90ರ ಗಡಿ ದಾಟಿದ ಪೆಟ್ರೋಲ್​ ಬೆಲೆ!

ಪರ್ಭಾನಿ: ನಿನ್ನೆಯಷ್ಟೇ ಪೆಟ್ರೋಲ್​, ಡೀಸೆಲ್​ ದರ ಏರಿಕೆ ಖಂಡಿಸಿ ಕಾಂಗ್ರೆಸ್​ ಹಾಗೂ ಇನ್ನಿತರ ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳು ಭಾರತ್​ ಬಂದ್ ಪ್ರತಿಭಟನೆ ಮಾಡಿದ್ದರೆ, ಇಂದು ಮಹಾರಾಷ್ಟ್ರದ ಪರ್ಭಾನಿಯಲ್ಲಿ ಪೆಟ್ರೋಲ್​ ಬೆಲೆ 90ರ ಗಡಿ ದಾಟಿ ದಾಖಲೆ ಬರೆದಿದೆ.

ಸೋಮವಾರ ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯಲ್ಲಿ ಪೆಟ್ರೋಲ್​ ದರ 89.97 ರೂ. ಇದ್ದರೆ ಡೀಸೆಲ್​ ಬೆಲೆ 77.92 ರೂ. ಇತ್ತು. ಆದರೆ, ಇಂದು ನವದೆಹಲಿ, ಮುಂಬೈ ಸೇರಿ ಇನ್ನೂ ಪ್ರಮುಖ ನಗರಗಳಲ್ಲಿ ಡೀಸೆಲ್​ ಮತ್ತು ಪೆಟ್ರೋಲ್​ ದರ ನಿನ್ನೆಗಿಂತ ಅಧಿಕವಾದ ಪರಿಣಾಮ ಪರ್ಭಾನಿಯಲ್ಲಿ ಪೆಟ್ರೋಲ್​ ದರ 90.11 ತಲುಪಿ ದಾಖಲೆ ಬರೆದಿದೆ.

ಇನ್ನುಳಿದಂತೆ ನಾಂಡೆಡ್​ ಹಾಗೂ ಅಮರಾವತಿಯಲ್ಲಿ ಒಂದು ಲೀಟರ್​ ಪೆಟ್ರೋಲ್​ ಬೆಲೆ 89.93 ರೂ. ಇದೆ. ಇದೇ ರೀತಿ ದರ ಏರಿಕೆಯಾಗುತ್ತಿದ್ದರೆ ಪೆಟ್ರೋಲ್​ ಬೆಲೆ ಶತಕದ ಬಾಗಿಲು ತಟ್ಟುವುದರಲ್ಲಿ ಯಾವುದೇ ಅಚ್ಚರಿಯಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಣೇಶ ಚತುರ್ಥಿಗೆ ಇನ್ನೆರಡು ದಿನ ಇರುವಂತೆ ಪೆಟ್ರೋಲ್​ ಬೆಲೆ ಮತ್ತೆ 0.14 ಮತ್ತು ಡೀಸೆಲ್​ ಬೆಲೆ 0.15 ರೂ. ಏರಿಕೆಯಾಗಿದ್ದು, ಸದ್ಯ ದೆಹಲಿಯಲ್ಲಿ ಪೆಟ್ರೋಲ್​ ಬೆಲೆ ಪ್ರತಿ ಲೀಟರ್​ಗೆ 80.87 ರೂ. ಡೀಸೆಲ್​ ಬೆಲೆ ಪ್ರತಿ ಲೀಟರ್​ಗೆ 72.97 ರೂ.ತಲುಪಿದೆ. ಮುಂಬೈನಲ್ಲಿ ಪೆಟ್ರೋಲ್​ಗೆ 88.26 ರೂ. ಡೀಸೆಲ್​ಗೆ 77.47 ರೂ. ಆಗಿದೆ. (ಏಜೆನ್ಸೀಸ್​)