ಟಿಟಿವಿ ದಿನಕರನ್​ ಮನೆ ಮುಂದೆ ಪೆಟ್ರೋಲ್​​ ಬಾಂಬ್​ ದಾಳಿ: ನಾಲ್ವರಿಗೆ ಗಾಯ

ಚೆನ್ನೈ: ಎಐಎಡಿಎಂಕೆ ನಾಯಕ ಟಿಟಿವಿ ದಿನಕರನ್​ ಮನೆಯ ಮುಂದೆ ಅಪರಿಚಿತ ದುಷ್ಕರ್ಮಿ ನಡೆಸಿದ ಪೆಟ್ರೋಲ್​ ಬಾಂಬ್​ ದಾಳಿಯಿಂದಾಗಿ ನಾಲ್ವರು ಗಾಯಗೊಂಡಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.

ಮನೆಯ ಮುಂದೆ ನಿಂತಿದ್ದ ದಿನಕರನ್​ ಅವರ ಕಾರಿನ ಮೇಲೆ ಪೆಟ್ರೋಲ್​ ಬಾಂಬ್​ ಎಸೆಯಲಾಗಿದ್ದು, ಕಾರು ಚಾಲಕ ಹಾಗೂ ಛಾಯಾಗ್ರಾಹಕ ಸೇರಿದಂತೆ ನಾಲ್ವರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ದಾಳಿಯಿಂದ ಕಾರಿನ ಗ್ಲಾಸ್​ ಚೂರು ಚೂರಾಗಿದೆ.

ಮೂಲಗಳು ಪ್ರಕಾರ, ಹೊಸದಾಗಿ ಬಿಡುಗಡೆಯಾದ ಅಮ್ಮ ಮಕಲ್ ಮುನ್ನೇತ್ರ ಕಳಗಂ ಪಕ್ಷದ ಆಂತರಿಕ ದ್ವೇಷದ ಹಿನ್ನೆಲೆಯಲ್ಲಿ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಪೊಲೀಸ್​ ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)