ಟಡದ ಉದ್ಘಾಟನೆ ಹಾಗೂ 2018-19 ನೇ ಸಾಲಿನ ಹೊಸ ಪತ್ತು ಹಂಚುವ ಕಾರ್ಯಕ್ರಮ ಶುಕ್ರವಾರ (ಜ.25 ರಂದು) ನಡೆಯಲಿದೆ ಎಂದು ಸಂಘದ ಉಪಾಧ್ಯಕ್ಷ ಅಪ್ಪಾಸಾಹೇಬ ಸಾರಾಪೂರೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬೆಳವಿಯಲ್ಲಿ ಶುಕ್ರವಾರ ಸಂಜೆ 5 ಗಂಟೆಗೆ ಸಮಾರಂಭ ಆಯೋಜಿಸಲಾಗಿದ್ದು, ಬೆಳವಿ ಸಿದ್ದಾರೂಢ ಮಠದ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ನೂತನ ಕಟ್ಟಡ ಉದ್ಘಾಟಿಸಲಿದ್ದಾರೆ.ಡಿ.ವೈ.ಎಸ್.ಪಿ ಡಿ.ಟಿ.ಪ್ರಭು ಕಟ್ಟಡದ ನಾಮಫಲಕವನ್ನು ಅನಾವರಣಗೊಳಿಸುವರು. ಪತ್ತಿನ ಚೆಕ್‌ನ್ನು ತಹಶೀಲ್ದಾರ ರೇಷ್ಮಾ ತಾಳಿಕೋಟಿ ವಿತರಿಸುವರು. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಹಾಗೂ ಬೆಳವಿ ತಾಲೂಕ ಪಂಚಾಯಿತಿ ಸದಸ್ಯ ಬಾಳಾಸಾಹೇಬ ನಿಂಗಪ್ಪಾ ನಾಯಿಕ ವಹಿಸುವರು ಎಂದು ತಿಳಿಸಿದರು.

ಸಮಾರಂಭದಲ್ಲಿ ಡಿಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಎಸ್.ಕೆ.ಅಳಗುಂಡಿ ಸಹಾಯಕ ವ್ಯವಸ್ಥಾಪಕ ಎನ್.ಜಿ.ಕಳಾವಂತ, ಗ್ರಾಮ ಪಂಚಾಯತಿ ಸದಸ್ಯರು,ಸಂಘದ ಆಡಳಿತ ಮಂಡಳಿ ಸದಸ್ಯರು ಹಾಗೂ ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಳ್ಳುವರು ಎಂದು ತಿಳಿಸಿದರು.

ಸಿದ್ಧ್ದಾರೂಢ ಮಠದ ಮೃತ್ಯುಂಜಯ ಶ್ರೀಗಳು,ಸಂಘದ ಅಧ್ಯಕ್ಷ ಬಾಳಾಸಾಹೇಬ ನಾಯಿಕ,ನಿರ್ದೇಶಕ ಮಹಾದೇವ ನಾಯಿಕ,ಗ್ರಾ.ಪಂ ಸದಸ್ಯರಾದ ಮಲ್ಲಪ್ಪ ಭ.ನಾಯಿಕ,ರಾಮಣ್ಣ ತೇರದಾಳಿ,ಎಲ್.ಐ.ಸಿ ಶಿವನಾಯಿಕ ಮತ್ತಿತರರಿದ್ದರು.