More

    PHOTOS| ಉಡುಪಿಯಲ್ಲಿ ವೈಭವದ ಅದಮಾರು ಪರ್ಯಾಯ ಮೆರವಣಿಗೆ

    ಉಡುಪಿ: ಪರ್ಯಾಯ ಶ್ರೀ ಅದಮಾರು ಮಠದ ಈಶಪ್ರಿಯತೀರ್ಥ ಸ್ವಾಮೀಜಿಯವರ ಪ್ರಥಮ ಪರ್ಯಾಯದ ಮೆರವಣಿಗೆಗೆ ಕಲಾತಂಡಗಳು ಹೆಚ್ಚಿನ ಮೆರಗು ನೀಡಿತು. ಶನಿವಾರ ಮುಂಜಾನೆ 2.30ಕ್ಕೆ ಜೋಡುಕಟ್ಟೆಯಿಂದ ಆರಂಭಗೊಂಡ ಮೆರವಣಿಗೆ ಸುಮಾರು ಎರಡು ಕಿ.ಮೀ. ಸಾಗಿ ರಥಬೀದಿಗೆ ತಲುಪಿ ಸಂಪನ್ನಗೊಂಡಾಗ ಆರು ಗಂಟೆಯಾಗಿತ್ತು.

    ಪರ್ಯಾಯ ಮೆರವಣಿಗೆಯಲ್ಲಿ ತಟ್ಟಿರಾಯ, ಬಿರುದಾವಳಿ, ವೇದಘೋಷ, ಕುಣಿತ ತಂಡಗಳು, ಡೊಳ್ಳು ಕುಣಿತ, ಟ್ಯಾಬ್ಲೊಗಳು‌ ಆಕರ್ಷಣೀಯವಾಗಿತ್ತು. ಒಂದು ಹಂತದ ಮೆರವಣಿಗೆಯ ಬಳಿಕ

    ಪರ್ಯಾಯ ಶ್ರೀ ಅದಮಾರು ಶ್ರೀಪಾದರ ಪಲ್ಲಕ್ಕಿ ಸಾಗಿ ಬಂತು. ಭಕ್ತರು ಪಲ್ಲಕ್ಕಿ ಹೊತ್ತು ಸಾಗಿದರು. ನಂತರ ಅಷ್ಟ ಮಠಗಳಾದ ಕೃಷ್ಣಾಪುರ, ಪೇಜಾವರ, ಕಾಣಿಯೂರು, ಸೋಧೆ ಸ್ವಾಮೀಜಿಯವರು ಶಿಷ್ಟಾಚಾರದ ಪ್ರಕಾರ ಮೆರವಣಿಗೆಯಲ್ಲಿ ವಾಹನದಲ್ಲಿರಿಸಿದ ಪಲ್ಲಕ್ಕಿಯಲ್ಲಿ ಕುಳಿತು ಸಾಗಿದರು. ಬಳಿಕ ವಿವಿಧ ಟ್ಯಾಬ್ಲೊಗಳು ಸಾಗಿ ಬಂತು. ಬಾರಿಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ 15 ಜಾನಪದ ತಂಡಗಳು ಭಾಗವಹಿಸಿದ್ದವು. ಕೊನೆಯಲ್ಲಿ ನಗರಸಭೆ ಸ್ವಚ್ಛತಾ ಸಿಬ್ಬಂದಿ ಸ್ವಚ್ಛತಾ ಕಾರ್ಯ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts