ಅಣ್ಣೂರಿನಿಂದ ಮ.ಬೆಟ್ಟಕ್ಕೆ ಭಕ್ತರ ಪಾದಯಾತ್ರೆ

1 Min Read
ಅಣ್ಣೂರಿನಿಂದ ಮ.ಬೆಟ್ಟಕ್ಕೆ ಭಕ್ತರ ಪಾದಯಾತ್ರೆ
ಕೆ.ಎಂ.ದೊಡ್ಡಿ ಸಮೀಪದ ಅಣ್ಣೂರು ಗ್ರಾಮದಿಂದ ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ 2ನೇ ವರ್ಷದ ಪಾದಯಾತ್ರೆಗೆ ಸೋಮವಾರ ಚಾಲನೆ ದೊರೆಯಿತು.

ಕೆ.ಎಂ.ದೊಡ್ಡಿ: ಸಮೀಪದ ಅಣ್ಣೂರು ಗ್ರಾಮದಿಂದ ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ಸೋಮವಾರ 2ನೇ ವರ್ಷದ ಪಾದಯಾತ್ರೆಗೆ ಚಾಲನೆ ನೀಡಲಾಯಿತು.
ಗ್ರಾಮದ ಶ್ರೀ ಮಲೆ ಮಹದೇಶ್ವರ ಪಾದಯಾತ್ರೆ ಮತ್ತು ಶ್ರೀ ಮಾರಮ್ಮ ಸೇವಾ ಸಮಿತಿ ವತಿಯಿಂದ ಆಯೋಜಿಸಿರುವ ಪಾದಯಾತ್ರೆಗೆ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದು, ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳಿದರು.

ಈ ವೇಳೆ ಜಿಪಂ ಮಾಜಿ ಸದಸ್ಯ ನಾಡಗೌಡ ರಾಜೀವ್ ಮಾತನಾಡಿ, ಮೊದಲನೇ ಬಾರಿಗೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡ ಸಂದರ್ಭ ಬೆರಳೆಣಿಕೆಯಷ್ಟು ಭಕ್ತರು ಮಾತ್ರ ಆಗಮಿಸಿದ್ದರು. ಈ ವರ್ಷ ಭಕ್ತರು ಹೆಚ್ಚಾಗಿದ್ದು 150ಕ್ಕೂ ಹೆಚ್ಚು ಭಕ್ತರು ಪಾದಯತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಏಳು ಮಲೆಯ ಒಡೆಯ ಮಹದೇಶ್ವರನನ್ನು ನೆನೆಯುತ್ತಾ ಸುಮಾರು 4 ದಿನಗಳ ಕಾಲ 160 ಕಿಮೀ ಕಾಲ್ನಡಿಗೆಯಲ್ಲಿ ಬೆಟ್ಟಕ್ಕೆ ತೆರಳಲಿದ್ದೇವೆ ಎಂದರು.

ಪ್ರಸ್ತುತ ಬರಗಾಲ ಇರುವ ಹಿನ್ನೆಲೆ ನಾಡಿಗೆ ಉತ್ತಮ ಮಳೆ, ಬೆಳೆಯಾಗಿ, ರೋಗರುಜಿನ ಬಾರದಿರಲಿ ಎಂದು ಪ್ರಾರ್ಥಿಸಿಕೊಂಡು ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದರು. ಗ್ರಾಪಂ ಮಾಜಿ ಅಧ್ಯಕ್ಷ ಶೇಖರ್, ಶ್ರೀ ಮಾರಮ್ಮ ಸೇವಾ ಸಮಿತಿ ಗೌರವಾಧ್ಯಕ್ಷ ಅಣ್ಣೂರು ನವೀನ್, ಗ್ರಾಪಂ ಸದಸ್ಯ ಹೊಂಡಾಸಿದ್ದೇಗೌಡ, ಶ್ರೀಹರ್ಷ, ಎ.ಎಸ್.ಮನೋಹರ್, ರವಣಿ, ಎ.ಎಸ್.ಬೋರೇಗೌಡ, ತಮ್ಮಣ್ಣ, ಜೆ.ದೇವರಾಜ್, ಎ.ಎಸ್.ಸಚಿನ್, ಶಬರೀಶ್ ಮತ್ತಿತರರು ಪಾಲ್ಗೊಂಡಿದ್ದರು.

See also  ಬಸವೇಶ್ವರ ಸ್ವಾಮಿ ಜೋಡಿ ರಥೋತ್ಸವ
Share This Article