20.3 C
Bangalore
Sunday, December 15, 2019

ಅಹರ್ನಿಶಿ ಟೆಸ್ಟ್ ಅಂಕಿ-ಆಟ; ಆತಿಥ್ಯಕ್ಕೆ ಟೀಂ ಇಂಡಿಯಾ ಅಣಿ

Latest News

ಆರೋಗ್ಯದಲ್ಲಿ ಚೇತರಿಕೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಆಸ್ಪತ್ರೆಯಿಂದ ಬಿಡುಗಡೆ

ಬೆಂಗಳೂರು: ಅನಾರೋಗ್ಯ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಹಿಂದೆ ಆಸ್ಪತ್ರೆ ದಾಖಲಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಇಂದು (ಭಾನುವಾರ) ಆಸ್ಪತ್ರೆಯಿಂದ ಬಿಡುಗೆಯಾಗಿ ಮನೆಗೆ ತೆರಳಲಿದ್ದಾರೆ.ಸ್ಟಂಟ್​ನಲ್ಲಿ...

ಜೆಡಿಎಸ್ ಜನ್ಮ ಜಾಲಾಟ, ವರಿಷ್ಠರಿಗೆ ಪೀಕಲಾಟ

ಬೆಂಗಳೂರು: ಸಾಲು ಸಾಲು ಸೋಲಿನಿಂದ ದಳಪತಿಗಳು ಕಂಗೆಟ್ಟಿದ್ದಾರೆ. ಲೋಕಸಭಾ ಚುನಾವಣೆ ಸೋಲಿ ನಿಂದ ಬೇಗುದಿ ಹೆಚ್ಚುತ್ತಿದ್ದು, ಮೈತ್ರಿ ಸರ್ಕಾರ ಪತನ, ಉಪಚುನಾವಣೆಯ ಹೀನಾಯ...

ಮೊದಲ ಟೆಸ್ಟ್​​ನಲ್ಲಿ ಆಸ್ಟ್ರೇಲಿಯಾಕ್ಕೆ ಬೃಹತ್ ಮುನ್ನಡೆ

ಪರ್ತ್: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮುನ್ನಡೆ ಕಂಡಿರುವ ಆತಿಥೇಯ ಆಸ್ಟ್ರೇಲಿಯಾ ತಂಡ ಅಹರ್ನಿಶಿ ಟೆಸ್ಟ್ ಪಂದ್ಯಗಳಲ್ಲಿನ ತನ್ನ...

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ ಹಾವು: ವಿಡಿಯೋ ಬಗ್ಗೆ ಬಿಸಿಸಿಐ ಹೇಳಿದ್ದೇನು?

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ...

ವಿದೇಶಿ ಮಹಿಳೆಯಿಂದ ಪಿಂಡಪ್ರದಾನ

ಹೊಸಪೇಟೆ (ಬಳ್ಳಾರಿ): ದಕ್ಷಿಣ ಆಫ್ರಿಕಾದ ಮಹಿಳೆಯೊಬ್ಬರು ತಾಯಿಯ ಆತ್ಮಕ್ಕೆ ಶಾಂತಿ, ಸದ್ಗತಿ ದೊರೆಯಲೆಂದು ಶನಿವಾರ ಹಂಪಿ ನದಿ ತೀರದಲ್ಲಿ ಪುರೋಹಿತರ ನೇತೃತ್ವದಲ್ಲಿ ಹಿಂದು ಧಾರ್ವಿುಕ ವಿಧಿವಿಧಾನಗಳಂತೆ...

