More

    ಯುಜಿಡಿಗಾಗಿ ರಸ್ತೆಯಲ್ಲೇ ಪೈಪ್​ಲೈನ್ ಅಗೆತ

    ದಾಂಡೇಲಿ: ವಿಶ್ವದ ಪ್ರಸಿದ್ಧ ಪ್ರವಾಸೋದ್ಯಮ ನಗರವಾಗಿ ಬೆಳೆಯುತ್ತಿರುವ ದಾಂಡೇಲಿ ನಗರದ ರಸ್ತೆ ಮತ್ತು ನಗರ ಪ್ರವೇಶಿಸುವ ಧಾರವಾಡ-ಹಳಿಯಾಳ- ದಾಂಡೇಲಿ ರಸ್ತೆ, ದಾಂಡೇಲಿ-ಕಾರವಾರ ರಸ್ತೆ, ದಾಂಡೇಲಿ-ರಾಮನಗರ-ಗೋವಾ ರಸ್ತೆ ಇವೆಲ್ಲವೂ ತಗ್ಗು ಗುಂಡಿಗಳಿಂದ ತುಂಬಿಕೊಂಡಿವೆ.

    ಗ್ರಾಮೀಣ ಬಹುಗ್ರಾಮ ಕುಡಿಯುವ ನೀರು ಯೋಜನೆ, ಕರ್ನಾಟಕ ನೀರಾವರಿ ಯೋಜನೆ ನಿಗಮ, ಕರ್ನಾಟಕ ನೀರು ಸರಬರಾಜು ಇಲಾಖೆಗಳಿಂದ ಕಾಳಿ ನದಿ ನೀರು ಪಕ್ಕದ ಊರುಗಳಿಗೆ, ಸಕ್ಕರೆ ಕಾರ್ಖಾನೆ, ಹಳಿಯಾಳ, ಅಳ್ನಾವರ ಪಟ್ಟಣಕ್ಕೆ ಕುಡಿಯುವ ನೀರಿನ ಕೆರೆ ತುಂಬಿಸಿ ಹರಿಬಿಡಲು ಕೆಲ ಇಲಾಖೆಯಿಂದ ಸುಮಾರು 8 ಅಡಿ ಆಳದವರೆಗೆ ರಸ್ತೆಯನ್ನು ಹಳಿಯಾಳ-ದಾಂಡೇಲಿ-ಹಳೇದಾಂಡೇಲಿ-ಪಟೇಲನಗರವರೆಗೆ ಅಗೆಯಲಾಗಿದೆ. ಕನಿಷ್ಠ 3 ಅಡಿ ಅಗಲದ ಪೈಪ್​ಲೈನ್ ಅಗೆದ ಮೇಲೆ ತಾಂತ್ರಿಕವಾಗಿ ಗಟ್ಟಿ ಮಣ್ಣು ಹಾಕಿ ಕಂಪ್ರೇಶನ್ (ಸಂಕೋಚನ) ಮಾಡಬೇಕಾಗಿತ್ತು. ಅದು ಇಲಾಖೆಯಿಂದ ಆಗಿಲ್ಲ. ಇದರಿಂದ ಹೊಸ ರಸ್ತೆ ನಿರ್ಮಾಣ ಗುಣಮಟ್ಟದ್ದಾಗುವುದು ಕಷ್ಟ. ನಗರದಲ್ಲಿ ಯುಜಿಡಿ ಯೋಜನೆಯಿಂದ ಅಗೆದ ರಸ್ತೆ ಕೂಡ ಸಿದ್ಧಗೊಳ್ಳಬೇಕಾಗಿದೆ.

    ರಸ್ತೆ ದುರಸ್ತಿಗಾಗಿ ಕರ್ಕಾದಿಂದ ಶ್ರೇಯಸ್ ಪೇಪರ್ ಮಿಲ್ಲಿನವರೆಗೆ 3 ಕೋಟಿ ರೂ. ವೆಚ್ಚದಲ್ಲಿ, ಶ್ರೇಯಸ್ ಪೇಪರ್ ಮಿಲ್ಲಿನಿಂದ ಕಿತ್ತುರ ಚನ್ನಮ್ಮ ವೃತ್ತದವರೆಗೆ 1.80 ಕೋಟಿ ವೆಚ್ಚದಲ್ಲಿ ಮತ್ತು ಕಿತ್ತೂರು ಚನ್ನಮ್ಮ ವೃತ್ತದಿಂದ ಹಳೇ ದಾಂಡೇಲಿ ಸೇತುವೆವರೆಗೆ ರಾಷ್ಟ್ರೀಯ ಹೆದ್ದಾರಿ ಯೋಜನೆಯಡಿ 2 ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕೆಲಸ ಶೀಘ್ರದಲ್ಲಿ ಆರಂಭವಾಗಬೇಕಾಗಿದೆ.

    ಪೈಪಲೈನ್ ಅಳವಡಿಸಿದ ವಿವಿಧ ಇಲಾಖೆಗಳ ನಡುವಿನ ಸಮನ್ವಯತೆಯ ಕೊರತೆಯಿಂದ ರಸ್ತೆ ನಿರ್ಮಾಣ ಕಾರ್ಯ ವಿಳಂಬವಾಗಿದೆ. ನೂತನ ರಸ್ತೆಗಳ ನಿರ್ಮಾಣ ಕಾರ್ಯಕ್ಕೆ ಟೆಂಡರ್ ಪ್ರಕ್ರೀಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲಿ ಕಾರ್ಯಾರಂಭ ಮಾಡಲಾಗುವದು.

    | ಸುಧಾಕರ ಕಟ್ಟಿಮನಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪಿಡಬ್ಲ್ಯುಡಿ ಇಲಾಖೆ

    ಹಳಿಯಾಳ ಉಪವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts