ಮುದ್ದೇಬಿಹಾಳ: ಬಿದರಕುಂದಿ ಗ್ರಾಮ ವ್ಯಾಪ್ತಿಯ ಸರ್ಕಾರಿ ಆದರ್ಶ ಆರ್‌ಎಂಎಸ್‌ಎ ವಿದ್ಯಾಲಯದಲ್ಲಿ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದಿಂದ ಮುದ್ದೇಬಿಹಾಳ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಕಾರ್ಯಾಗಾರ ಆಯೋಜಿಸಲಾಗಿತ್ತು.
ಸಂಘದ ಅಧ್ಯಕ್ಷ ಎಸ್.ಎಸ್.ಲಮಾಣಿ ಮಾತನಾಡಿದರು. ವಿದ್ಯಾಲಯದ ಮುಖ್ಯಶಿಕ್ಷಕ ಅನೀಲಕುಮಾರ ರಾಠೋಡ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ವೈ.ಕವಡಿ ಕಾರ್ಯಾಗಾರ ಉದ್ಘಾಟಿಸಿದರು.
2024-25ನೇ ಸಾಲಿನ ಮುದ್ದೇಬಿಹಾಳ ತಾಲೂಕು ಮಟ್ಟದ ಕಾಯಕ ರತ್ನ ಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಕರಾದ ಸರ್ಕಾರಿ ಆದರ್ಶ ವಿದ್ಯಾಲಯದ ಎ.ಸಿ.ಕೆರೂರ, ಢವಳಗಿ ಎಂಬಿಪಿ ಶಾಲೆಯ ಎಸ್.ಆರ್.ಸುಲ್ಫಿ, ತಂಗಡಗಿ ಸರ್ಕಾರಿ ಪ್ರೌಢಶಾಲೆಯ ವಿ.ಎಸ್.ತೆಗ್ಗಿ, ನಾಲತವಾಡದ ಬಸವೇಶ್ವರ ಪ್ರೌಢಶಾಲೆಯ ಎಲ್.ಎಂ.ಜೋಗಿ, ಮುದ್ದೇಬಿಹಾಳ ಸರ್ಕಾರಿ ಪ್ರೌಢಶಾಲೆಯ ಎಂ.ಎಸ್.ನಾಟಿಕಾರ, ನಾಲತವಾಡ ಸರ್ಕಾರಿ ಉರ್ದು ಪ್ರೌಢಶಾಲೆಯ ರುದ್ರಮ್ಮ ಟಕ್ಕಳಕಿ, ಕೋಳೂರು ಸರ್ಕಾರಿ ಪ್ರೌಢಶಾಲೆಯ ಶ್ರೀಶೈಲ ಅಂಗಡಿ, ಮಡಿಕೇಶ್ವರ ಸರ್ಕಾರಿ ಪ್ರೌಢಶಾಲೆಯ ವಿ.ಜಿ.ನಾಗರಾಳ, ಬಳಬಟ್ಟಿ ಸರ್ಕಾರಿ ಪ್ರೌಢಶಾಲೆಯ ಎಚ್.ವೈ.ತೋಳಮಟ್ಟಿ, ನಾಲತವಾಡದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಬಾಲಚಂದ್ರ ಮೇಟಿ, ಎಸ್.ಪಿ.ಹಂಡರಗಲ್ ಅವರನ್ನು ಸನ್ಮಾನಿಸಲಾಯಿತು.
ಮುದ್ದೇಬಿಹಾಳ ತಾಲೂಕು ಖಾಸಗಿ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸಯ್ಯ ಹಿರೇಮಠ, ಆದರ್ಶ ವಿದ್ಯಾಲಯದ ಎಸ್‌ಡಿಎಂಸಿ ಅಧ್ಯಕ್ಷ, ಬಿದರಕುಂದಿ ಗ್ರಾಪಂ ಸದಸ್ಯ ಗುಂಡಪ್ಪ ಕೊಟಗಿ, ಶಿವಮೊಗ್ಗದ ಅಂತಾರಾಷ್ಟ್ರೀಯ ಚೆಸ್ ಸ್ಕೂಲ್‌ನ ಪ್ರಾಣೇಶ ಯಾದವ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸುರೇಶ ಆಲೂರ ಇದ್ದರು. ತಾಲೂಕಿನ ವಿವಿಧ ಶಾಲೆಗಳಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದ ಶಾಲಾ ಕ್ರೀಡೆಗಳಲ್ಲಿ ಭಾಗವಹಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಶಿಕ್ಷಕ ಎಂ.ಎಸ್.ಬಿರಾದಾರ ಸ್ವಾಗತಿಸಿದರು. ಶಿಕ್ಷಕ ಸಂಗಮೇಶ ಸಜ್ಜನ, ದೈಹಿಕ ಶಿಕ್ಷಣ ಶಿಕ್ಷಕ ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಚಂದ್ರು ಮನಗೂಳಿ ವಂದಿಸಿದರು.