More

    ಅಪೌಷ್ಠಿಕತೆಯಿಂದ ನರಳುತ್ತಿರೋ ಆಫ್ರಿಕನ್​ ಸಿಂಹಗಳ ಉಳಿವಿಗೆ ಜಾಲತಾಣದಲ್ಲಿ ಬಹುದೊಡ್ಡ ಅಭಿಯಾನ

    ನವದೆಹಲಿ: ಆಫ್ರಿಕಾದ ಸುಡಾನ್ ರಾಜಧಾನಿ ಖತ್ರೌಮ್​ ಉದ್ಯಾನವನದಲ್ಲಿ ಅಪೌಷ್ಠಿಕತೆಯಿಂದ ನರಳುತ್ತಿರುವ ಆಫ್ರಿಕನ್​ ಸಿಂಹಗಳ ಉಳಿವಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಬಹುದೊಡ್ಡ ಅಭಿಯಾನವೊಂದನ್ನು ಕೈಗೊಳ್ಳಲಾಗಿದೆ.

    ಸಿಂಹಗಳೆಲ್ಲವು ಅಲ್​ ಖುರೇಶಿ ಉದ್ಯಾನವನದಲ್ಲಿದ್ದು, ಸಾಕಷ್ಟು ಆಹಾರ ಮತ್ತು ಔಷಧವಿಲ್ಲದೆ ನಿತ್ರಾಣ ಸ್ಥಿತಿಯಲ್ಲಿವೆ.

    ಒಸ್ಮಾನ್​ ಸಲಿಹ್​ ಎಂಬ ಫೇಸ್​ಬುಕ್​ ಬಳಕೆದಾರ ಅನೇಕ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದು, ಅದರಲ್ಲಿ ಅಪೌಷ್ಠಿಕತೆಯಿಂದ ನರಳುತ್ತಿರುವ ಸಿಂಹಗಳ ದೃಶ್ಯವನ್ನು ನೋಡಬಹುದಾಗಿದೆ. ಎಷ್ಟರಮಟ್ಟಿಗೆ ಎಂದರೆ ಅಸ್ಥಿಪಂಜರ ಕಾಣುವ ಮಟ್ಟಿಗೆ ಸಿಂಹಗಳು ಬಡಕಲಾಗಿವೆ. ಅಲ್ಲದೆ, ಅನೇಕ ಸಂಘ ಸಂಸ್ಥೆಗಳನ್ನು ನೆರವು ನೀಡುವಂತೆ ಫೇಸ್​ಬುಕ್​ನಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

    ಸಾಮಾಜಿಕ ಜಾಲತಾಣದಲ್ಲಿ ಸಿಂಹಗಳ ಫೋಟೋ ವೈರಲ್​ ಆಗಿದ್ದು, ಅನೇಕ ಸ್ವಯಂಸೇವಕರು ಉದ್ಯಾನವನಕ್ಕೆ ಭೇಟಿ ನೀಡುತ್ತಿದ್ದಾರೆ. ಅದರಲ್ಲೂ ಅನೇಕರು ತಾಜಾ ಮಾಂಸ, ಔಷಧಗಳು ಹಾಗೂ ರೋಗ ನಿರೋಧಕಗಳನ್ನು ತರುತ್ತಿದ್ದಾರೆ. ಹಲವು ದಿನಗಳವರೆಗೆ ಭಾರಿ ಸಂಕಷ್ಟವನ್ನು ಅನುಭವಿಸಿದ್ದ ಸಿಂಹಗಳು ಇದೀಗ ಸಹಜ ಸ್ಥಿತಿಯತ್ತ ಮರಳುತ್ತಿದ್ದಾವೆ ಎಂದು ಉದ್ಯಾವನ ಅಧಿಕಾರಿಗಳು ಮತ್ತು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

    ಅಪೌಷ್ಠಿಕತೆಯಿಂದ ನರಳುತ್ತಿರುವ ಆಫ್ರಿಕನ್​ ಸಿಂಹಗಳ ಫೋಟೋ ಸೆರೆಹಿಡಿದು ಫೇಸ್​ಬುಕ್​ನಲ್ಲಿ ಶೇರ್​ ಮಾಡಿಕೊಂಡ ಸಲಿಹ್​ ಅವರ ಕಾಳಜಿಗೆ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ. (ಏಜೆನ್ಸೀಸ್​)

    Osman Salih ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಸೋಮವಾರ, ಜನವರಿ 20, 2020

    Today was a positive day at Qurashi Park. We had good meetings with the park administration and the wildlife police. It…

    Osman Salih ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಜನವರಿ 19, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts