ಜನಜಾಗೃತಿ ಯಾತ್ರೆಯಾಗಿ ಶರಣ ಸಂಸ್ಕೃತಿ ಉತ್ಸವ ಯಶಸ್ವಿ : ಮುರುಘಾ ಶರಣರ ಹೇಳಿಕೆ

ಚಿತ್ರದುರ್ಗ: ಜನಜಾಗೃತಿ ಯಾತ್ರೆಯಾಗಿ ಶರಣ ಸಂಸ್ಕೃತಿ ಉತ್ಸವ ಯಶಸ್ವಿಯಾಗಿದೆ ಎಂದು ಶ್ರೀ ಶಿವಮೂರ್ತಿ ಶರಣರು ಹೇಳಿದರು.

ಮುರುಘಾ ಮಠದ ಅನುಭವ ಮಂಟಪದಲ್ಲಿ ಗುರುವಾರ ಶರಣ ಸಂಸ್ಕೃತಿ ಅಂಗವಾಗಿ ಏರ್ಪಡಿಸಿದ್ದ ಸಹಜ ಶಿವಯೋಗದ ಸಾನ್ನಿಧ್ಯ ವಹಿಸಿ ಮಾತನಾಡಿ, ಹತ್ತು ದಿನದ ಉತ್ಸವದಲ್ಲಿ ಸಹಸ್ರಾರು ಭಕ್ತರು ಭಾಗವಹಿಸಿ ಜ್ಞಾನ ದಾಸೋಹ ಪಡೆದಿದ್ದಾರೆ ಎಂದರು.

ಬಸವಾದಿ ಶರಣರದು ರಥ ಸಂಸ್ಕೃತಿಯಲ್ಲ. ರಥ ಎಳೆಯುವ ಆಚರಣೆ ನಾವು ಅನುಸರಿಸುವುದಿಲ್ಲ. ಈ ಸಹಜ ಶಿವಯೋಗದಿಂದ ಸಾಮಾನ್ಯ ವ್ಯಕ್ತಿಯು ಸಂಪನ್ಮೂಲ ವ್ಯಕ್ತಿಯಾಗಿ ಮುಂದೆ ಸಮರ್ಥ ವ್ಯಕ್ತಿತ್ವ ರೂಪಿಸಿಕೊಳ್ಳುತ್ತಾನೆ ಎಂದು ಹೇಳಿದರು.

ಮುರುಘಾ ಮಠ ಸಮಾಜ ಸುಧಾರಣೆಯಲ್ಲಿ ಆಳವಾದ ಪಾತ್ರ ವಹಿಸುತ್ತಿದೆ. ನಮ್ಮೊಳಗೆ ನಿರಾಳತೆ ಇರಬೇಕು, ಬಾಳೆ ಗಿಡದಂತೆ ಕಿಚ್ಚುರಹಿತವಾಗಿರಬೇಕು ಎಂದರು.

Leave a Reply

Your email address will not be published. Required fields are marked *