ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಮತ್ತೆ ಏರಿಕೆ ! ಗ್ರಾಹಕನ ಜೇಬಿಗೆ ಕತ್ತರಿ

ನವದೆಹಲಿ: ಪೆಟ್ರೋಲ್‌ ಡೀಸೆಲ್‌ ಬೆಲೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದ್ದು, ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌ಗೆ 7 ಪೈಸೆ ಜಾಸ್ತಿಯಾಗಿದ್ದರೆ, ಡೀಸೆಲ್‌ಗೆ 10-11 ಪೈಸೆಯಷ್ಟು ಏರಿಕೆಯಾಗಿದ್ದು, ಗ್ರಾಹಕನ ಜೇಬಿಗೆ ಕತ್ತರಿ ಬೀಳುವಂತಾಗಿದೆ.

ನವದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ಗೆ 07 ಪೈಸೆ ಏರಿಕೆಯಾಗುವ ಮೂಲಕ 72.24 ರೂ.ಗಳಷ್ಟಿದ್ದರೆ, ಡೀಸೆಲ್‌ 10 ಪೈಸೆ ಏರಿಕೆಯಾಗಿ 67.54 ರೂ.ಗಳಿಗೆ ಮಾರಾಟವಾಗುತ್ತಿದೆ. ಈ ಮೂಲಕ ಮತ್ತೆ ಏರಿಕೆಯತ್ತ ಮುಖಮಾಡಿದ್ದು, 80ರ ಗಡಿ ದಾಟುವ ಮುನ್ಸೂಚನೆಯಿದೆ.

ಬೆಂಗಳೂರಿನಲ್ಲೂ ಕೂಡ ಇಂಧನ ಬೆಲೆ ಏರಿಕೆಗೆ ಸಾಕ್ಷಿಯಾಗಿದ್ದು, ಲೀಟರ್‌ ಪೆಟ್ರೋಲ್‌ಗೆ 07 ಪೈಸೆ ಹೆಚ್ಚಾಗಿ, 74.64 ರೂ. ತಲುಪಿದೆ. ಇನ್ನು ಡೀಸೆಲ್‌ ಬೆಲೆಯಲ್ಲೂ 10 ಪೈಸೆ ಏರಿಕೆಯಾಗಿದ್ದು, 69.88 ರೂ.ಗೆ ಮಾರಾಟವಾಗುತ್ತಿದೆ.

ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿ ಪ್ರಕಾರ, ಮುಂಬೈನಲ್ಲಿ ಲೀ. ಪೆಟ್ರೋಲ್‌ 77.87 ರೂ.ಗೆ ಮಾರಾಟವಾಗುತ್ತಿದ್ದು, 07 ಪೈಸೆ ಜಾಸ್ತಿಯಾಗಿದೆ. ಇನ್ನು ಡೀಸೆಲ್‌ ಲೀ.ಗೆ 10 ಪೈಸೆ ಏರಿಕೆಯಾಗಿ 70.86 ರೂ.ಗಳಷ್ಟಿದೆ.

ಚೆನ್ನೈನಲ್ಲಿ ಪೆಟ್ರೋಲ್‌ ಲೀ.ಗೆ 07 ಪೈಸೆ ಏರಿಕೆಯಾಗಿ 75.02 ರೂ.ಗಳಿದ್ದರೆ, ಲೀಟರ್‌ ಡೀಸೆಲ್‌ 71.49 ರೂ.ಗಳಿಗೆ ಮಾರಾಟವಾಗುವ ಮೂಲಕ 11 ಪೈಸೆ ಏರಿಕೆಯಾಗಿದೆ. ಅದೇ ರೀತಿ ಕೋಲ್ಕತಾದಲ್ಲಿಯೂ 07 ಪೈಸೆ ಜಾಸ್ತಿಯಾಗಿ 74.33 ರೂ.ಗೆ ಪೆಟ್ರೋಲ್‌ ಮಾರಾಟವಾಗುತ್ತಿದ್ದು, ಡೀಸೆಲ್‌ ಪ್ರತಿ ಲೀಟರ್‌ಗೆ 10 ಪೈಸೆ ಏರಿಕೆಯಾಗಿ 69.33 ರೂ.ಗಳಷ್ಟಿದೆ. (ಏಜೆನ್ಸೀಸ್)