70ರ ಗಡಿಯೊಳಗೆ ಪೆಟ್ರೋಲ್

ನವದೆಹಲಿ: ದೇಶಾದ್ಯಂತ ಶನಿವಾರವೂ ತೈಲ ಬೆಲೆ ಇಳಿಕೆಯಾಗಿದ್ದು, ಹೊಸ ವರ್ಷದ ಸಂಭ್ರಮದಲ್ಲಿರುವ ಜನಸಾಮಾನ್ಯರಿಗೆ ಖುಷಿ ನೀಡಿದೆ. ಪೆಟ್ರೋಲ್ ಬೆಲೆ ಲೀಟರ್​ಗೆ 30 ಪೈಸೆ ಹಾಗೂ ಡೀಸೆಲ್ ಬೆಲೆ ಲೀಟರ್​ಗೆ 32 ಪೈಸೆ ಇಳಿದಿದೆ.

ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 69.82 ರೂ. ಆಗುವ ಮೂಲಕ 70 ರೂ. ಗಿಂತ ಕೆಳಕ್ಕಿಳಿದಿದೆ. ಡೀಸೆಲ್ 63.67ಕ್ಕೆ ಇಳಿಕೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕ್ರಮವಾಗಿ 69.55 ರೂ. ಮತ್ತು 66.32 ರೂ. ಆಗಿತ್ತು. ಮುಂಬೈನಲ್ಲಿ ಇತ್ತೀಚಿನ ದಿನಗಳಲ್ಲಿ ಮೊದಲ ಬಾರಿಗೆ ಪೆಟ್ರೋಲ್ 74.89 ರೂ.ಗೆ ತಗ್ಗಿದೆ.