ಭಾರತೀಯ ಕ್ರಿಕೆಟ್​ನ ಐತಿಹಾಸಿಕ ಹಾಗೂ ಅತ್ಯಂತ ಮಹತ್ವದ ಸಂಗತಿಗಳಿಗೆ ಸಾಕ್ಷಿಯಾದ ಈಡನ್ ಗಾರ್ಡನ್ಸ್ ಸ್ಟೇಡಿಯಂ ಟೀಮ್ ಇಂಡಿಯಾದ ಮೊಟ್ಟಮೊದಲ ಅಹರ್ನಿಶಿ ಟೆಸ್ಟ್ ಆತಿಥ್ಯಕ್ಕೆ ಅಣಿಯಾಗಿದೆ. 66 ಸಾವಿರ ಪ್ರೇಕ್ಷಕರ ಸಾಮರ್ಥ್ಯದ ಈ ಸ್ಟೇಡಿಯಂ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ಬಳಿಕ ವಿಶ್ವದ 2ನೇ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನ್ನುವ ಹೆಗ್ಗಳಿಕೆ ಹೊಂದಿದೆ. ಆ ಕಾರಣಕ್ಕಾಗಿ ಭಾರತದ ಮೊಟ್ಟಮೊದಲ ಅಹರ್ನಿಶಿ ಟೆಸ್ಟ್ ಪಂದ್ಯವನ್ನು ಕೋಲ್ಕತದಲ್ಲಿ ಆಯೋಜನೆ ಮಾಡಿದ್ದು ಹಲವು ಕಾರಣಗಳಿಗಾಗಿ ವಿಶೇಷ ಎನಿಸುತ್ತದೆ. ಕ್ರಿಕೆಟ್ ಅಭಿಮಾನಿಗಳನ್ನು ಮೈದಾನದತ್ತ ಸೆಳೆಯುವ ಉದ್ದೇಶಕ್ಕಾಗಿ 2012ರಲ್ಲಿ ಅಹರ್ನಿಶಿ ಟೆಸ್ಟ್​ಗೆ ಐಸಿಸಿ ಮಾನ್ಯತೆ ನೀಡಿತ್ತು. ಅದಾದ ಏಳು ವರ್ಷಗಳ ಬಳಿಕ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐ, ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುವ ನಿರ್ಧಾರ ಮಾಡಿದೆ. ಈ ಹಿನ್ನೆಲೆಯಲ್ಲಿ ಹಿಂದಿನ 11 ಅಹರ್ನಿಶಿ ಟೆಸ್ಟ್​ಗಳಲ್ಲಿ ದಾಖಲಾಗಿರುವ ಕೆಲ ಅಂಕಿ-ಅಂಶಗಳು ಹಾಗೂ ವಿಶೇಷ ಸಾಧನೆಗಳನ್ನು ಇಲ್ಲಿ ಮೆಲುಕು ಹಾಕಲಾಗಿದೆ.

ಮಿಚೆಲ್ ಸ್ಟಾರ್ಕ್ ಯಶಸ್ವಿ ಬೌಲರ್

ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅಹರ್ನಿಶಿ ಟೆಸ್ಟ್​ನ ಅತ್ಯಂತ ಯಶಸ್ವಿ ಬೌಲರ್. 23ರ ಸರಾಸರಿಯಲ್ಲಿ ಒಂದು ಬಾರಿ ಐದು ವಿಕೆಟ್ ಸಾಧನೆಯೊಂದಿಗೆ ಈವರೆಗೂ 26 ವಿಕೆಟ್ ಉರುಳಿಸಿದ್ದಾರೆ. ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಬೌಲರ್ ಜೋಶ್ ಹ್ಯಾಸಲ್​ವುಡ್. ನಾಲ್ಕು ಟೆಸ್ಟ್ ಪಂದ್ಯಗಳಿಂದ 22.42ರ ಸರಾಸರಿಯಲ್ಲಿ 21 ವಿಕೆಟ್ ಉರುಳಿಸಿದ್ದಾರೆ.

ಬಿಶೂ ಬೌಲಿಂಗ್ ಶ್ರೇಷ್ಠ

ವೆಸ್ಟ್ ಇಂಡೀಸ್​ನ ಲೆಗ್​ಸ್ಪಿನ್ನರ್ ದೇವೇಂದ್ರ ಬಿಶೂ, ಅಹರ್ನಿಶಿ ಟೆಸ್ಟ್​ನಲ್ಲಿ ಅತ್ಯುತ್ತಮ ಬೌಲಿಂಗ್​ನ ದಾಖಲೆ ಹೊಂದಿದ್ದಾರೆ. 2016ರಲ್ಲಿ ಪಾಕಿಸ್ತಾನ ವಿರುದ್ಧ ಯುಎಇಯಲ್ಲಿ ನಡೆದಿದ್ದ ಪಂದ್ಯದ 2ನೇ ಇನಿಂಗ್ಸ್​ನಲ್ಲಿ ಬಿಶೂ 13.5 ಓವರ್ ಬೌಲಿಂಗ್ ಮಾಡಿ 49 ರನ್​ಗೆ 8 ವಿಕೆಟ್ ಸಾಧನೆ ಮಾಡಿದ್ದರು. ಇದು ಏಷ್ಯಾದಲ್ಲಿ ಪ್ರವಾಸಿ ತಂಡದ ಬೌಲರ್​ನ ಶ್ರೇಷ್ಠ ನಿರ್ವಹಣೆ ಎನಿಸಿಕೊಂಡಿದೆ.

