ಬೆಂಗಳೂರು: ಇಂದು ವಿಜಯವಾಣಿ ಕಚೇರಿಯಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರೊಂದಿಗೆ ಫೋನ್ ಇನ್ ಕಾರ್ಯಕ್ರಮ ನಡೆಯಲಿದೆ.
ಬೆಂಗಳೂರು ನಗರ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಆಯುಕ್ತರು ನೇರವಾಗಿ ಉತ್ತರಿಸಲಿದ್ದಾರೆ. ಮಹಿಳೆಯರಿಗೆ ಬೆಂಗಳೂರು ಎಷ್ಟು ಸುರಕ್ಷಿತ? ಸರಗಳವು, ದರೋಡೆ, ಕಳ್ಳತನ ತಡೆಗೆ ಕ್ರಮಗಳೇನು? ಬೆಂಗಳೂರಿನ ಸುರಕ್ಷತೆಗಾಗಿ ತೆಗೆದುಕೊಂಡ ಹೊಸ ಯೋಜನೆಗಳೇನು ಎಂಬ ಬಗ್ಗೆ ಭಾಸ್ಕರ್ ರಾವ್ ಅವರು ವಿವರಿಸಲಿದ್ದಾರೆ.
ಮಧ್ಯಾಹ್ಯ 12ಗಂಟೆಯಿಂದ 1ಗಂಟೆಯವರೆಗೆ ಫೋನ್ ಇನ್ ನಡೆಯಲಿದ್ದು ನೀವೂ ಕರೆ ಮಾಡಿ. ಫೋ.ನಂಬರ್: 080-26257455