ಲಂಡನ್: ಲಾರ್ಡ್ಸ್‌ನಲ್ಲಿ ಮೈದಾನಕ್ಕೆ ನುಗ್ಗಿ ಭಾರತ ಪರ ಫೀಲ್ಡಿಂಗ್ ಮತ್ತು ಲೀಡ್ಸ್‌ನಲ್ಲಿ ಬ್ಯಾಟಿಂಗ್‌ಗೆ ಯತ್ನಿಸಿದ್ದ ಇಂಗ್ಲೆಂಡ್ ಪ್ರೇಕ್ಷಕ ಜಾರ್ವೋ, ಇದೀಗ ಓವಲ್ ಟೆಸ್ಟ್‌ನಲ್ಲೂ ಮೈದಾನಕ್ಕೆ ನುಗ್ಗಿ ಮತ್ತೊಮ್ಮೆ ಭದ್ರತಾ ಮತ್ತು ಸುರಕ್ಷತಾ ಆತಂಕ ಮೂಡಿಸಿದರು.
ಇಂಗ್ಲೆಂಡ್‌ನ ಜನಪ್ರಿಯ ಪ್ರಾಂಕ್‌ಸ್ಟಾರ್ ಎನ್ನಲಾಗಿವ ಜಾರ್ವೋ, ಈ ಬಾರಿಯೂ ಭಾರತ ತಂಡದ ಜೆರ್ಸಿಯೊಂದಿಗೆ ಮೈದಾನಕ್ಕಿಳಿದು ಬೌಲಿಂಗ್ ಮಾಡಲು ಯತ್ನಿಸಿದರು. ಓವಲ್ ಟೆಸ್ಟ್‌ನ 2ನೇ ದಿನವಾದ ಶುಕ್ರವಾರ ಉಮೇಶ್ ಯಾದವ್ ತಮ್ಮ 11ನೇ ಓವರ್ ಬೌಲಿಂಗ್‌ಗೆ ಸಜ್ಜಾಗುತ್ತಿದ್ದ ಸಮಯದಲ್ಲಿ ಭಾರತ ತಂಡದ ಜೆರ್ಸಿಯೊಂದಿಗೆ ಮೈದಾನಕ್ಕೆ ನುಗ್ಗಿ ಬೌಲಿಂಗ್ ರನ್‌ಅಪ್‌ನಲ್ಲಿ ಓಡಿದರು. ಅವರ ಕೈಯಲ್ಲಿ ಚೆಂಡು ಕೂಡ ಇತ್ತು. ಆಗ ಭದ್ರತಾ ಸಿಬ್ಬಂದಿ ಬಂದು ಅವರನ್ನು ಹೊರದಬ್ಬಿದರು.
ಬಿಸಿಸಿಐ ಲಾಂಛನ ಹೊಂದಿರುವ ಟೀಮ್ ಇಂಡಿಯಾ ಟೆಸ್ಟ್ ಜೆರ್ಸಿಯ ಬೆನ್ನ ಹಿಂದೆ ‘ಜಾರ್ವೋ 69’ ಎಂದು ಬರೆಸಿಕೊಂಡಿರುವ ಆತ, ಲಾರ್ಡ್ಸ್‌ನಲ್ಲಿ ಫೀಲ್ಡಿಂಗ್‌ಗೆ ಮುಂದಾಗಿದ್ದಲ್ಲದೆ, ಭದ್ರತಾ ಸಿಬ್ಬಂದಿ ಹೊರದಬ್ಬಲು ಮುಂದಾದಾಗ, ಬಿಸಿಸಿಐ ಲಾಂಛನದ ಕಡೆಗೆ ತೋರಿಸಿ ತಾನು ಭಾರತ ತಂಡದ ಆಟಗಾರ ಎಂಬಂತೆ ವರ್ತಿಸಿದ್ದ. ಆ ವೇಳೆ ಮೊಹಮದ್ ಸಿರಾಜ್ ಮತ್ತು ರವೀಂದ್ರ ಜಡೇಜಾ ಜೋರಾಗಿ ನಕ್ಕಿದ್ದರು.