ಮಹಿಳೆಯರ ಡೇ-ನೈಟ್ ಟೆಸ್ಟ್ ಡ್ರಾ

ಪುರುಷರ ಅಹರ್ನಿಶಿ ಟೆಸ್ಟ್​ನಲ್ಲಿ ಈವರೆಗೂ ಆಡಿರುವ ಎಲ್ಲ 11 ಪಂದ್ಯಗಳು ಫಲಿತಾಂಶ ದಾಖಲಿಸಿವೆ. ಆದರೆ, 2017ರಲ್ಲಿ ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವೆ ಸಿಡ್ನಿಯಲ್ಲಿ ನಡೆದ ಮಹಿಳೆಯರ ಏಕೈಕ ಅಹರ್ನಿಶಿ ಚತುರ್ದಿನ ಟೆಸ್ಟ್ ಪಂದ್ಯ ಡ್ರಾದಲ್ಲಿ ಮುಕ್ತಾಯ ಕಂಡಿತ್ತು.

1: ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಎರಡು ಬಾರಿ ಶತಕ ಸಿಡಿಸಿದ ಏಕೈಕ ಬ್ಯಾಟ್ಸ್​ಮನ್ ಪಾಕಿಸ್ತಾನದ ಅಸಾದ್ ಶಫೀಕ್.

4: ಅಹರ್ನಿಶಿ ಟೆಸ್ಟ್​ನಲ್ಲಿ ಈವರೆಗೂ ನಾಲ್ಕು ಇನಿಂಗ್ಸ್ ಗೆಲುವು ದಾಖಲಾಗಿವೆ. 2017ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ ಇನಿಂಗ್ಸ್ ಮತ್ತು 209 ರನ್​ಗಳಿಂದ ಗೆದ್ದಿರುವುದು ದೊಡ್ಡ ಜಯ. 2016ರಲ್ಲಿ ಪಾಕ್ ವಿರುದ್ಧ ಆಸೀಸ್ 39 ರನ್​ನಿಂದ ಗೆದ್ದಿದ್ದು ಸಣ್ಣ ಗೆಲುವು.

ನವೆಂಬರ್, ಡಿಸೆಂಬರ್​ನಲ್ಲಿ ಗರಿಷ್ಠ ಪಂದ್ಯ

ಈವರೆಗೂ 11 ಡೇ-ನೈಟ್ ಟೆಸ್ಟ್ ಪಂದ್ಯಗಳು ನಡೆದಿದ್ದರೂ, ಇದರಲ್ಲಿ 5 ಟೆಸ್ಟ್ ಪಂದ್ಯಗಳು ನವೆಂಬರ್-ಡಿಸೆಂಬರ್ ತಿಂಗಳಿನಲ್ಲಿ ನಡೆದಿವೆ. ಫೆಬ್ರವರಿ,ಏಪ್ರಿಲ್, ಮೇ, ಜುಲೈ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಈವರೆಗೂ ಅಹರ್ನಿಶಿ ಟೆಸ್ಟ್ ಪಂದ್ಯ ನಡೆದಿಲ್ಲ. ಅಕ್ಟೋಬರ್ ತಿಂಗಳಲ್ಲಿ 2, ಆಗಸ್ಟ್, ಮಾರ್ಚ್, ಜೂನ್ ಹಾಗೂ ಜನವರಿ ತಿಂಗಳಲ್ಲಿ ತಲಾ ಒಂದು ಅಹರ್ನಿಶಿ ಟೆಸ್ಟ್ ಪಂದ್ಯ ನಡೆದಿವೆ.

