ಕಿಕಿ ಕಿಕ್ ಇನ್ನೂ ಇಳಿದಿಲ್ಲ ; ಚಲಿಸುತ್ತಿದ್ದ ವಿಮಾನದಿಂದ ಕೆಳಗಿಳಿದ ಪೈಲಟ್​, ಸಹಾಯಕಿ​!

ಮೆಕ್ಸಿಕೊ: ಒಂದು ತಿಂಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ಕಿಕಿ ಚಾಲೆಂಜ್​ ಅನ್ನು ವಿಭಿನ್ನವಾಗಿ ಪ್ರಯತ್ನಿಸುವ ಮೂಲಕ ಪೈಲಟ್​ ಹಾಗೂ ಸಹಾಯಕಿ ಸುದ್ದಿಯಾಗುತ್ತಿದ್ದಾರೆ.

ಹೌದು, ಇಷ್ಟು ದಿನ ಕಿಕಿ ಚಾಲೆಂಜ್​ನ್ನು ಚಲಿಸುತ್ತಿರುವ ಕಾರಿನಲ್ಲಿ ಮಾಡಿ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್​ ಮಾಡುತ್ತಿದ್ದರೆ, ಇಲ್ಲಿಬ್ಬರು ಹೆಣ್ಣು ಮಕ್ಕಳು ಚಲಿಸುತ್ತಿದ್ದ ವಿಮಾನದಿಂದ ಕೆಳಗಿಳಿದು ಕಿಕಿ ಡ್ಯಾನ್ಸ್​ ಮಾಡಿದ್ದಾರೆ.

ಫ್ಲೈಟ್​ ಅಟೆಂಡೆಂಟ್​ ಜತೆ ಚಲಿಸುತ್ತಿರುವ ವಿಮಾನದಿಂದ ಕೆಳಗಿಳಿದ ಮೆಕ್ಸಿಕೊ ಮೂಲದ ಪೈಲಟ್​ ​ ಅಲೆಜಾಂದ್ರ ಮಾನ್​ರಿಕ್ವೆಸ್​ ಮಾಡಿರುವ ಕಿಕಿ ಡ್ಯಾನ್ಸ್​​ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದು, ಟ್ವಿಟರ್​ನಲ್ಲಿ ಈಗಾಗಲೇ 25,000ಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.

ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದು, “ಈ ವಿಡಿಯೋ ಬಹಳ ಅಪಾಯಕಾರಿ. ಯಾರೂ ಪ್ರಯತ್ನಿಸಬೇಡಿ” ಎಂದು ಹಲವರು ಕಮೆಂಟ್​ ಮಾಡಿದ್ದರೆ, ಹೆಣ್ಣು ಮಕ್ಕಳ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಬ್ಬರಂತೂ ಅವರ ಪೈಲಟ್​ ಪರವಾನಗಿ ಇನ್ನೂ ರದ್ದಾಗಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

22 ವರ್ಷದ ಈ ಪೈಲಟ್​ ಮೆಕ್ಸಿಕೊ ಮೂಲದವರಾಗಿದ್ದು, 152 ಏವಿಯೇಷನ್​ (152 Aviation) ಎಂಬ ವೆಬ್​ಸೈಟ್​ಗೆ ಲೇಖನಗಳನ್ನು ಬರೆಯುತ್ತಿದ್ದರು ಎಂದು ಎಕ್ಸ್​ಪ್ರೆಸ್​ ಯುಕೆ ವರದಿ ಮಾಡಿದೆ. ವಿಶಿಷ್ಟವಾದ ವ್ಯಕ್ತಿಗಳನ್ನು 40ಕ್ಕೂ ಹೆಚ್ಚು ದೇಶಗಳಿಗೆ ನನ್ನ ಜೆಟ್ ವಿಮಾನದಲ್ಲಿ ಕರೆದೊಯ್ದಿದ್ದೀನಿ. ಕಲಿಯುವುದು ಎಂದೂ ನಿಲ್ಲಲ್ಲ. ತಿಳಿದುಕೊಳ್ಳುವುದು ಇನ್ನೂ ಸಾಕಷ್ಟಿದೆ ಎಂದು ಮಾನ್​ರಿಕ್ವೆಸ್​ ಹೇಳಿಕೊಂಡಿದ್ದಾಳೆ. (ಏಜೆನ್ಸೀಸ್​)