ಮತ್ತೆ ಇಳಿಕೆ ಕಾಣುತ್ತಿದೆ ಪೆಟ್ರೋಲ್‌, ಡೀಸೆಲ್‌ ಬೆಲೆ! ಬೆಲೆ ವಿವರ ಇಲ್ಲಿದೆ

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಳಿತದಿಂದಾಗಿ ದೇಶಾದ್ಯಂತ ಇಂಧನ ಬೆಲೆಯಲ್ಲಿ ಸತತ ಏರಿಕೆ, ಇಳಿಕೆ ಕಂಡುಬರುತ್ತಿದ್ದು, ಇದೀಗ ಮತ್ತೆ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಇಳಿಕೆಯಾಗಿದೆ.

ಬೆಂಗಳೂರೂ ಕೂಡ ಬೆಲೆ ಇಳಿಕೆಗೆ ಸಾಕ್ಷಿಯಾಗಿದ್ದು, ಭಾನುವಾರ ಲೀಟರ್‌ ಪೆಟ್ರೋಲ್‌ಗೆ 22 ಪೈಸೆ ಇಳಿಕೆಯಾಗುವ ಮೂಲಕ 69.60 ರೂ.ಗಳಷ್ಟಿದೆ. ಇನ್ನು ಡೀಸೆಲ್‌ ಬೆಲೆಯಲ್ಲೂ 24 ಪೈಸೆ ಇಳಿಕೆಯಾಗಿ 63.43 ರೂ.ಗೆ ಮಾರಾಟವಾಗುತ್ತಿದೆ.

ನವದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ಗೆ 22 ಪೈಸೆ ಕಡಿಮೆಯಾಗುವ ಮೂಲಕ 69.04 ರೂ.ಗಳಷ್ಟಿದ್ದರೆ, ಡೀಸೆಲ್‌ 23 ಪೈಸೆ ಇಳಿಕೆಯಾಗುವ ಮೂಲಕ 63.09 ರೂ.ಗಳಿಗೆ ಮಾರಾಟವಾಗುತ್ತಿದೆ.

ಮುಂಬೈನಲ್ಲಿ ಲೀ. ಪೆಟ್ರೋಲ್‌ 74.67 ರೂ.ಗೆ ಮಾರಾಟವಾಗುತ್ತಿದ್ದು, 22 ಪೈಸೆ ಕಡಿಮೆಯಾಗಿದೆ. ಇನ್ನು ಡೀಸೆಲ್‌ ಲೀ.ಗೆ 24 ಪೈಸೆ ಕಡಿಮೆಯಾಗಿ 66.01 ರೂ.ಗಳಷ್ಟಿದೆ.

ಚೆನ್ನೈನಲ್ಲಿ ಪೆಟ್ರೋಲ್‌ ಲೀ.ಗೆ 23 ಪೈಸೆ ಕಡಿಮೆಯಾಗಿ 71.62 ರೂ.ಗಳಿದ್ದರೆ, ಲೀಟರ್‌ ಡೀಸೆಲ್‌ 66.59 ರೂ.ಗಳಿಗೆ ಮಾರಾಟವಾಗುವ ಮೂಸಕ 25 ಪೈಸೆ ಇಳಿಕೆಯಾಗಿದೆ. ಅದೇ ರೀತಿ ಕೋಲ್ಕತಾದಲ್ಲಿಯೂ 22 ಪೈಸೆ ಕಡಿಮೆಯಾಗಿ 71.15 ರೂ.ಗೆ ಪೆಟ್ರೋಲ್‌ ಮಾರಾಟವಾಗುತ್ತಿದ್ದು, ಡೀಸೆಲ್‌ ಪ್ರತಿ ಲೀಟರ್‌ಗೆ 23 ಪೈಸೆ ಕಡಿಮೆಯಾಗಿ 64.23 ರೂ.ಗಳಷ್ಟಿದೆ. (ಏಜೆನ್ಸೀಸ್)