ಕೋಲ್ಕತಕ್ಕೆ ಆಗಮಿಸಿದ ಟೀಮ್ ಇಂಡಿಯಾ

ಪ್ರವಾಸಿ ಬಾಂಗ್ಲಾದೇಶ ವಿರುದ್ಧ ನಡೆಯಲಿರುವ 2ನೇ ಟೆಸ್ಟ್ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಮಂಗಳವಾರ ಕೋಲ್ಕತಕ್ಕೆ ಆಗಮಿಸಿತು. ನ. 22 ರಿಂದ 26ರವರೆಗೆ ಅಹರ್ನಿಶಿಯಾಗಿ ಈ ಪಂದ್ಯ ನಡೆಯಲಿದೆ. ಟೀಮ್ ಇಂಡಿಯಾ ಕೋಲ್ಕತ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಡಿಯೋವನ್ನು ಬಿಸಿಸಿಐ ಟ್ವೀಟ್ ಮಾಡಿದೆ. ಇಂದೋರ್ ಟೆಸ್ಟ್ ಪಂದ್ಯ ಮೂರೇ ದಿನಕ್ಕೆ ಮುಕ್ತಾಯವಾದರೂ, ಪಿಂಕ್ ಬಾಲ್ ಟೆಸ್ಟ್​ಗೆ ಅಭ್ಯಾಸ ನಡೆಸುವ ದೃಷ್ಟಿಯಿಂದ ಎರಡು ದಿನಗಳ ಕಾಲ ಹೋಳ್ಕರ್ ಮೈದಾನದಲ್ಲಿಯೇ ಅಭ್ಯಾಸ ನಡೆಸಿತ್ತು. ಕೋಲ್ಕತಕ್ಕೆ ಆಗಮಿಸಿದ ಬೆನ್ನಲ್ಲಿಯೇ ಎರಡೂ ತಂಡಗಳ ಕೋಚ್​ಗಳಾದ ರವಿಶಾಸ್ತ್ರಿ ಹಾಗೂ ರಸೆಲ್ ಡೊಮಿಂಗೊ ಈಡನ್ ಗಾರ್ಡನ್ಸ್ ಮೈದಾನಕ್ಕೆ ಭೇಟಿ ನೀಡಿದರು.

ಅಜರ್ ಅಲಿ ಯಶಸ್ವಿ ಬ್ಯಾಟ್ಸ್​ಮನ್

ಅಹರ್ನಿಶಿ ಟೆಸ್ಟ್​ನ ಬ್ಯಾಟಿಂಗ್ ದಾಖಲೆಗಳಲ್ಲಿ ಪಾಕಿಸ್ತಾನ ತಂಡ ಪಾರಮ್ಯ ಸಾಧಿಸಿದೆ. ನ.29-ಡಿ.3ರವರೆಗೆ ಅಡಿಲೇಡ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ 2ನೇ ಹಾಗೂ ತನ್ನ ನಾಲ್ಕನೇ ಅಹರ್ನಿಶಿ ಟೆಸ್ಟ್ ಪಂದ್ಯವಾಡಲು ಅಣಿಯಾಗಿರುವ ಪಾಕಿಸ್ತಾನ, ಹಿಂದಿನ ಮೂರು ಪಂದ್ಯಗಳಲ್ಲಿ 1 ಗೆಲುವು ಹಾಗೂ 2 ಸೋಲು ದಾಖಲಿಸಿದೆ. ತಂಡದ ನೂತನ ನಾಯಕ ಅಜರ್ ಅಲಿ, ಆಡಿದ 6 ಇನಿಂಗ್ಸ್​ಗಳಿಂದ 91 ರ ಸರಾಸರಿಯಲ್ಲಿ 456 ರನ್ ಬಾರಿಸಿದ್ದಾರೆ. ಸ್ಟೀವನ್ ಸ್ಮಿತ್ ಆಡಿದ 4 ಟೆಸ್ಟ್​ಗಳಿಂದ 50.62 ರ ಸರಾಸರಿಯಲ್ಲಿ 405 ರನ್ ಬಾರಿಸಿದ್ದಾರೆ. ಒಂದು ಶತಕ ಹಾಗೂ ಮೂರು ಅರ್ಧಶತಗಳು ಇದರಲ್ಲಿ ಸೇರಿವೆ. ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ವೈಯಕ್ತಿಕ ಗರಿಷ್ಠ ಮೊತ್ತ ದಾಖಲಿಸಿದ ಶ್ರೇಯವೂ ಅಜರ್ ಅಲಿಯದ್ದಾಗಿದೆ. 2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದುಬೈನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 302 ರನ್ ಬಾರಿಸಿದ್ದರು. ಪಿಂಕ್ ಬಾಲ್ ಟೆಸ್ಟ್​ನಲ್ಲಿ ದಾಖಲಾದ ಏಕೈಕ ತ್ರಿಶತಕ ಇದಾಗಿದೆ.