ಬಳಿಕ ಲೀಡ್ಸ್‌ನಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಚಹಾ ವಿರಾಮದ ಬಳಿಕ ರೋಹಿತ್ ಶರ್ಮ ಔಟಾಗಿ ನಿರ್ಗಮಿಸಿದಾಗ ಈ ಪ್ರೇಕ್ಷಕ ಪ್ಯಾಡ್ ಧರಿಸಿ, ಬ್ಯಾಟ್ ಹಿಡಿದು ಬ್ಯಾಟ್ಸ್‌ಮನ್ ರೀತಿಯಲ್ಲಿ ಮೈದಾನಕ್ಕೆ ನುಗ್ಗಿದ್ದ. ಈ ಮೂಲಕ ಭಾರತ ತಂಡದ 4ನೇ ಕ್ರಮಾಂಕದ ಬ್ಯಾಟ್ಸ್‌ಮನ್ ಎನ್ನುವ ರೀತಿಯಲ್ಲಿ ವರ್ತಿಸಿದ. ಆಗ ಮೈದಾನದ ಭದ್ರತಾ ಸಿಬ್ಬಂದಿ ಆತನನ್ನು ಮೈದಾನದಿಂದ ಹೊರಗೆ ಎಳೆದೊಯ್ದರು. ಬಳಿಕ ಆತನಿಗೆ ಲೀಡ್ಸ್ ಮೈದಾನದಿಂದ ನಿಷೇಧವನ್ನೂ ಹೇರಲಾಗಿತ್ತು.
Jarvo again!!! Wants to bowl this time 😂😂#jarvo69 #jarvo #ENGvIND #IndvsEng pic.twitter.com/wXcc5hOG9f
— Raghav Padia (@raghav_padia) September 3, 2021
ಇದೊಂದು ತಮಾಷೆಯ ಘಟನೆಯಾಗಿದ್ದರೂ, ಭದ್ರತಾ ಮತ್ತು ಬಯೋಬಬಲ್ ಉಲ್ಲಂಘನೆಯ ಆತಂಕವನ್ನು ಸೃಷ್ಟಿಸಿದೆ. ವೀಕ್ಷಕ ವಿವರಣೆಕಾರ ಹರ್ಷಾ ಬೋಗ್ಲೆ, ಸತತ 3ನೇ ಬಾರಿಗೆ ಜಾರ್ವೋ ಭದ್ರತಾ ನಿಯಮ ಉಲ್ಲಂಘನೆ ಮಾಡಿರುವುದನ್ನು ಖಂಡಿಸಿದ್ದು, ಓವಲ್ ಮೈದಾನದ ಭದ್ರತಾ ಲೋಪವನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಮೈದಾನದ ಸಿಬ್ಬಂದಿಯ ತಲೆದಂಡವಾಗಬೇಕು ಎಂದಿದ್ದಾರೆ. ಅಲ್ಲದೆ ಜಾರ್ವೋ ವರ್ತನೆ ಈಗ ಪ್ರಾಂಕ್ ಆಗಿ ಉಳಿದಿಲ್ಲ ಎಂದಿದ್ದಾರೆ.
ಜಾರ್ವೋ ಈಗ ಸರಣಿಯಲ್ಲಿ ಆರ್. ಅಶ್ವಿನ್ ಅವರಿಗಿಂತ ಹೆಚ್ಚು ಬೌಲಿಂಗ್ ಮಾಡಿದ್ದಾರೆ ಎಂದೂ ಇನ್ನು ಕೆಲವರು ಕಾಲೆಳೆದಿದ್ದು, ಭಾರತ ತಂಡ ಹಿರಿಯ ಸ್ಪಿನ್ನರ್ ಅನ್ನು ಕಡೆಗಣಿಸಿರುವುದನ್ನು ಟೀಕಿಸಲು ಈ ಘಟನೆಯನ್ನು ತಮಾಷೆಯಾಗಿ ಬಳಸಿಕೊಂಡಿದ್ದಾರೆ.
https://twitter.com/9990suraj/status/1433753554720722949?ref_src=twsrc%5Etfw%7Ctwcamp%5Etweetembed%7Ctwterm%5E1433753554720722949%7Ctwgr%5E%7Ctwcon%5Es1_&ref_url=https%3A%2F%2Fcircleofcricket.com%2Fcategory%2Fengvind2021%2F68781%2Feng-v-ind-2021-watch-jarvo-is-back-again-bumps-into-jonny-bairstow-during-an-appearance-at-the-oval
ಓವಲ್‌ನಲ್ಲಿ ಭಾರತ ಸಾಧಾರಣ ಮೊತ್ತ, ಆಂಗ್ಲರಿಗೆ ಬೌಲರ್‌ಗಳಿಂದ ತಿರುಗೇಟು