ಆಸ್ಟ್ರೇಲಿಯಾದಲ್ಲಿ ಹೊಸ ವರ್ಷ ಆಚರಿಸಿ ಎಲ್ಲರಿಗೂ ಶುಭಕೋರಿದ ವಿರುಷ್ಕಾ ದಂಪತಿ!

ಸಿಡ್ನಿ: ಟೀಂ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಅವರು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಹೊಸ ವರ್ಷವನ್ನು ಸಂಭ್ರಮಿಸಿದ್ದಾರೆ.

ಸಿಡ್ನಿಯ ಒಪೆರಾ ಹೌಸ್​ ಮುಂಭಾಗದಲ್ಲಿ ಪರಸ್ಪರ ತೋಳುಗಳಲ್ಲಿ ಬಂಧಿಯಾಗುವ ಮೂಲಕ ಫೋಟೋ ಕ್ಲಿಕ್ಕಿಸಿಕೊಂಡು 2019ರ ಹೊಸ ವರ್ಷವನ್ನು ಹೊಸ ಭರವಸೆಯೊಂದಿಗೆ ಸ್ವಾಗತಿಸಿದ್ದಾರೆ.

ಆತಿಥೇಯ ಆಸ್ಟ್ರೇಲಿಯಾ ಹಾಗೂ​ ಪ್ರವಾಸಿ ಟೀಂ ಇಂಡಿಯಾ ನಡುವಿನ ಮೂರು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಮೆಲ್ಬೋರ್ನ್​ನಲ್ಲಿ ನಡೆದ ಕೊನೆಯ ಹಾಗೂ ಮೂರನೇ ಪಂದ್ಯದಲ್ಲಿ 137 ರನ್​ಗಳ ಅಂತರದಲ್ಲಿ ಭಾರತ ಐತಿಹಾಸಿಕ ಗೆಲುವು ಸಾಧಿಸಿತು. ಈ ಮೂಲಕ 2-1 ಅಂತರದಲ್ಲಿ ಸರಣಿಯನ್ನು ವಶಪಡಿಸಿಕೊಂಡಿತು. ಕೊನೆಯ ಪಂದ್ಯದ ಬಳಿಕ ತಾರಾ ಜೋಡಿ ಮೆಲ್ಬೋರ್ನ್​ನಿಂದ ಸಿಡ್ನಿಗೆ ತೆರಳಿದ್ದು ಹೊಸ ವರ್ಷವನ್ನು ಸಂಭ್ರಮಿಸಿದ್ದಾರೆ.

ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿರುವ ವಿರುಷ್ಕಾ ದಂಪತಿ ಮುಂದಿನ ಹರ್ಷದಾಯಕ ವರ್ಷ ನಿಮ್ಮದಾಗಲಿ, ಎಲ್ಲರಿಗೂ ದೇವರ ಒಳ್ಳೆಯದನ್ನು ನೀಡಲಿ ಎಂದು ಶುಭಕೋರಿದ್ದಾರೆ.

ಇದೇ ವೇಳೆ ಟೀಂ ಇಂಡಿಯಾದ ವೇಗಿ ಭುವನೇಶ್ವರ್​ ಕುಮಾರ್​ ಪೋಟೋವೊಂದನ್ನು ಅಪ್​ಲೋಡ್​ ಮಾಡಿ ಶುಭಜಕೋರಿದ್ದಾರೆ. ಫೋಟೋದಲ್ಲಿ ತಂಡದ ಸದಸ್ಯರು ಹಾಗೂ ಕುಟುಂಬದವರಿದ್ದಾರೆ. (ಏಜೆನ್ಸೀಸ್​)