ಸ್ಟೇಡಿಯಂನಲ್ಲೂ ಹೆಚ್ಚಿನ ವ್ಯವಸ್ಥೆ ಬೇಕು

ನವದೆಹಲಿ: ಪಿಂಕ್ ಬಾಲ್ ಟೆಸ್ಟ್ ಪ್ರೇಕ್ಷಕರನ್ನು ಮೈದಾನಕ್ಕೆ ಸೆಳೆಯುವ ವಿಶ್ವಾಸ ಇದೆ ಎಂದಿರುವ ಟೀಮ್ ಇಂಡಿಯಾ ಮಾಜಿ ನಾಯಕ ಹಾಗೂ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ರಾಹುಲ್ ದ್ರಾವಿಡ್, ಸ್ಟೇಡಿಯಂಗಳಲ್ಲೂ ಪ್ರೇಕ್ಷಕರಿಗೆ ಹೆಚ್ಚಿನ ಹಾಗೂ ಉತ್ತಮ ವ್ಯವಸ್ಥೆಗಳನ್ನು ಮಾಡಬೇಕು ಎಂದಿದ್ದಾರೆ. ಟೆಸ್ಟ್ ಕ್ರಿಕೆಟ್​ಅನ್ನು ಗತವೈಭವಕ್ಕೆ ತರುವ ಏಕೈಕ ಉಪಾಯ ಪಿಂಕ್ ಬಾಲ್ ಟೆಸ್ಟ್. ಭಾರತದಲ್ಲಿ ಇಬ್ಬನಿಯ ಸಮಸ್ಯೆಗೆ ಪರಿಹಾರ ಕಂಡುಕೊಂಡಲ್ಲಿ, ಪ್ರತಿ ವರ್ಷವೂ ಪಿಂಕ್ ಬಾಲ್ ಟೆಸ್ಟ್​ಅನ್ನು ನಾವು ಆಡಬಹುದು. ಪಿಂಕ್ ಬಾಲ್ ಒದ್ದೆಯಾದಾಗ ಬೌಲಿಂಗ್ ಮಾಡುವುದು ಕಷ್ಟವಾಗುತ್ತದೆ ಎಂದು ದ್ರಾವಿಡ್ ಹೇಳಿದ್ದಾರೆ. ಸ್ಟೇಡಿಯಂನಲ್ಲಿ ಪ್ರೇಕ್ಷಕರಿಗೆ ಮೂಲಭೂತ ಸೌಕರ್ಯಗಳಾದ ಶೌಚಾಲಯಗಳು, ಆಸನ ವ್ಯವಸ್ಥೆ, ಕಾರ್ ರ್ಪಾಂಗ್ ವ್ಯವಸ್ಥೆಗಳನ್ನೂ ಮಾಡಬೇಕಿದೆ. ಇವೆಲ್ಲವೂ ಇದ್ದಾಗ ಮಾತ್ರವೇ ಪ್ರೇಕ್ಷಕರು ಮೈದಾನದತ್ತ ಬರುತ್ತಾರೆ ಎಂದು ದ್ರಾವಿಡ್ ಹೇಳಿದ್ದಾರೆ. ಇತ್ತೀಚೆಗೆ ಪುಣೆಯಲ್ಲಿ ನಡೆದ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯದ ವೇಳೆ ಸಾಕಷ್ಟು ಪ್ರೇಕ್ಷಕರು ಸ್ಟೇಡಿಯಂನಲ್ಲಿ ಮೂಲಭೂತ ವ್ಯವಸ್ಥೆಗಳೇ ಇರಲಿಲ್ಲ ಎಂದು ದೂರಿದ್ದರು.

ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾದಲ್ಲಿ ಇರುವಂತೆ ಟೆಸ್ಟ್ ಕ್ರಿಕೆಟ್ ಕ್ಯಾಲೆಂಡರ್ ಭಾರತಕ್ಕೆ ಬೇಕಿದೆ. ಪ್ರತಿ ವರ್ಷದ ಡಿಸೆಂಬರ್​ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಆಸ್ಟ್ರೇಲಿಯಾದಲ್ಲಿ ನಡೆಯುತ್ತದೆ. ಜುಲೈನಲ್ಲಿ ಲಾರ್ಡ್ಸ್​ನಲ್ಲಿ ಒಂದಾದರೂ ಟೆಸ್ಟ್ ನಡೆಯುತ್ತದೆ. ಇದರ ಅಂದಾಜಿನಲ್ಲಿಯೇ ಪ್ರೇಕ್ಷಕರು ಯೋಜನೆ ರೂಪಿಸುತ್ತಾರೆ. ಇದೇ ರೀತಿಯ ಖಚಿತ ಟೆಸ್ಟ್ ಪಂದ್ಯಗಳು ಭಾರತದಲ್ಲಿ ನಡೆಯಬೇಕು.

| ರಾಹುಲ್ ದ್ರಾವಿಡ್ ಎನ್​ಸಿಎ ಮುಖ್ಯಸ್ಥ

Stay connected

278,754FansLike
588FollowersFollow
628,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...