More

    ಫುಲೆ ದಂಪತಿ ಶೈಕ್ಷಣಿಕ ಸೇವೆ ಶ್ಲಾಘನೀಯ

    ಮೂಡಲಗಿ: ಭಾರತದ ಮಹಿಳೆಯರ ಉತ್ತಮ ಸ್ಥಿತಿಗೆ ಭದ್ರ ಬುನಾದಿ ಹಾಕಿದ ಸಾವಿತ್ರಿಬಾಯಿ ಹಾಗೂ ಜ್ಯೋತಿಬಾ ಪುಲೆ ದಂಪತಿ ಸೇವೆ ಶ್ಲಾಘನೀಯ ಎಂದು ಮುಖ್ಯ ಶಿಕ್ಷಕಿ ಪಲ್ಲವಿ ಭಂಡಾರಿ ಹೇಳಿದ್ದಾರೆ.

    ಪಟ್ಟಣದ ಎಲ್.ವೈ.ಅಡಿಹುಡಿ ಕನ್ನಡ ಮಾದ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಜರುಗಿದ ಮಾತೆ ಸಾವಿತ್ರಿಬಾಯಿ ಪುಲೆ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಶಿಲ್ಪಾ ಗಡಾದ ಮಾತನಾಡಿ, ಭಾರತದ ಅನೇಕ ಮಹಿಳಾ ಶೈಕ್ಷಣಿಕ ಸಾಧಕರ ಸಾಲಿನಲ್ಲಿ ಮುಂಚೂಣಿಯಲ್ಲಿ ಇರುವ ಹೆಸರು ಮಾತೆ ಸಾವಿತ್ರಿಬಾಯಿ ಫುಲೆ ಅವರದು. ಹೆಣ್ಣುಮಕ್ಕಳು ಮನೆಯಿಂದ ಹೊರಬರುವುದೇ ಕಷ್ಟವಾಗಿದ್ದ ಆ ಕಾಲದಲ್ಲಿ ಶಿಕ್ಷಕ ತರಬೇತಿ ಪಡೆದು, ಸ್ವತಃ ಶಾಲೆ ತೆರೆದು, ಉನ್ನತ ವರ್ಗದವರ ಶೋಷಣೆ ಮೀರಿ ಧೈರ್ಯವಾಗಿ ಶಿಕ್ಷಣ ನೀಡಿದ ಖ್ಯಾತಿ ಅವರಿಗೆ ಸಲ್ಲುತ್ತದೆ ಎಂದರು.

    ಶಿಲ್ಪಾ ಸುತಾರ, ಲಾವಣ್ಯ ಭಟ್, ದರ್ಶನ ನಾಯಕ್, ನವರತ್ನ ಹೊಸಕಟ್ಟ, ಸಾರಿಕಾ ಮೋಹಿತೆ, ಲಕ್ಷ್ಮೀ ದಾಸರ, ಗೀತಾ ಮೇತ್ರಿ, ವಿಜಯಲಕ್ಷ್ಮೀ ಕುರಬೇಟ, ಸುರೇಖಾ ಹೆಬ್ಬಳ್ಳಿ, ಸವಿತಾ ಹೆರಲಕ್ಕಿ, ಸವಿತಾ ಆರ್., ಸಿದ್ದರಾಮ ಡೊಳ್ಳಿ, ಮಮತಾ ಜಮಾದಾರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts