ಪರಿಶ್ರಮವಿಲ್ಲದೆ ಪ್ರತಿಭೆ ಹೊರಬರಲು ಅಸಾಧ್ಯ

ಪಿರಿಯಾಪಟ್ಟಣ: ಪರಿಶ್ರಮವಿಲ್ಲದೆ ನಮ್ಮಲ್ಲಿರುವ ಪ್ರತಿಭೆ ಹೊರಬರಲು ಸಾಧ್ಯವಿಲ್ಲ ಎಂದು ವಿಶ್ರಾಂತ ಪ್ರಾಂಶುಪಾಲರಾದ ಬಿ.ಆರ್.ಶಾಂತಲಕ್ಷ್ಮೀ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಮಗ್ರ ಶಿಕ್ಷಣದ ಉದ್ದೇಶ ಕೇವಲ ಪದವಿ ಪಡೆಯುವುದು ಮಾತ್ರವಲ್ಲ. ಜೀವನದ ಮೌಲ್ಯವನ್ನು ಅಳವಡಿಸಿಕೊಂಡು ಸಾರ್ಥಕ ಬದುಕು ಪಡೆಯುವುದಾಗಿದೆ ಎಂದರು.
ವಿದ್ಯಾರ್ಥಿಗಳು ನಕಾರಾತ್ಮಕ ಗುಣಗಳನ್ನು ತೊರೆದು ಕೌಶಲ ಜಾಣ್ಮೆ ನಿಮ್ಮದಾಗಿಸಿಕೊಳ್ಳಬೇಕಿದೆ. ಶ್ರದ್ಧೆಯಿದ್ದರೆ ಮಾತ್ರ ಜ್ಞಾನಾರ್ಜನೆ ಲಭಿಸಲು ಸಾಧ್ಯ. ಶಿಕ್ಷಣವಿಲ್ಲದ ಸಮಾಜವನ್ನು ಊಹಿಸಲು ಸಾಧ್ಯವಿಲ್ಲ ಎಂದರು.
ಕಾಲೇಜು ಶಿಕ್ಷಣ ವಿಭಾಗದ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ.ಮೂಗೇಶಪ್ಪ ಮಾತನಾಡಿ, ವಿದ್ಯಾರ್ಥಿಗಳು ನಂಬಿಕೆ, ಭರವಸೆ, ಆತ್ಮವಿಶ್ವಾಸದಂತಹ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಕಾಲೇಜಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಗೌರಿಶಂಕರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಂ.ಬಿ.ವೀರಭದ್ರಪ್ಪ, ಶಾಂತವೀರಭದ್ರಪ್ಪ, ಪ್ರಾಂಶುಪಾಲ ಡಾ.ಡಿ.ದೇವರಾಜ್, ವಿಶ್ರಾಂತ ಪ್ರಾಂಶುಪಾಲ ಪ್ರೊ.ರಂಗಸ್ವಾಮಿ ಮಾತನಾಡಿದರು. ದೈಹಿಕ ಶಿಕ್ಷಣ ನಿರ್ದೇಶಕಿ ಪಿ.ಪಿ.ಜಯಂತಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸಿ.ಆರ್.ವಿಶ್ವನಾಥ್, ಸಾಂಸ್ಕೃತಿಕ ವೇದಿಕೆ ಮುಖ್ಯಸ್ಥ ಎನ್.ಪ್ರಸಾದ್, ರೆಡ್ ಕ್ರಾಸ್ ಸಂಚಾಲಕಿ ಡಾ.ನಗ್ಮಾ ಸೋನಾ, ರೋವರ್ಸ್ ಸಂಚಾಲಕ ರಾಜಗೋಪಾಲ್, ರೇಂಜರ್ಸ್ ಸಂಚಾಲಕ ಡಾ.ಜಿ.ಶೈಲಶ್ರೀ, ಎನ್‌ಎಸ್‌ಎಸ್ ಅಧಿಕಾರಿ ಕೆ.ಎಂ.ವೀರೇಶ್, ಯುಜಿಸಿ ಸಂಚಾಲಕ ಎಸ್.ಮಂಜುನಾಥ್, ಸಾಗರ್ ಮತ್ತಿತರರು ಹಾಜರಿದ್ದರು.