ಸತತ ಇಳಿಕೆ ಕಾಣುತ್ತಿರುವ ಪೆಟ್ರೋಲ್‌, ಡೀಸೆಲ್‌ ಬೆಲೆ! ಬೆಂಗಳೂರಿನಲ್ಲೆಷ್ಟು?

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆ ಪರ್ವ ಮುಂದುವರಿದಿರುವ ಪರಿಣಾಮ ದೇಶಾದ್ಯಂತ ಇಂಧನ ಬೆಲೆಯಲ್ಲಿ ಇಳಿಕೆ ಕಾಣುತ್ತಲೇ ಸಾಗಿದೆ. ಭಾನುವಾರ ಕೂಡ ಕೂಡ ಪೆಟ್ರೋಲ್‌, ಡೀಸೆಲ್ ಬೆಲೆಯಲ್ಲಿ ಕ್ರಮವಾಗಿ 15 – 20 ಹಾಗೂ 22 ಪೈಸೆ ಇಳಿಕೆಯಾಗಿದೆ.

ಬೆಂಗಳೂರಿನಲ್ಲೂ ಕೂಡ ಕಳೆದೊಂದು ತಿಂಗಳಿಂದ ಬೆಲೆ ಇಳಿಕೆಯಾಗುತ್ತಲೇ ಸಾಗಿದ್ದು, ಇಂದು ಲೀಟರ್‌ ಪೆಟ್ರೋಲ್‌ಗೆ 15 ಪೈಸೆ ಇಳಿಕೆಯಾಗುವ ಮೂಲಕ 71.09 ರೂ.ಗಳಷ್ಟಿದೆ. ಇನ್ನು ಡೀಸೆಲ್‌ ಬೆಲೆಯಲ್ಲೂ 21 ಪೈಸೆ ಇಳಿಕೆಯಾಗಿ 65.42 ರೂ.ಗೆ ಮಾರಾಟವಾಗುತ್ತಿದೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ಗೆ 15 ಪೈಸೆ ಕಡಿಮೆಯಾಗಿ 70.55 ರೂ.ಗಳಷ್ಟಿದ್ದರೆ, ಡೀಸೆಲ್‌ಗೆ 21 ಪೈಸೆ ಕಡಿಮೆಯಾಗಿ 65.09 ರೂ.ಗಳಿಗೆ ಮಾರಾಟವಾಗುತ್ತಿದೆ.

ಮುಂಬೈನಲ್ಲಿ ಲೀ. ಪೆಟ್ರೋಲ್‌ 76.13 ರೂ.ಗೆ ಮಾರಾಟವಾಗುತ್ತಿದ್ದು, 15 ಪೈಸೆ ಕಡಿಮೆಯಾಗಿದೆ. ಇನ್ನು ಡೀಸೆಲ್‌ ಲೀ.ಗೆ 20 ಪೈಸೆ ಕಡಿಮೆಯಾಗಿ 68.10 ರೂ.ಗಳಷ್ಟಿದೆ.

ಅದೇರೀತಿ ಕೋಲ್ಕತಾದಲ್ಲಿಯೂ 72.60 ರೂ.ಗೆ ಪೆಟ್ರೋಲ್‌ ಮಾರಾಟವಾಗುತ್ತಿದ್ದು, ಡೀಸೆಲ್‌ 68 ರೂ.ಗಳಿಗಿಂತಲೂ ಕೆಳಗಿಳಿದಿದೆ. ಸದ್ಯ 66.82 ರೂ.ಗಳಷ್ಟಿದೆ. ಚೆನ್ನೈನಲ್ಲಿ ಪೆಟ್ರೋಲ್‌ ಲೀ.ಗೆ 73.18 ರೂ.ಗಳಿದ್ದರೆ, ಲೀಟರ್‌ ಡೀಸೆಲ್‌ 68.70 ರೂ.ಗಳಿಗೆ ಮಾರಾಟವಾಗುತ್ತದೆ.

ಕಳೆದ ಎರಡು ತಿಂಗಳಿನಿಂದಲೂ ಇಂಧನ ಬೆಲೆಯಲ್ಲಿ ಇಳಿಕೆ ಕಾಣುತ್ತಲೇ ಸಾಗಿದೆ. ಅಕ್ಟೋಬರ್‌ನಲ್ಲಿ ದಾಖಲೆ ಪ್ರಮಾಣದಲ್ಲಿ ಬೆಲೆ ಏರಿಕೆಯಾಗಿದ್ದ ಇಂಧನ ಬೆಲೆಯು ನವೆಂಬರ್‌ ಮೊದಲ ವಾರದಿಂದಲೂ ಶೇ. 15ರಷ್ಟು ಕಡಿಮೆಯಾಗಿದೆ. ಇನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಬೆಲೆಯು ಕೂಡ ಬ್ಯಾರೆಲ್‌ಗೆ ಶೇ. 30ರಷ್ಟು ಇಳಿಕೆ ಕಂಡಿದೆ. (ಏಜೆನ್ಸೀಸ್)