ತಿಮಕಾಪುರ ಶಾಲೆ ವಾರ್ಷಿಕೋತ್ಸವ

ಪಿರಿಯಾಪಟ್ಟಣ: ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಪಾಲಕರು ಹಾಗೂ ವಿದ್ಯಾರ್ಥಿಗಳ ಸಹಕಾರ ಅಗತ್ಯ ಎಂದು ತಿಮಕಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಕುಮಾರ್ ಅಭಿಪ್ರಾಯಪಟ್ಟರು.
ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಪಾಲಕರಲ್ಲಿ ಖಾಸಗಿ ಶಾಲೆಯ ವ್ಯಾಮೋಹ ಕಂಡು ಬರುತ್ತಿದ್ದು, ಸರ್ಕಾರಿ ಶಾಲೆಗಳಲ್ಲಿಯೂ ಗುಣಮಟ್ಟದ ಶಿಕ್ಷಣ ಹಾಗೂ ಮೂಲಸೌಕರ್ಯಗಳು ಲಭ್ಯವಿವೆ ಎಂದು ತಿಳಿಸಿದರು.
ಗ್ರಾಮದ ಮುಖಂಡ ರಾಮಣ್ಣ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ನೂರ್ ಜಾನ್, ಶಿಕ್ಷಕರಾದ ನಟೇಶ್, ಭುವನೇಶ್ವರಿ, ಮುಖಂಡರಾದ ಟಿ.ಸಿ. ಹರೀಶ್, ಕುಮಾರಸ್ವಾಮಿ, ಕೃಷ್ಣೇಗೌಡ, ಕರಿಗೌಡ ಮತ್ತಿತರರು ಹಾಜರಿದ್ದರು.