ಪಿಫಾ ವಿಶ್ವಕಪ್​ ಫ್ರಾನ್ಸ್​ ಪಾಲಿಗೆ: ಕ್ರೊವೇಷಿಯಾ ರನ್ನರ್​ ಅಪ್​

ಮಾಸ್ಕೋ: ಪಿಫಾ ಫುಟ್​ಬಾಲ್​ ವಿಶ್ವಕಪ್​ನಲ್ಲಿ ಫ್ರಾನ್ಸ್​ ಗೆಲುವು ಸಾಧಿಸಿದ್ದು ಈ ಮೂಲಕ ಎರಡನೇ ಬಾರಿಗೆ ವಿಶ್ವಕಪ್​ನ್ನು ತನ್ನದಾಗಿಸಿಕೊಂಡು ಬೀಗಿದೆ.

ಮಾಸ್ಕೋದಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಕ್ರೊಯೇಷ್ಯಾ ತಂಡವನ್ನು 4-2 ಗೋಲುಗಳ ಅಂತರದಲ್ಲಿ ಸೋಲಿಸಿ ಗೆಲುವಿನ ನಗೆ ಬೀರಿದೆ. ಕ್ರೊವೇಷಿಯಾ ಇದೇ ಮೊದಲಬಾರಿಗೆ ಫೈನಲ್​ ಪ್ರವೇಶಿಸಿ ರನ್ನರ್​ ಅಪ್​ ತಂಡವಾಗಿ ಹೊರಹೊಮ್ಮಿದೆ.

ಫ್ರಾನ್ಸ್​ 1998ರಲ್ಲಿ ಮೊದಲ ಸಲ ವಿಶ್ವಕಪ್​ ಗೆದ್ದಿತ್ತು. 2006ರಲ್ಲಿ ರನ್ನರ್​ ಅಪ್​ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಈ ಬಾರಿ ಮತ್ತೊಮ್ಮೆ ಕಪ್​ನ್ನು ತನ್ನದಾಗಿಸಿಕೊಂಡಿದೆ.