12, 14ರಂದು ಕನ್ನಂಬಾಡಿಯಮ್ಮ, ಮಸಣೀಕಮ್ಮ ಜಾತ್ರೆ

ಪಿರಿಯಾಪಟ್ಟಣ: ಪಟ್ಟಣದ ಪ್ರಸಿದ್ಧ ಶಕ್ತಿದೇವತೆಗಳಾದ ಕನ್ನಂಬಾಡಿಯಮ್ಮ ಮತ್ತು ಮಸಣಿಕಮ್ಮ(ಪಿರಿಯಾಪಟ್ಟಣದಮ್ಮ) ಜಾತ್ರಾ ಮಹೋತ್ಸವ ಮಾ. 12 ಮತ್ತು ಮಾ.14ರಂದು ನಡೆಯಲಿದೆ.
ಕನ್ನಂಬಾಡಿಯಮ್ಮ ಜಾತ್ರಾ ಮಹೋತ್ಸವ ಅಂಗವಾಗಿ ಮಾ. 11ರಂದು ಅಂಕುರಾರ್ಪಣೆ ನಡೆಯಲಿದೆ. ಮಾ. 12ರಂದು ಬೆಳಗ್ಗೆ 10.30ರಿಂದ 12.05ರ ಗಂಟೆಯೊಳಗೆ ಸಲ್ಲುವ ಶುಭ ವೃಷಭ ಲಗ್ನದಲ್ಲಿ ಬ್ರಹ್ಮ ರಥೋತ್ಸವ ಜರುಗಲಿದೆ. ಮಾ.13 ರಂದು ಅಶ್ವಾರೋಹಣ ಮತ್ತು ಮಾ.14ರಂದು ತೆಪ್ಪೋತ್ಸವ ಪೂಜೆ ನಡೆಯಲಿದೆ.
ಮಸಣೀಕಮ್ಮ ಜಾತ್ರಾ ಮಹೋತ್ಸವದ ಅಂಗವಾಗಿ ಮಾ. 13ರಂದು ಅಂಕುರಾರ್ಪಣೆ ನಡೆಯಲಿದೆ. ಮಾ. 14ರಂದು ಬೆಳಗ್ಗೆ 10.30ರಿಂದ 12.05ರೊಳಗೆ ಸಲ್ಲುವ ಶುಭ ವೃಷಭ ಲಗ್ನದಲ್ಲಿ ಬ್ರಹ್ಮರಥೋತ್ಸವ ಜರುಗಲಿದೆ. ಮಾ. 15ರಂದು ಕೈತಟ್ಟೆ ಉತ್ಸವ ಹಾಗೂ ಮಾ. 16ರಂದು ತೆಪ್ಪೋತ್ಸವ ನಡೆಯಲಿದೆ.