ಕ್ರಿಮಿನಾಶಕ ಸೇವಿಸಿ ತಾಯಿ, ಪುತ್ರಿ ಆತ್ಮಹತ್ಯೆ

ಪಿರಿಯಾಪಟ್ಟಣ: ಪಟ್ಟಣದ ಪರಿಸರ ನಗರದಲ್ಲಿ ಜೋಳದ ಕ್ರಿಮಿನಾಶಕ ಮಾತ್ರೆ ಸೇವಿಸಿ ತಾಯಿ ಮತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಡಾವಣೆಯ ನಿವಾಸಿ ಸಣ್ಣಸ್ವಾಮಿನಾಯಕರ ಪತ್ನಿ ಸರಸ್ವತಿ(40) ಮತ್ತು ಅವರ ಪುತ್ರಿ ಸುಮಾ(22) ಮೃತರು. ಸುಮಾ ಅಂಗವಿಕಲೆಯಾಗಿದ್ದಳು. ಇದರಿಂದ ಮನನೊಂದಿದ್ದ ತಾಯಿ ಮತ್ತು ಪುತ್ರಿ ಶುಕ್ರವಾರ ರಾತ್ರಿ ಮನೆಯಲ್ಲಿ ಆತ್ಮಹತ್ಯೆಗೆ ನಿರ್ಧರಿಸಿ ಜೋಳದ ಕ್ರಿಮಿನಾಶಕ ಮಾತ್ರೆಯನ್ನು ಸೇವಿಸಿದ್ದರು.
ಕೂಡಲೇ ಇಬ್ಬರನ್ನೂ ಪಟ್ಟಣದ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಅವರಿಬ್ಬರು ಶನಿವಾರ ಆಸ್ಪತ್ರೆಯಲ್ಲಿ ಮೃತಪಟ್ಟರು. ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *