ದೇಶಾದ್ಯಂತ ಬೆಲೆ ಇಳಿಕೆ ಕಂಡ ಡೀಸೆಲ್‌, ಪೆಟ್ರೋಲ್‌ ಯಥಾಸ್ಥಿತಿ: ಬೆಂಗಳೂರಿನಲ್ಲೆಷ್ಟು?

ನವದೆಹಲಿ: ಸತತ ಎರಡು ದಿನಗಳ ಇಳಿಕೆ ಕಂಡ ಬಳಿಕ ದೇಶಾದ್ಯಂತ ಪೆಟ್ರೋಲ್‌ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಡೀಸೆಲ್‌ ಬೆಲೆ ಮಾತ್ರ 10-11 ಪೈಸೆಗಳಷ್ಟು ಭಾನುವಾರ ಇಳಿಕೆ ಕಂಡಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಇಳಿಕೆಯಾದ ಬೆನ್ನಲ್ಲೇ ಕಳೆದ ಅಕ್ಟೋಬರ್‌ಗೆ ಹೋಲಿಸಿದರೆ ಕಡಿಮೆ ಮಟ್ಟಕ್ಕೆ ಪೆಟ್ರೋಲ್ ಬೆಲೆ ಇಳಿದಿದ್ದು, ದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ 68.29 ರೂ.ಗೆ ಮಾರಾಟವಾಗುತ್ತಿದೆ. ಮುಂಬೈನಲ್ಲಿ 73.95 ರೂ., ಕೋಲ್ಕತಾದಲ್ಲಿ 70.43 ಮತ್ತು ಚೆನ್ನೈನಲ್ಲಿ 70.85 ರೂ.ಗಳಷ್ಟಿದೆ.

ಪ್ರಮುಖ ನಗರಗಳಲ್ಲಿ ಡೀಸೆಲ್‌ ಬೆಲೆ ಇಳಿಕೆಯಾಗಿದ್ದು, ನವದೆಹಲಿಯಲ್ಲಿ ಲೀ.ಗೆ 62.16 ರೂ., ಮುಂಬೈನಲ್ಲಿ 65.04, ಕೋಲ್ಕತಾದಲ್ಲಿ 63.93 ಮತ್ತು ಚೆನ್ನೈನಲ್ಲಿ 65.62 ರೂ.ಗೆ ಮಾರಾಟವಾಗುತ್ತಿದೆ.

ಬೆಂಗಳೂರಿನಲ್ಲೆಷ್ಟು ಪೆಟ್ರೋಲ್‌, ಡೀಸೆಲ್‌ ಬೆಲೆ?

ರಾಜ್ಯ ಸರ್ಕಾರ ಪೆಟ್ರೋಲ್‌ ಮೇಲೆ ಶೇ. 32 ಮತ್ತು ಡೀಸೆಲ್‌ ಮೇಲೆ ಶೇ. 21ರಷ್ಟು ಸುಂಕ ಏರಿಕೆ ಮಾಡಿದ ಬಳಿಕ ಎರಡು ದಿನಗಳ ಏರಿಕೆ ಕಂಡಿದ್ದ ಬೆಂಗಳೂರಿನಲ್ಲಿ ಇಂದು ಪೆಟ್ರೋಲ್‌ ಯಥಾಸ್ಥಿತಿ ಕಾಯ್ದುಕೊಂಡು 70.53 ರೂ.ಗಳಷ್ಟಿದೆ. ಇನ್ನು ಲೀಟರ್‌ ಡೀಸೆಲ್‌ ಮಾತ್ರ 11 ಪೈಸೆ ಇಳಿಕೆಯಾಗಿದ್ದು, 64.19 ರೂ.ಗೆ ಮಾರಾಟವಾಗುತ್ತಿದೆ. (ಏಜೆನ್ಸೀಸ್)