PHOTOS: VIDEO 12 ಜ್ಯೋತಿರ್ಲಿಂಗಗಳ ಪೈಕಿ ಪ್ರಮುಖವಾದ ಕೇದಾರನಾಥ ಜ್ಯೋತಿರ್ಲಿಂಗದ ದರ್ಶನ ಆರಂಭ: 6 ತಿಂಗಳವರೆಗೆ ಅವಕಾಶ

ಕೇದಾರನಾಥ: ದೇಶದಲ್ಲಿರುವ 12 ಜ್ಯೋತಿರ್ಲಿಂಗಗಳ ಪೈಕಿ ಒಂದಾಗಿರುವ ಕೇದಾರನಾಥ ಜ್ಯೋತಿರ್ಲಿಂಗದ ದರ್ಶನ ಆರಂಭವಾಗಿದೆ. ಗುರುವಾರ ಬೆಳಗ್ಗೆ 5.35ಕ್ಕೆ ದೇಗುಲದ ಬಾಗಿಲನ್ನು ವಿದ್ಯುಕ್ತವಾಗಿ ತೆರೆಯಲಾಯಿತು. ಆರು ತಿಂಗಳವರೆಗೆ ದರ್ಶನ ಮುಂದುವರಿಯಲಿದೆ.

ದೇಗುಲದ ಬಾಗಿಲು ತೆರೆಯುವ ಮುನ್ನವೇ ನೂರಾರು ಭಕ್ತರು ದೇಗುಲದ ಮುಂದೆ ಜಮಾಯಿಸಿದ್ದರು. ದೇವಸ್ಥಾನದ ಪೂಜಾರಿಗಳು ಪೂಜೆ ಸಲ್ಲಿಸಿ, ದೇಗುಲದ ಬಾಗಿಲನ್ನು ತೆರೆದರು. ಬಳಿಕ ಭಕ್ತರು ಸಾಲಾಗಿ ದೇವರ ದರ್ಶನ ಪಡೆದು ಪುನೀತರಾದರು.

ಕಳೆದ ವರ್ಷ ಕೇದಾರನಾಥ ದೇಗುಲದ ಬಾಗಿಲು ತೆರೆದ ದಿನವೇ ಪ್ರಧಾನಿ ನರೇಂದ್ರ ಮೋದಿ ದೇವರ ದರ್ಶನ ಪಡೆದುಕೊಂಡಿದ್ದರು. ದೇಗುಲದ ಬಾಗಿಲು ತೆರೆದು, ದೇವರ ಪೂಜೆ ಆದ ನಂತರದಲ್ಲಿ ದೇವರ ದರ್ಶನ ಪಡೆದಿದ್ದರು. (ದಿಗ್ವಿಜಯ ನ್ಯೂಸ್​)