ಈಗಾಗಲೇ ಶೂಟಿಂಗ್ ಮತ್ತು ಸ್ನೀಕ್ ಪಿಕ್ಗಳ ಮೂಲಕವೇ ಸದ್ದು ಮಾಡುತ್ತಿರುವ ಫ್ಯಾಂಟಮ್ ಚಿತ್ರತಂಡ, ಸೋಮವಾರ ಅಭಿಮಾನಿಗಳಿಗೆ ಮತ್ತೊಂದು ಉಡುಗೊರೆ ನೀಡಿದೆ. ಈಗಾಗಲೇ ಶೂಟಿಂಗ್ ಸೆಟ್ನಲ್ಲಿ ಕಳೆದ ನಾಲ್ಕು ತಿಂಗಳ ಬಳಿಕ ಕ್ಯಾಮರಾ ಎದುರಿಸಿದ ಅನುಭವ ಹೇಳಿಕೊಂಡು, ಅದರ ಸಣ್ಣ ದೃಶ್ಯಗಳನ್ನು ಹಂಚಿಕೊಂಡಿದ್ದ ಸುದೀಪ್, ಇದೀಗ ಅವರ ಮಾಸ್ ಲುಕ್ ಅನ್ನು ರಿವೀಲ್ ಮಾಡಿದ್ದಾರೆ. ಫ್ಯಾಂಟಮ್ ಜಗತ್ತಿನ ವಿಕ್ರಾಂತ್ ರೋಣನ ಅವತಾರ ಬಹಿರಂಗವಾಗಿದೆ.
ಇದನ್ನೂ ಓದಿ: ಮಿನರ್ವ ಮಿಲ್ನಲ್ಲಿ ಕಬ್ಜ ಬಿಡಾರ; ಶುರುವಾಯ್ತು ಶೂಟಿಂಗ್
ಹೌದು, ಅನೂಪ್ ಭಂಡಾರಿ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಫ್ಯಾಂಟಮ್ ಚಿತ್ರದಲ್ಲಿ ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಪಾತ್ರದಲ್ಲಿ ಖಡಕ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಅವರ ಆ ಗತ್ತು ಗಮ್ಮತ್ತು ಹೇಗಿರಲಿದೆ ಎಂಬುದಕ್ಕೆ ಸಣ್ಣ ಸಣ್ಣ ದೃಶ್ಯಗಳ ಮೂಲಕ ಬಹಿರಂಗವಾಗಿದೆ. ಆದರೆ, ಅವರ ಪೂರ್ತಿ ಲುಕ್ ಹೇಗಿದೆ ಎಂಬ ಬಗ್ಗೆ ಎಲ್ಲಿಯೂ ಲುಕ್ ಬಿಡುಗಡೆ ಮಾಡಿರಲಿಲ್ಲ ಚಿತ್ರತಂಡ. ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದ್ದು, ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
#vikranthRona#TheWorldOfPhantom pic.twitter.com/M52TvlKc3w
— Kichcha Sudeepa (@KicchaSudeep) August 10, 2020
ಇದನ್ನೂ ಓದಿ: ಮತ್ತೆ ನಾಲ್ಕು ಸರ್ಕಾರಿ ಶಾಲೆ ದತ್ತು ಪಡೆದ ಕಿಚ್ಚ ಸುದೀಪ್
ಸದ್ಯ ಹೈದರಾಬಾದ್ನಲ್ಲಿ ಶೂಟಿಂಗ್ ನಡೆಯುತ್ತಿದ್ದು, ಕರೊನಾ ಹಿನ್ನೆಲೆಯಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತ ಚಿತ್ರೀಕರಣ ಮಾಡಿಕೊಳ್ಳುತ್ತಿದೆ ಫ್ಯಾಂಟಮ್ ಚಿತ್ರತಂಡ. ಜಾಕ್ ಮಂಜು ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸುತ್ತಿದ್ದಾರೆ.
ಆಯುಷ್ಮಾನ್ ಖುರಾನಾಗ್ಯಾಕೆ ಬಂತು ಬಕೆಟ್ ಹಿಡಿಯೋ ಬುದ್ಧಿ!; ಕಂಗನಾ ರಣಾವತ್ ತರಾಟೆ