ಗೌಜಲಹಕ್ಕಿ ಬೇಟೆಯಾಡುತ್ತಿದ್ದವರ ಸೆರೆ

ಪಿರಿಯಾಪಟ್ಟಣ: ತಾಲೂಕಿನ ಮಾಕೋಡು ಸಮೀಪದ ಕಲ್ಕೆರೆ ಗ್ರಾಮದ ಬಳಿಯ ಸಾಮಾಜಿಕ ಅರಣ್ಯ ಪ್ರದೇಶದಲ್ಲಿ ಗೌಜಲಹಕ್ಕಿಗಳನ್ನು ಹಿಡಿದು ಮಾಂಸಕ್ಕಾಗಿ ಹತ್ಯೆ ಮಾಡುತ್ತಿದ್ದ ತಂಡವನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಬಂಧಿಸಿದ್ದಾರೆ.
ತಾಲೂಕಿನ ಮಾಕೊಡು ಗ್ರಾಮದ ಜಬಿವುಲ್ಲ, ಮಂಡ್ಯ ಜಿಲ್ಲೆ ನಾಗಮಂಗಲ ಬಳಿಯ ಶಿಕಾರಿಪುರದ ರಾಧಿಕಾ, ಅಸ್ಮತಿ ಎಂಬುವರನ್ನು ಬಂಧಿಸಲಾಗಿದೆ. ಕಾಂತರಾಜು, ಕಿರಣ್, ಕಲ್ಪನಾ ಸೇರಿ ನಾಲ್ವರು ಪರಾರಿಯಾಗಿದ್ದಾರೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕಲ್ಕೆರೆ ಗ್ರಾಮದ ದೊಡ್ಡಮ್ಮ ತಾಯಿ ದೇವಾಲಯ ಸಮೀಪದ ಜಮೀನಿನಲ್ಲಿ ಗೌಜಲಹಕ್ಕಿಗಳನ್ನು ಹಿಡಿದು ಮಾಂಸಕ್ಕಾಗಿ ಹತ್ಯೆ ಮಾಡುತ್ತಿದ್ದಾರೆ ಎಂದು ಖಚಿತ ಮಾಹಿತಿ ಮೇರೆಗೆ ಮಂಗಳವಾರ ದಾಳಿ ಅರಣ್ಯ ಇಲಾಖೆಯ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಬಂಧಿತರಿಂದ ನಾಲ್ಕು ಜೀವಂತ ಹಕ್ಕಿಗಳು ಮತ್ತು 28 ಹಕ್ಕಿಗಳ ಮಾಂಸ, 2 ಮುಂಗುಸಿಯ ಕಳೇಬರ, ಹಕ್ಕಿಗಳನ್ನು ಹಿಡಿಯಲು ಬಳಸುತ್ತಿದ್ದ ಬಲೆ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಎಸಿಎಫ್ ಸೋಮಪ್ಪ, ಆರ್‌ಎಫ್‌ಒ ರತನ್‌ಕುಮಾರ್, ಡಿಆರ್‌ಎಫ್‌ಒ ಪೆಮ್ಮಯ್ಯ, ಅರಣ್ಯ ಇಲಾಖೆ ಸಿಬ್ಬಂದಿ ರಾಜ್ ,ಪೃಥ್ವಿ, ಕನಕಲಕ್ಷ್ಮೀ ಕವಿತಾ, ಬಸವರಾಜು ಮತ್ತಿತರರು ಪಾಲ್ಗೊಂಡಿದ್ದರು.

ಹಲಾಲ್ ಮಾಡಿ ಗೌಜಲಕ್ಕಿಗಳ ಹತ್ಯೆ: ಪ್ರಕರಣದಲ್ಲಿ ಬಂಧಿತನಾಗಿರುವ ಜಬಿವುಲ್ಲ ಮಸೀದಿಯೊಂದರ ಧರ್ಮ ಗುರುವಾಗಿದ್ದು, ಬೇಟೆಯಾಡಿದ ಗೌಜಲಹಕ್ಕಿಗಳನ್ನು ಹಲಾಲ್ ಮಾಡಿ ಹತ್ಯೆ ಮಾಡಲಾಗುತ್ತಿತ್ತು. ಇದಕ್ಕಾಗಿಯೇ ಅವರನ್ನು ಕರೆದೊಯ್ಯಲಾಗಿತ್ತು ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಹಕ್ಕಿಗಳನ್ನು ಹತ್ಯೆ ಮಾಡುತ್ತಿರುವ ದೃಶ್ಯವನ್ನು ಕೆಲವರು ವಿಡಿಯೋ ಮಾಡಿ ಅರಣ್ಯ ಇಲಾಖೆಗೆ ಕಳುಹಿಸಿದ್ದರು. ಇದರಿಂದ ಜಾಗೃತರಾದ ಅರಣ್ಯ ಇಲಾಖೆ ಸಿಬ್ಬಂದಿ, ದಾಳಿ ನಡೆಸಿ ತಂಡವನ್ನು ಬಂಧಿಸಿದ್ದಾರೆ. ಪರಾರಿಯಾಗಿರುವರ ಪತ್ತೆಗಾಗಿ ಬಲೆ ಬೀಸಿದ್ದಾರೆ.

Leave a Reply

Your email address will not be published. Required fields are marked *