ಶನಿವಾರವೂ ಭಾರಿ ಇಳಿಕೆ ಕಂಡ ಪೆಟ್ರೋಲ್, ಡೀಸೆಲ್ ಬೆಲೆ! ಬೆಂಗಳೂರಿನಲ್ಲಿ ಇಳಿಕೆಯಾಗಿದ್ದೆಷ್ಟು?

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯಲ್ಲಿ ನಿರಂತರ ಇಳಿಕೆ ಕಾಣುತ್ತಿರುವ ಬೆನ್ನಲ್ಲೇ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗಿದ್ದು, ವಾಹನ ಸವಾರರಿಗೆ ಫುಲ್‌ ಖುಷ್‌ ಆಗಿದೆ.

ಬೆಂಗಳೂರು ಕೂಡ ಇಂಧನ ಬೆಲೆ ಇಳಿಕೆಗೆ ಸಾಕ್ಷಿಯಾಗಿದ್ದು, ಪೆಟ್ರೋಲ್‌ ಲೀಟರ್‌ಗೆ 25 ಪೈಸೆ ಕಡಿಮೆಯಾಗಿ 72.35 ರೂ.ರಷ್ಟಿದೆ. ಇನ್ನು ಡೀಸೆಲ್‌ ಬೆಲೆಯಲ್ಲೂ ಇಳಿಕೆಯಾಗಿದ್ದು, ಲೀಟರ್‌ ಡೀಸೆಲ್‌ಗೆ 66.08 ರೂ.ಗಳಷ್ಟಿದ್ದು, ನಿನ್ನೆಗೆ ಹೋಲಿಸಿದರೆ 30 ಪೈಸೆ ಕಡಿಮೆಯಾಗಿದೆ.

ನವದೆಹಲಿಯಲ್ಲಿ ಲೀ. ಪೆಟ್ರೋಲ್‌ಗೆ 19 ಪೈಸೆ ಕಡಿಮೆಯಾಗುವ ಮೂಲಕ 69.99 ರೂ.ಗೆ ಮಾರಾಟವಾಗುತ್ತಿದ್ದರೆ, ಡೀಸೆಲ್‌ ಲೀ.ಗೆ 24 ಪೈಸೆ ಇಳಿಕೆ ಕಂಡು 63.93 ರೂ.ಗಳಷ್ಟಿದೆ. ಕೋಲ್ಕತದಲ್ಲಿ ಪೆಟ್ರೋಲ್‌ 72.44 ರೂ.ಗಳಿದ್ದು, 17 ಪೈಸೆ ಕಡಿಮೆಯಾಗಿದ್ದರೆ, ಡೀಸೆಲ್‌ ಲೀಟರ್‌ಗೆ 16 ಪೈಸೆ ಕಡಿಮೆಯಾಗಿ 66.09 ರೂ.ಗಳಿಗೆ ಮಾರಾಟವಾಗುತ್ತಿದೆ.

ವಾಣಿಜ್ಯ ನಗರಿ ಮುಂಬೈನಲ್ಲಿ ಕೂಡ ಬೆಲೆ ಇಳಿಕೆಯಾಗಿದ್ದು, ಪೆಟ್ರೋಲ್‌ ಲೀ.ಗೆ 19 ಪೈಸೆ ಕಡಿಮೆಯಾಗಿ 75.69 ರೂ.ಗೆ ಮಾರಾಟವಾಗುತ್ತಿದೆ. ಇತ್ತ ಡೀಸೆಲ್‌ ಬೆಲೆಯಲ್ಲಿ 25 ಪೈಸೆ ಕಡಿಮೆಯಾಗಿ 67.03 ರೂ.ಗಳಷ್ಟಿದೆ. ತಮಿಳುನಾಡಿನ ಚೆನ್ನೈ ನಲ್ಲಿ 20 ಪೈಸೆ ಲೀ. ಪೆಟ್ರೋಲ್‌ಗೆ ಕಡಿಮೆಯಾಗಿದ್ದು, 72.70ರೂ.ಗಳಿದೆ. ಡೀಸೆಲ್‌ಗೆ 26 ಪೈಸೆ ಕಡಿಮೆಯಾಗಿ 67.62 ರೂ.ಗೆ ದೊರಕುತ್ತಿದೆ. (ಏಜೆನ್ಸೀಸ್)

Leave a Reply

Your email address will not be published. Required fields are marked *